Left Ad
ಅರ್ಜುನ್ ಯೊಗಿ ,ಚಂದನವನ ಭರವಸೆಯ ನಟ - Chittara news
# Tags

ಅರ್ಜುನ್ ಯೊಗಿ ,ಚಂದನವನ ಭರವಸೆಯ ನಟ

ಕಲಾವಿದರಿಗೆ ಬರವಿಲ್ಲದ ಚೆಂದದ ನೆಲ ಚಂದನವನ
ತುಮಕೂರಿನ ಅರಳಾಳುಸಂದ್ರ ಬಿ,ಇ ಓದಿಕೊಂಡು ಕಲಾವಿದನಾಗಬೇಕೆಂದು ಚಿಕ್ಕಂದಿನಿಂದಲೇ ಶಾಲಾದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾ, ಒಂದೊಂದೇ ಮೆಟ್ಟಿಲು ಹತ್ತುತ್ತಾ, ಸಾಧನೆಯ ಹಾದಿಯಲ್ಲಿ ತಿರುಗಿ ನೊಡದೆ ಸಾಗುತಿರುವ ಅಚ್ಚ ಕನ್ನಡದ ಕಲಾವಿದ ಅರ್ಜುನ್ ಯೊಗಿ.

ಚಂದನವನದ ನೆಲದಲ್ಲಿ ಕಲಾವಿದರಿಗೇನು ಬರವಿಲ್ಲಾ ,ಬರುತ್ತಿರುತ್ತಾರೆ ಹೊಗುತ್ತಿರುತ್ತಾರೆ ,ಕೆಲವೆ ಕೆಲವು ಮಂದಿ ನೆಲೆ ನಿಲ್ಲುತ್ತಾರೆ. ಹಾಗೆ ನೆಲೆ ನಿಂತವರುಗಳಲ್ಲಿ ಕೆಲವರು ನಟನಾ ರಂಗದಲ್ಲಿ ಪಾತ್ರಗಳಲ್ಲಿ ಬೇಯುತ್ತಾ ಬೇಯುತ್ತಾ ಪಕ್ವವಾಗುತ್ತಾ ಹೊಗುತ್ತಾರೆ. ಅಂತಹ ಕಲಾವಿದರುಗಲಲ್ಲಿ ಅರ್ಜುನ್ ಯೊಗಿ ಒಬ್ಬರು. ಇವರು 2010-11ರಲ್ಲಿ ಕಲ್ಯಾಣಿ ಪ್ರದೀಪ್ ರವರ ರಂಗ ತಂಡದಲ್ಲಿ ತರಬೇತಿಯನ್ನು ಪಡೆದುಕೊಂಡು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸುತ್ತಾ ನಟನೆಯಲ್ಲಿ ಪಳಗಿದ್ದಾರೆ. ಸರಿ ಸುಮಾರು 20 ಸೀರಿಯಲ್‌ಗಳಲ್ಲಿ ನಟಿಸಿರುವ ಇವರು ಅಕ್ಕ ದಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಆ ಅಕ್ಕ ಸೀರಿಯಲ್‌ನಲ್ಲಿ ಕನ್ನಡದ ಖ್ಯಾತ ನಿರೂಪಕಿ ಅನುಪಮ ಗೌಡ ನಾಯಕಿಯಾಗಿ, ಅರ್ಜುನ್ ನಾಯಕರಾಗಿ ನಟಿಸಿದ್ದಾರೆ.

