ಬಾಲಿವುಡ್ ಹಸಿಬಿಸಿ ಲೇಡಿ ಅಂದ್ರೆ ಅದು ಮಲೈಕಾ ಅರೋರಾ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಆದರೂ ಫಿಟ್ನೆಸ್, ಬ್ಯೂಟಿಯನ್ನು ಸೂಪರ್ ಆಗಿಯೇ ಮೆಂಟೈನ್ ಮಾಡಿದ್ದಾರೆ. ಸದ್ಯ ತಮಗಿಂತ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.
ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಮಲೈಕಾ ಅರೋರಾ ಮತ್ತು ಮಗ ಅರ್ಹಾನ್ ಖಾನ್ ಮಾತುಗಳೇ ವೈರಲ್ ಆಗುತ್ತಿವೆ. ಅರ್ಹಾನ್ ಖಾನ್ ಪಾಡ್ಕಾಸ್ಟ್ ದಮ್ ಬಿರಿಯಾನಿ ಆರಂಭಿಸಿದ್ದು, ಅದಕ್ಕೆ ಅಮ್ಮ ಮಲೈಕಾರನ್ನು ಗೆಸ್ಟ್ ಆಗಿ ಕರೆಸಿದ್ದರು. ಈ ಪಾಡ್ಕಾಸ್ಟ್ನಲ್ಲಿ ಅಮ್ಮ-ಮಗನ ನಡುವೆ ಹಲವಾರು ವಿಷಯಗಳ ಮಾತುಕತೆ ನಡೆದಿದೆ.
ಅದರಲ್ಲಿ ಮಗ ಓಪನ್ ಆಗಿ ಅಮ್ಮನಿಗೆ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ದಿನಾಂಕ, ಸ್ಥಳ ಮತ್ತು ಯಾರ ಜೊತೆ ಎಂದೆಲ್ಲಾ ಕೇಳಿದ್ದಾರೆ.
ಇದಕ್ಕೆ ಕೂಡಲೇ ಮಲೈಕಾ, ಸದ್ಯಕ್ಕೆ ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಮತ್ತು ಬದಲಿಗೆ ಮೆಣಸಿನಕಾಯಿ ಬೇಕಾದ್ರೆ ತಿನ್ನುತ್ತೇನೆ ಎನ್ನುವ ಹಾರಿಕೆ ಉತ್ತರ ಕೊಟ್ಟಿದ್ದಾರೆ.
ನಾನು ಈಗ ನನ್ನ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದೇನೆ. ನಿನ್ನ ಪ್ರಶ್ನೆಗೆ ಉತ್ತರಿಸಲಾರೆ ಎಂದಿದ್ದಾರೆ. ಮಗ ಇಷ್ಟು ಓಪನ್ ಆಗಿ ಪ್ರಶ್ನೆ ಕೇಳಿರುವುದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.