ಅರ್ಜುನ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿರುವ ನಟ. ಸಿನಿಮಾಗಳಿಗಿಂತ ಜಾಸ್ತಿ ಅವರ ಸಂಬಂಧಗಳು ಮತ್ತು ಮದುವೆಯ ಪ್ಲಾನ್ಸ್ ಸಂಬಂಧವಾಗಿ ನಿರಂತರ ಸುದ್ದಿಯಲ್ಲಿದ್ದಾರೆ. ನಟನ ಮುಂಬರುವ ಚಿತ್ರ ಮೇರೆ ಹಸ್ಬೆಂಡ್ ಕಿ ಬಿವಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅವರು ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ವಿವಾಹದ ಕುರಿತ ಊಹಾಪೋಹಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು ನನ್ನ ಗಮನವು ನನ್ನ ಕೆಲಸದ ಮೇಲೆ ಉಳಿಯಬೇಕು ಎಂದು ಹೇಳಿದರು. ಈ ಮೂಲಕ ಮದುವೆ ಮಾತನ್ನೇ ತಟ್ಟನೆ ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸಮಯ ಬಂದಾಗ ಎಲ್ಲಾ ಪ್ರಮುಖ ಸಂಗತಿ ಶೇರ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಮದುವೆಯ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಿದ ನಟ, ‘ಮದುವೆ ಪ್ಲಾನ್ ಆದಾಗಾ ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆ. ಇಂದು ಚಿತ್ರದ ಬಗ್ಗೆ ಚರ್ಚಿಸಿ ಸಂಭ್ರಮಿಸುವ ದಿನ. ನಾನು ಚಿತ್ರದ ಬಗ್ಗೆ ಮಾತನಾಡಲು ಬಯಸುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ನನಗೆ ಕಂಫರ್ಟಬಲ್ ಅನಿಸಿದಾದ ಮತ್ತು ಸಮಯ ಬಂದಾಗ ನಾನು ಸಾಕಷ್ಟು ಮಾತನಾಡಿದ್ದೇನೆ. ಗಾಸಿಪ್ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ನಟನ ಹೊಸ ಹೇಳಿಕೆಯು ತನ್ನ ವೈಯಕ್ತಿಕ ಜೀವನವನ್ನು ತನ್ನ ವೃತ್ತಿಪರ ಜೀವನದಿಂದ ಪ್ರತ್ಯೇಕವಾಗಿರಿಸುವ ನಿಲುವನ್ನು ಮತ್ತೊಮ್ಮೆ ದೃಢಪಡಿಸಿದೆ. ಅರ್ಜುನ್ ಕಪೂರ್ ಅವರ ಮಾತುಗಳು ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಕುತೂಹಲವನ್ನು ಹುಟ್ಟುಹಾಕಿದವು. ಅವರು ಭವಿಷ್ಯದ ಮದುವೆಯ ಯೋಜನೆ ಬಗ್ಗೆ ಸುಳಿವು ನೀಡುತ್ತಿದ್ದಾರೆಯೇ ಅಥವಾ ಮದುವೆ ಬಗ್ಗೆ ಮಾತಾಡೋದನ್ನೇ ಅವಾಯ್ಡ್ ಮಾಡ್ತಿದ್ದಾರೋ ಎಂದು ಜನ ಕನ್ಫ್ಯೂಸ್ ಆದರು.