ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮಿಳು ಚಿತ್ರರಂಗದ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ಹಸಮಣೆ ಏರುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.
ಈ ಮಧ್ಯೆ ಮದುವೆಗೆ ಮೂರು ದಿನಗಳು ಬಾಕಿ ಇವೆ ಅನ್ನುವಾಗಲೇ ಕಾರ್ಯಕ್ರಮಗಳು ಆರಂಭ ಆಗಿವೆ. ನಟ ಅರ್ಜುನ್ ಸರ್ಜಾ ತಮ್ಮ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಅವರ ಮದುವೆಯಲ್ಲಿ ಬ್ಯುಸಿಯಿದ್ದಾರೆ. ಮೆಹಂದಿ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.
ನಟ ಹಾಗೂ ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರನ್ನು ಐಶ್ವರ್ಯಾ ಅರ್ಜುನ್ ವಿವಾಹವಾಗಲಿದ್ದಾರೆ. ಹಳದಿ ಕಾರ್ಯಕ್ರಮದೊಂದಿಗೆ ಮದುವೆ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಎರಡೂ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಎರಡೂ ಕಡೆ ಶಾಸ್ತ್ರಗಳು ಆರಂಭ ಆಗಿವೆ.ಇದನ್ನೂ ಓದಿ:ಟ್ರೇಲರ್ನಲ್ಲೇ ನಿರೀಕ್ಷೆ ಹುಟ್ಟಿಸಿದ ಪರಂ; `ಕೋಟಿ’ ಟ್ರೇಲರ್ ಮಿಲಿಯನ್ ವೀಕ್ಷಣೆ
ಕವರ್ ಮೀ ಇನ್ ಸನ್ಶೈನ್ ಥೀಮ್ನಲ್ಲಿ ಹಳದಿ ಕಾರ್ಯಕ್ರಮ ನೆರವೇರಿದೆ. ತೀರಾ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿದ್ದರು. ಹಳದಿ ಬಣ್ಣದ ಸಿಂಪಲ್ ಕುರ್ತಾ ಧರಿಸಿ ಐಶ್ವರ್ಯಾ ಮುದ್ದಾಗಿ ಕಾಣಿಸುತ್ತಿದ್ದರು.
ಹಳದಿ ಕಾರ್ಯಕ್ರಮದ ಬೆನ್ನಲ್ಲಿಯೇ ಚೆನ್ನೈನಲ್ಲಿರುವ ಐಶ್ವರ್ಯಾ ಅರ್ಜುನ್ ಅವರ ನಿವಾಸದಲ್ಲಿಯೇ ಆಪ್ತರಿಗಷ್ಟೇ ಮೀಸಲಾಗಿದ್ದ ಮೆಹಂದಿ ಕಾರ್ಯಕ್ರಮ ನೆರವೇರಿದೆ. ಜೂನ್ 14 ರಂದು ಚೆನ್ನೈನ ಲೀಲಾ ಪ್ಯಾಲೇಸ್ನಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಸಂಜೆ 6.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.ಇದನ್ನೂ ಓದಿ:ಆಯ್ಕೆಯಲ್ಲಿ ಚೂಸಿ.. ಗುಲ್ಟು ನವೀನ್ ಶಂಕರ್ ʻನೋಡಿದವರು ಏನಂತಾರೆʼ ರಿಲೀಸ್ ಗೆ ರೆಡಿ