ನಟನೆ ನನ್ನ ಮೊದಲ ಪ್ರಾಶಸ್ತ್ಯ :
ಇನ್ನು ಇವರು ರಂಗಭೂಮಿಯಲ್ಲಿದ್ದಾಗಲೇ ಸುಮಾರು ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. 2011ರಲ್ಲಿ ಅಣ್ಣಾಬಾಂಡ್ ಸಿನಿಮಾದಲ್ಲಿ ನಟಿಸಿದರು ಹಾಗೆ ಸುಮಾರು ಸಿನಿಮಾಗಳಲ್ಲಿ ಚಿಕ್ಕ- ಪುಟ್ಟ ಪಾತ್ರಗಳಲ್ಲಿ ನಟಿಸಿ, ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಿರುವಾಗ ದಿನಕರ್ ತೂಗುದೀಪ್ ರವರ ತೂಗುದೀಪ ಪ್ರೊಡಕ್ಷನ್ ನಲ್ಲಿ ಕವಿರಾಜ್ ನಿರ್ದೇಶನದ ‘ಮದುವೆಯ ಮಮತೆಯ ಕರೆಯೊಲೆ’ಗೆ ಆಡಿಷನ್ ಕರೆದಿರುತ್ತಾರೆ, ಆ ಆಡಿಷನ್‌ನಲ್ಲಿ ಬಾಗವಹಿಸಿ ಅಲ್ಲಿ ಸೆಲೆಕ್ಟ್ ಆಗಿ ಮದುವೆಯ ಮಮತೆಯ ಕರೆಯೊಲೆ ಚಿತ್ರದಲ್ಲಿ ಎರಡನೇ ಹೀರೊ ಆಗಿ ನಟಿಸುತ್ತಾರೆ, ಎಂ.ಡಿ.ಕೌಶಿಕ್ ನಿರ್ದೇಶನದ ‘ಸಂಜೆಯಲ್ಲಿ ಅರಳಿದ ಹೂ’ ಅನ್ನುವ ಕಲಾ ಜಾನರ್ ಸಿನಿಮಾದಲ್ಲಿ ನಟಿಸುತ್ತಾರೆ, ಈ ಸಿನಿಮಾ ಮುಗಿದ ನಂತರ ಸೊಲೊ ಹೀರೊ ಆಗಿ ಬಡ್ತಿ ಪಡೆದು ‘ಏನೆಂದು ಹೆಸರಿಡಲಿ’ ಪೂರ್ಣ ಪ್ರಮಾಣದ ಹೀರೊ ಆಗಿ ನಟಿಸಿ ಹೆಸರುಗಳಿಸಿಕೊಳ್ಳುತ್ತಾರೆ. ಆ ಸಿನಿಮಾವಾದ ನಂತರ ನನ್ನ ಪ್ರಕಾರ ಅನ್ನುವ ಮಲ್ಟಿ ಸ್ಟಾರ್ ನಟನೆಯ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ತದನಂತರದಲ್ಲಿ ‘ಚೇಸ್’ ಅನ್ನುವ ಸಿನಿಮಾದಲ್ಲಿ ಎರಡನೆಯ ಹೀರೊ ಆಗಿ ನಟಿಸಿದರು, ಇತ್ತೀಚೆಗೆ ‘ಲಾಂಗ್ ಡ್ರೈವ್ ‘ ಅನ್ನುವ ಸಿನಿಮಾದಲ್ಲಿ ಮತ್ತೇ ಹೀರೊ ಆಗಿ ನಟಿಸಿದರು. ಈಗ ‘ಅನಾವರಣ’ ಅನ್ನುವ ಸಿನಿಮಾ ರೀಲೀಸ್‌ಗೆ ರೆಡಿ ಇದೆ.ಇದಲ್ಲದೆ ಕರ‍್ಸ್ ಕನ್ನಡ ಚಾನಲ್ ನಡೆಸಿಕೊಡುವ ‘ಡ್ಯಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೊ ನಲ್ಲಿ ಫೈನಲಿಸ್ಟ್ ಆಗಿದ್ದರು, ಇಷ್ಟೆ ಅಲ್ಲದೆ ಈ ವರ್ಷದ ಸಿ,ಸಿ,ಎಲ್ ಸುದೀಪ್ ತಂಡದಲ್ಲಿ ಕ್ರಿಕೆಟ್ ಆಡಿದ್ದಾರೆ, ಸದಾ ಚುರುಕಿನಿಂದಿರುವ ವ್ಯಕ್ತಿತ್ವ ಹೊಂದಿರುವ ಈ ಅರ್ಜುನ್ ಒಟ್ಟು ಎಂಟು ಸಿನಿಮಾ ಹತ್ತು ಸೀರಿಯಲ್ಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ನಟನೆ , ಫೈಟ್ಸ್, ಡ್ಯಾನ್ಸ್ ಎಲ್ಲವನ್ನು ಕಲಿತು ಒಂದು ಕಂಪ್ಲೀಟ್ ಪ್ಯಾಕೇಜ್‌ನಲ್ಲಿ ಒಂದು ಒಳ್ಳೆಯ ಬ್ರೇಕ್‌ಗಾಗಿ ಕಾಯುತಿದ್ದಾರೆ.

