ಮಂಜುನಾಥ್ ಬಡಿಗೇರ್ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಚಿತ್ರ’ ಆರಂಭ ‘, ಶ್ರೀ ಕಾಳಿಕಾ ದೇವಿ ಪ್ರೊಡಕ್ಷನ್ಸ ಬ್ಯಾನರ್ ಅಡಿಯಲ್ಲಿ ಸಾಂಭಯ್ಯ ಆಚಾರ್ಯ ನಿರ್ಮಾಣ ದ ಆರಂಭ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆಡೆಯಿತು. ನಿರ್ದೇಶಕರು ಮಾತನಾಡಿ ಕೆಲವು ಸಿನಿಮಾಗಳಲ್ಲಿ ನಿರ್ದೇಶನ ಛಾಯಾಗ್ರಾಹಣ ತಂಡದಲ್ಲಿ ಕೆಲಸ ಮಾಡಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ, ಪಕ್ಷಿಗಳ ರಕ್ಷಣೆಗಾಗಿ ಹೋರಾಡುತಿದ್ದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗುತ್ತದೆ. ಆ ಕೊಲೆಯ ಪ್ರತಿಕಾರಕ್ಕೆ ಇಬ್ಬರು ಯುವಕರು ಮುಂದಾಗುತ್ತಾರೆ. ಅವರ ಹೋರಾಟಕ್ಕೆ ಜಯ ಸಿಗುತ್ತಾ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಇದನ್ನೂ ಓದಿ: FTII ವಿಧ್ಯಾರ್ಥಿ ಜೊತೆ ತಮನ್ನಾ ಹಸೆಮಣೆಗೆ!?
ಈ ಚಿತ್ರದಲ್ಲಿ ನಾಯಕಿಯಾಗಿ ನಿಶ್ಚಿತಾ ಶೆಟ್ಟಿ ನಟಿಸಿದ್ದು, ಜಗನ್ನಾಥ ದಾಸರು ಬಳಿಕ ನಟಿಸುತ್ತಿರುವ ಎರಡನೇ ಚಿತ್ರವಿದು. ಎರಡನೇ ನಾಯಕನಾಗಿ ಪೃಥ್ವಿರಾಜ್ ಅಭಿನಯಿಸಿದ್ದಾರೆ, ಪೊಲೀಸ್ ಪಾತ್ರದಲ್ಲಿ ಗಣೇಶ್ ರಾವ್ ನಟಿಸಿದ್ದು ಇದುವರೆಗೆ 310 ಸಿನಿಮಾಗಳಲ್ಲಿ ನಟಿಸಿದ್ದೇನೆ ಅವುಗಳಲ್ಲಿ 150ಕ್ಕೂ ಅಧಿಕ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದೇನೆ, ಈ ಚಿತ್ರದಲ್ಲಿ ಮೊದಲು ನೆಗಿಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ್ಡು ನಂತರ ನಾಯಕರಿಗೆ ಸಹಾಯ ಮಾಡುವ ಪಾತ್ರ ನನ್ನದಾಗಿರುತ್ತದೆ ಎಂದು ಹೇಳಿಕೊಂಡರು.
ಇದನ್ನೂ ಓದಿ: ಮಾಸ್ ಮಹಾರಾಜ ರವಿತೇಜ ಹೊಸ ಸಿನಿಮಾಗೆ ಈಗಲ್ ಟೈಟಲ್ ಫಿಕ್ಸ್…ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ ಚಿತ್ರ
ಕುಮಾರ್ ಬೋರಕನವರ್, ರಜತಾದ್ರಿ ಪ್ರಶಾಂತಂ, ಪ್ರಿಯಾಂಕಾ, ಕಾಳಚಾರಿ, ಪ್ರಭು ಹಿರೇಮಠ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರದಲ್ಲಿ ಛಾಯಾಗ್ರಾಹಣ ಮುಂಜಾನೆ ಮಂಜು, ಸಂಗೀತ ಅಲೆಕ್ಸ ಮಾಡಿದ್ದು, ಸಂಕಲನ ಆಚಾರ್ಯ ಗುರು ಮಾಡಿದ್ದು ಚಿತ್ರವನ್ನು ಜೂಲೈ ನಲ್ಲಿ ಬಿಡುಗಡೆ ಮಾಡಲು ಸಕಲ ಸಿದ್ಧತೆಯನ್ನು ಚಿತ್ರ ತಂಡ ಮಾಡಿಕೊಳ್ಳುತ್ತಿದೆ.