Left Ad
ಬಿಡುಗಡೆಯಾಯ್ತು ಬಹುನಿರೀಕ್ಷಿತ `ಅಭಿರಾಮಚಂದ್ರ' ಚಿತ್ರದ `ಒಂಟಿ ಪಯಣಿಗ' ಹಾಡು - Chittara news
# Tags

ಬಿಡುಗಡೆಯಾಯ್ತು ಬಹುನಿರೀಕ್ಷಿತ `ಅಭಿರಾಮಚಂದ್ರ’ ಚಿತ್ರದ `ಒಂಟಿ ಪಯಣಿಗ’ ಹಾಡು

ಈಗಾಗಲೇ ಸದ್ದಿಲ್ಲದೆ ತನ್ನ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ `ಅಭಿರಾಮಚಂದ್ರ’ದ ಬಿಡುಗಡೆಗೆ ಸೆನ್ಸಾರ್‌ ಮಂಡಳಿಯಲ್ಲಿ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇತ್ತೀಚೆಗಷ್ಟೇ “ಅಭಿರಾಮಚಂದ್ರ’ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಸೆನ್ಸಾರ್‌ನ ಬೆನ್ನಹಿಂದೆಯೇ.. ಚಿತ್ರ ತಂಡ `ಒಂಟಿ ಪಯಣಿಗ’ ಅನ್ನುವ ಹಾಡನ್ನು ರಿಲೀಸ್ ಮಾಡಿದೆ. ವಾಸುಕಿ ವೈಭವ್ ಕಂಠಸಿರಿಯಲ್ಲಿ ಮೂಡಿ ಬಂದ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರವಿ ಬಸ್ರೂರು ಅವರ ಮಗ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿರೋದು ವಿಶೇಷ. ಇನ್ನು ಚಿತ್ರಕ್ಕೆ ನಾಗೇಂದ್ರ ಗಾಣಿಗ, ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂತೋಷ್ ವೆಂಕಿ, ಸಿಂಪಲ್ ಸುನಿ ಸಾಹಿತ್ಯ ರಚಿಸಿದ್ದಾರೆ. ಮೊದಲ ಹಾಡಿಗೆ ಫಿದಾ ಆಗಿರುವ ಪ್ರೇಕ್ಷರು ಚಿತ್ರದ ಇನ್ನಷ್ಟು ಹಾಡುಗಳಿಗೆ ಕಾತುರರಾಗಿರೋದು ಸುಳ್ಳಲ್ಲ.

 

ಇದನ್ನೂ ಓದಿSapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!

ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥಾಹಂದರ ಒಳಗೊಂಡಿರುವ “ಅಭಿರಾಮಚಂದ್ರ’ ಸಿನಿಮಾದಲ್ಲಿ ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿಅಮೆರಿಕದಲ್ಲಿ  ಪಂಚೆಯಲ್ಲಿ ಮಿಂಚಿ, ಭರ್ಜರಿ ಸ್ಟೆಪ್ ಹಾಕಿದ ಶಿವಣ್ಣ! Exclusive video ಇಲ್ಲಿದೆ

ಇನ್ನು “ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ “ಅಭಿರಾಮಚಂದ್ರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. “ಎ.ಜಿ.ಎಸ್ ಎಂಟಟೈನ್ಮೆಂಟ್‌’ ಹಾಗೂ “ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌’ ಬ್ಯಾನರ್‌ನಡಿ ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ“ಉಸಿರೇ ಉಸಿರೇ” ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಸಂದೀಪ್‌ ವಲ್ಲೂರಿ ಛಾಯಾಗ್ರಹಣ, ಸುರೇಶ್‌ ಆರುಮುಗಂ ಸಂಕಲನವಿದೆ. ಕುಂದಾಪುರ, ಬೆಂಗಳೂರು, ಮೈಸೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

 

 

 

Song Lyrics:

ಒಂಟಿ ಪಯಣಿಗ ಈಗ ನಾ

ಆಳ ತಿಳಿಯದ ಕಡಲಲಿ

ಮಳೆಯೆ ಇರದೆ ನೆನೆದೆನಾ

ನನ್ನಾ ಕಣ್ಣಾ ಹನಿಯಲಿ

 

ಪ್ರೀತಿ ತುಕಾ ಹಾಕುತಾ

ಕಳೆದು ಹೋದಾ  ಸ್ನೇಹಿತ

ಮನಸಿಗಾದ ಘಾತುಕ

ಘಾಸಿ  ಮಾಡಿತೆ  ಜೀವಿತ

 

ಇದು ಯಾರಾ ಶಾಪ ಮುನಿಸಿತೋ

ಇದು ಯಾವಾ ಹಣೆಬರಹ

 

ಇದು ನನ್ನಾ ಕಣ್ಣಿನ

ರೆಪ್ಪೆ ನನ್ನಾ ಚುಚ್ಚಿದ ಗಾಯಾ

 

ಇಣುಕಿ ಕಾಡುವ ನೆನಪಿಗೆ

ತಡೆಯ ಗೋಡೆಯು ಬೇಕಿದೆ

 

ಅಳಿಸಿ ಹೋಗದ ಬರಹಕೆ

ಪರದೆ ಎಳೆಯಲೆ ಬೇಕಿದೆ

 

ನನ್ನಾ ನೇರಳೆ ನನ್ನಾ ನೋಡಿ

ಹಂಗಿಸುತಲೆ ಕೂತಿದೆ

 

ಗೂಡು ಸೇರೋ ದಾರಿ ತಿಳಿದು

ಒಂಟಿಯಾಗಿ ಮರುಗಿದೆ

 

ಇದು ಯಾರಾ ಶಾಪಾ ಮುನಿಸಿತೋ

ಇದು ಯಾವಾ  ಹಣೆಬರಹ

ಇದು ನನ್ನಾ ಕಣ್ಣಿನ

ರೆಪ್ಪೆ ನನ್ನಾ ಚುಚ್ಚಿದ ಗಾಯ

 

 

Spread the love
Translate »
Right Ad