ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅವರು ನಟಿಸಿದ ಒಂದೊಂದು ಐಕಾನಿಕ್ ಸಿನಿಮಾ ರಿಲೀಸ್ ಆಗುತ್ತಿದೆ. 49ನೇ ಬರ್ತ್‌ಡೇಗೆ ಮರು ಬಿಡುಗಡೆ ಕಂಡಿದ್ದ ‘ಜಾಕಿ’ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳು ಮತ್ತೆ ಬಿಗ್ ಸ್ಕ್ರೀನ್ ಮೇಲೆ ‘ಜಾಕಿ’ ನೋಡಿ ಸಂಭ್ರಮಿಸಿದ್ದರು. ಅದೇ ಜೋಷ್‌ನಲ್ಲಿಯೇ 50ನೇ ಹುಟ್ಟು ಹಬ್ಬಕ್ಕೆ ನಾಯಕನಾಗಿ ಚೊಚ್ಚಲ ಸಿನಿಮಾ ‘ಅಪ್ಪು’ ಕೂಡ ಅದ್ದೂರಿಯಾಗಿ ರಿಲೀಸ್ ಆಗಿದೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಈ ಸಿನಿಮಾವನ್ನು ನೋಡಬೇಕು ಅಂತ ಆಸೆ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಅಪ್ಪು’ ರಿಲೀಸ್ ಮಾಡಿದ್ದರು. ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್‌ನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೊಸ ಸಿನಿಮಾ ಹೇಗೆ ರಿಲೀಸ್ ಆಗುತ್ತೋ ಅಷ್ಟೇ ಗ್ರ್ಯಾಂಡ್ ಆಗಿ ‘ಅಪ್ಪು’ ಸಿನಿಮಾವನ್ನು ರಿಲೀಸ್ ಮಾಡಿದ್ದರು.
ಪುನೀತ್ ರಾಜ್‌ಕುಮಾರ್ ಜೊತೆ ರಕ್ಷಿತಾ ಪ್ರೇಮ್, ಶ್ರೀನಿವಾಸ್ ಮೂರ್ತಿ, ಅವಿನಾಶ್ ಅಂತಹ ಕಲಾವಿದರು ಈ ಸಿನಿಮಾಗೆ ಮೆರುಗು ನೀಡಿದ್ದರು. ಗುರುಕಿರಣ್ ಸಂಗೀತ ‘ಅಪ್ಪು’ ಸಿನಿಮಾದ ಮತ್ತೊಂದು ಹೈಲೈಟ್. ಪುನೀತ್ ಡ್ಯಾನ್, ಆಕ್ಷನ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿತ್ತು. ಅದರಲ್ಲೂ ಪುರಿ ಜಗನ್ನಾಥ್ ನಿರ್ದೇಶನ ಪುನೀತ್ ರಾಜ್‌ಕುಮಾರ್ ಅನ್ನು ಪವರ್‌ಸ್ಟಾರ್ ಮಾಡಿತ್ತು. 23 ವರ್ಷಗಳ ಹಿಂದೆ ಇದ್ದ ಅದೇ ಕ್ರೇಜ್ ಈಗಲೂ ಕಾಣಿಸುತ್ತಿದೆ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳನ್ನು ಮೊದಲ ದಿನ ‘ಅಪ್ಪು’ ಎಷ್ಟು ಗಳಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶಿಸಿದ ‘ಅಪ್ಪು’ ಸಿನಿಮಾ ಕರ್ನಾಟದಾದ್ಯಂತ 153ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಕನ್ನಡದ ರಿ ರಿಲೀಸ್ ಸಿನಿಮಾಗಳ ಇತಿಹಾಸದಲ್ಲಿಯೇ ಈ ಸಿನಿಮಾ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿದೆ. ಬೆಂಗಳೂರು, ಮೈಸೂರು,ಹೊಸಪೇಟೆ ಭಾಗಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಗಳಾಗಿವೆ. ಹೀಗಾಗಿ ಕರ್ನಾಟಕದ ವಿತರಕರ ವಲಯದಲ್ಲಿ ಹೊರ ಹುಮ್ಮಸ್ಸು ಮೂಡಿದೆ.
‘ಅಪ್ಪು’ ಸಿನಿಮಾಗೆ ಬೆಂಗಳೂರಿನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರು, ಹೊಸಪೇಟೆ, ಬಳ್ಳಾರಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮೊದಲ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ, ವೀರೇಶ್, ಸಿದ್ಧಲಿಂಗೇಶ್ವರ ಅಂತಹ ಅಪ್ಪಟ ಕನ್ನಡದ ಸಿನಿಮಾ ಮಂದಿರಗಳಲ್ಲಿ 3 ರಿಂದ 4 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಹಾಗೇ ಮಂಡ್ಯದ ಗಾಯತ್ರಿ, ಬಳ್ಳಾರಿಯ ನಟರಾಜ ಕಾಂಪ್ಲೆಕ್ಸ್, ತುಮಕೂರಿನ ಗಾಯತ್ರಿ ಚಿತ್ರಮಂದಿರಗಳಲ್ಲಿ ರೆಸ್ಪಾನ್ಸ್ ಸಖತ್ ಆಗಿದೆ ಎಂಬ ವರದಿ ವಿತರಕರ ವಲಯದಿಂದ ಬಂದಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಿಲೀಸ್ ಆಗಿರುವ ಸಿನಿಮಾ ಮೊದಲ ದಿನ ಸುಮಾರು 60 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿ ರೇಂಜ್‌ನಲ್ಲಿ ಕಲೆಕ್ಷನ್ ಆಗಬಹುದೆಂದು ವಿತರಕರ ವಲಯ ಅಭಿಪ್ರಾಯ ಪಟ್ಟಿದೆ. ಸದ್ಯಕ್ಕೆ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ. ಒಟ್ಟು ನಾಲ್ಕು ದಿನ ‘ಅಪ್ಪು’ ನಾಲ್ಕರಿಂದ ಐದು ಕೋಟಿ ಕಲೆಕ್ಷನ್ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಹಾಕಿದ್ದಾರೆ.