ನಟನೆಗೆ ಗುಡ್ ಬೈ, ಸಾವಿರಾರು ಕೋಟಿ ಬ್ಯುಸಿನೆಸ್, ಕಾಲಿಗೆ ಪ್ಯಾರಲಿಸಿಸ್; ಅರವಿಂದ್ ಸ್ವಾಮಿಯ ಏಳು ಬೀಳಿನ ಕಥೆ ‘ರೋಜಾ’, ‘ಬಾಂಬೆ’ಯಂತಹ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರೇಮಿಗಳ ಮನಸೂರೆಗೊಂಡ ನಟ ಅರವಿಂದ್ ಸ್ವಾಮಿ. ಮಣಿರತ್ನಂ ಗರಡಿಯಲ್ಲಿ ಪಳಗಿದ ಈ ಅಪರೂಪದ ನಟನ ತೆರೆ ಹಿಂದಿನ ಬದುಕು ಹಲವು ಏಳು ಬೀಳುಗಳಿಂದ ಕೂಡಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ನಟ ಅರವಿಂದ್ ಸ್ವಾಮಿ- 90ರ ದಶಕದ ಮೋಸ್ಟ್ ಹ್ಯಾಂಡ್ಸಮ್ ನಟ. ‘ಬಾಂಬೆ’, ‘ರೋಜಾ’ ಥರದ ಕಲ್ಟ್ ಕ್ಲಾಸಿಕ್ ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ನಟ ಎನಿಸಿಕೊಂಡಿದ್ದರು ಅರವಿಂದ್ ಸ್ವಾಮಿ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ ತಮಿಳು ಮತ್ತು ಹಿಂದಿಯಲ್ಲೂ ಹೆಸರು ಮಾಡಿದ್ದ ಅರವಿಂದ್ ಸ್ವಾಮಿ 1991ರಿಂದ 2000ರವರೆಗೆ ಮಾತ್ರ ಸಕ್ರಿಯವಾಗಿದ್ದರು. ಆನಂತರ ಅವರು ಸಿನಿಮಾರಂಗದ ಕಡೆಗೆ ಸುಳಿಯಲಿಲ್ಲ. ಮತ್ತೆ ಚಿತ್ರರಂಗಕ್ಕೆ ಮರಳಿದ್ದು 13 ವರ್ಷಗಳ ಬಳಿಕ. ಉತ್ತಮ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಅರವಿಂದ್ ಸ್ವಾಮಿ, ದಿಢೀರನೇ ಚಿತ್ರರಂಗದಿಂದ ದೂರ ಸರಿದ್ದಿದ್ದೇಕೆ? ಅವರ ಸಿನಿ ಜರ್ನಿ ಹೇಗಿತ್ತು? ಪುನಃ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿದ್ದು ಹೇಗೆ? .
ದಳಪತಿಯಲ್ಲಿ ನಟಿಸಿದಾಗ ಅರವಿಂದ್‌ಗೆ 21 ವರ್ಷ ಮಣಿರತ್ನಂ ಅವರ ಸೂಪರ್ ಹಿಟ್ ಸಿನಿಮಾ ‘ದಳಪತಿ’ಯಲ್ಲಿ ನಟಿಸುವ ಮೂಲಕ ಅರವಿಂದ್ ಸ್ವಾಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆಗ ಅವರಿಗೆ 21 ವರ್ಷ ವಯಸ್ಸು. ‘ದಳಪತಿ’ಯಲ್ಲಿ ಪೋಷಕ ಪಾತ್ರ ಮಾಡಿದ್ದ ಅರವಿಂದ್, ಮಣಿರತ್ನಂ ಅವರ ‘ರೋಜಾ’ದಲ್ಲಿ ಹೀರೋ ಆದರು. ಅಲ್ಲಿಂದ ಅವರ ನಸೀಬು ಬದಲಾಯಿತು. 1995ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಮತ್ತೊಂದು ‘ಬಾಂಬೆ’, ಅರವಿಂದ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಡ್ತು. ಹಿಂದಿ ಚಿತ್ರರಂಗಕ್ಕೂ ಅವರು ಕಾಲಿಟ್ಟರು. ಆದರೆ 1998-99ರ ನಂತರ ಅವರ ಸಿನಿಮಾಗಳು ಅಷ್ಟೇನೂ ಯಶಸ್ಸು ಪಡೆಯಲಿಲ್ಲ. ಸಾಲು ಸಾಲು ಸೋಲುಗಳು ಅರವಿಂದ್‌ಗೆ ಎದುರಾದವು.