ಸಿನಿಮಾಗಳೇ ಸಿನಿಮಾಗೆ ಬರಲು ಸ್ಪೂರ್ತಿ.
ಮುಂಗಾರುಮಳೆ ಮತ್ತು ದುನಿಯಾ ನೊಡಿ ಸ್ಪೂರ್ತಿ ಪಡೆದು, ಸಾಮಾನ್ಯನೂ ಸಿನಿಮಾದಲ್ಲಿ ನಿಲ್ಲಬಹುದು, ಗೆಲ್ಲಬಹುದು ಎಂದು ಸಿನಿಮಾಗೆ ಬಂದರು. ಸಿನಿಮಾದಲ್ಲಿ ಕಿರುತೆರಯಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದಿದೆ ಎಂದು ಏನು ಕಲಿತರೇ ಸಿನಿಮಾಗೆ, ನಟನೆಗೆ ಪೂರಕವಾಗುವುದೊ, ಅದನ್ನು ಮಾತ್ರ ಕಲಿತು ಪಾಲಿಸಿಕೊಂಡು ಬಂದಿರುವ ಈ ನಟನಿಗೆ ಕನ್ನಡ ಸಿನಿಮಾದ ಎಲ್ಲಾ ಹಿರಿಯರೆಲ್ಲಾ ನನ್ನ ನಟನೆಗೆ ಗುರುಗಳು ಎಂದು ಹೇಳುತ್ತಾರೆ. ನಾನು ನಟ ಪಾತ್ರ ನನಗೆ ಮತ್ತು ನಟನೆಗೆ ಹೆಸರು ತರುವಂತಿರಬೇಕು ಅಂತಹ ಪಾತ್ರಗಳು ಬಂದಾಗ ನನಗೆ ನಟಿಸಲು ಖುಷಿಯಾಗುತ್ತೆ ಎಂದು ಹೇಳುವ ಅರ್ಜುನ್‌ಗೆ, ಪ್ರತಿಯೊಬ್ಬ ನಟರನ್ನು ದೇವರಂತೆ ಬಾವಿಸುತ್ತಾರೆ, ನನಗೆ ಚಿತ್ರರಂಗದಲ್ಲಿ ಯಾರು ಮೊಸ ಮಾಡಿಲ್ಲಾ ಎಲ್ಲರಿಂದಲೂ ಏನೊ ಒಂದನ್ನು ಕಲಿತಿದ್ದೇನೆ ಎಂದು ಹೇಳುವ ಈ ನಟನ ಕೈಯಲ್ಲಿ ಈಗ ಎರಡರು ಚಿತ್ರಗಳಿವೆ ಮೂರು ಚಿತ್ರಗಳ ಮಾತುಕತೆ ಮುಗಿದಿದೆ, ಇನ್ನೂ ಮಾತುಕತೆಯಗುತ್ತಿರುವ ಚಿತ್ರಗಳೂ ಇವೆ, ಪಾದರತಸದಂತೆ ದುಡಿಯುವ ಈತನ ಶಿಸ್ತು ಮತ್ತು ಇವರ ಡೆಡಿಕೇಶನ್‌ಗೆ ಇವರನ್ನು ಇವತ್ತು ಇಲ್ಲಿವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ ಎಂದು ಹೇಳಿದರೆ ತಪ್ಪೇನಿಲ್ಲಾ.

Spread the love
Translate »
Right Ad