1997ರಿಂದ 2000ರವರೆಗೂ ಒಟ್ಟು 17 ಸಿನಿಮಾಗಳಲ್ಲಿ ಅರವಿಂದ್ ನಟಿಸಿದ್ದರು. 1998ರ ನಂತರ ಅವರ ಸಿನಿಮಾಗಳು ಅರ್ಧಕ್ಕೆ ನಿಂತವು. ಎಂಜಿನಿಯರ್, ಅಳಗಂ ಪೆರುಮಾಳ್, ಮುಧಲ್ ಮುಧಲಾಗ, ಸಾಸನಂ ಸಿನಿಮಾಗಳು ಅರ್ಧಕ್ಕೆ ನಿಂತವು. ಈ ಸಿನಿಮಾಗಳಲ್ಲಿ ಸಾಸನಂ ಸಿನಿಮಾ ಮಾತ್ರ ಆರೇಳು ವರ್ಷಗಳ ಬಳಿಕ ತೆರೆಗೆ ಬಂದಿತ್ತು. ಮಾಧುರಿ ದೀಕ್ಷಿತ್ ಎದುರು ಅರವಿಂದ್ ಹೀರೋ ಆಗಿ ನಟಿಸಿದ್ದ ಸಿನಿಮಾ ಕೂಡ ರಿಲೀಸ್ ಆಗಲಿಲ್ಲ. ಅರವಿಂದ್ & ಐಶ್ವರ್ಯಾ ರೈ ಮುಖ್ಯಭೂಮಿಕೆಯಲ್ಲಿದ್ದ, ಅನುಪಮ್ ಖೇರ್ ಮೊದಲ ಬಾರಿಗೆ ನಿರ್ದೇಶನ ಮಾಡಬೇಕಿದ್ದ ಚಿತ್ರ ಕೂಡ ನಿಂತುಹೋಯಿತು. 2000ರಲ್ಲಿ ತೆರೆಗೆ ಬಂದ ‘ಅಲೈಪಾಯುದೇ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿ, ಆನಂತರ ನಟನೆಗೆ ಗುಡ್ ಬೈ ಹೇಳಿದ್ದರು
ಅರವಿಂದ್ ಸ್ವಾಮಿ ತಂದೆ ವೆಂಕಟರಮಣ ದೊರೈಸ್ವಾಮಿ ಅವರು ಆ ಕಾಲಕ್ಕೆ ತಮಿಳುನಾಡಿನಲ್ಲಿ ದೊಡ್ಡ ಉದ್ಯಮಿ. ಅವರು 1994ರಲ್ಲಿ ನಿಧನರಾಗಿದರು. ಇತ್ತ ನಟನೆಯಿಂದ ದೂರ ಉಳಿದ ಅರವಿಂದ್ ಸ್ವಾಮಿ, ತಂದೆಯ ಷೇರು ಮತ್ತು ಕನ್ಸಟ್ರಕ್ಷನ್ ಕಂಪನಿಯನ್ನು ಮುನ್ನಡೆಸಲು ಸಿದ್ಧರಾದರು. 2000ರಲ್ಲಿ ವಿ ಡಿ ಸ್ವಾಮಿ ಅವರ ಇಂಟರ್‌ಪ್ರೊ ಗ್ಲೊಬಲ್ ಕಂಪನಿಯ ಅಧ್ಯಕ್ಷರಾಗಿ ಅರವಿಂದ್ ಸ್ವಾಮಿ ಅಧಿಕಾರ ಸ್ವೀಕರಿಸಿದರು. ಉತ್ತಮ ಬೆಳವಣಿಗೆ ಕಂಡ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಹೀವಾಟು ಮಾಡಲು ಆರಂಭಿಸಿತು ಚಿತ್ರರಂಗದಿಂದ ದೂರವಾಗಿ, ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದ ಅರವಿಂದ್‌ಗೆ 2005ರಲ್ಲಿ ಅಘಾತ ಎದುರಾಯಿತು. ರಸ್ತೆ ಅಪಘಾತದಲ್ಲಿ ಬೆನ್ನಿನ ಸ್ಪೈನ್‌ಗೆ ಬಲವಾದ ಪೆಟ್ಟಾಗಿದ್ದರಿಂದ ಕಾಲಿಗೆ ಪಾರ್ಶ್ವವಾಯು ಉಂಟಾಯಿತು. 4-5 ವರ್ಷಗಳ ಕಾಲ ಇದಕ್ಕಾಗಿ ಅರವಿಂದ್ ಸ್ವಾಮಿ ಚಿಕಿತ್ಸೆ ಪಡೆಯಬೇಕಾಯಿತು. ಅವರ ದೇಹತೂಕ ಕೂಡ ಜಾಸ್ತಿ ಆಗಿತ್ತು.
1991ರಲ್ಲಿ ಮಣಿರತ್ನಂ ನಿರ್ದೇಶನದ ‘ದಳಪತಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಅರವಿಂದ್, 2013ರಲ್ಲಿ ಮತ್ತೆ ಮಣಿರತ್ನಂ ಅವರ ‘ಕಡಲ್’ ಚಿತ್ರದ ಮೂಲಕವೇ ಕಮ್‌ಬ್ಯಾಕ್ ಮಾಡಿದರು. 2015ರಲ್ಲಿ ‘ಥನಿ ಒರುವನ್’ ಚಿತ್ರದಲ್ಲಿ ಖಳನಾಗಿ ನಟಿಸಿ, ವೃತ್ತಿ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದರು ಅರವಿಂದ್. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಖಳ ಪಾತ್ರಗಳನ್ನೇ ಮಾಡಿ ಫೇಮಸ್ ಆಗಿದ್ದಾರೆ. ಹೀರೋ- ವಿಲನ್ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈಚೆಗಷ್ಟೇ ಅರವಿಂದ್ ನಟಿಸಿದ್ದ ದ್ವಿಭಾಷಾ ಸಿನಿಮಾ ‘ಕಸ್ಟಡಿ’ ತೆರೆಗೆ ಬಂದಿತ್ತು1994ರಲ್ಲಿ ಗಾಯತ್ರಿ ಎಂಬುವವರ ಜೊತೆ ಅರವಿಂದ್‌ಗೆ ಮದುವೆ ಆಗಿತ್ತು. ಆ ದಂಪತಿಗೆ ಅಧೀರ ಮತ್ತು ರುದ್ರ ಎಂಬಿಬ್ಬರು ಮಕ್ಕಳಿದ್ದಾರೆ. 15 ವರ್ಷಗಳ ಕಾಲ ಜೊತೆಗಿದ್ದ ಈ ದಂಪತಿ 2010ರಲ್ಲಿ ವಿಚ್ಛೇದನ ಪಡೆಯುತ್ತಾರೆ . ಆನಂತರ 2012ರಲ್ಲಿ ಅಪರ್ಣಾ ಮುಖರ್ಜಿ ಜೊತೆಗೆ ಅರವಿಂದ್ ಎರಡನೇ ಮದುವೆ ಆಗಿ,ಈಗ ಮತ್ತೇ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.