ಸುರೇಶ್ ಪ್ರೊಡಕ್ಷನ್ ಕಂಬೈನ್ಸ್ ಅಡಿಯಲ್ಲಿ ಸಿದ್ದಗೊಳ್ಳುತ್ತಿರುವ ’ಅಪ್ಪ ಇಸ್ ಗ್ರೇಟ್’ ಚಿತ್ರದ ಮುಹೂರ್ತ ಸಮಾರಂಭವು ಬಾಪೂಜಿನಗರದ ಬೀರೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜಿ.ರಾಜಶೇಖರ್ ಕಥೆ, ಸಂಭಾಷಣೆ ಬರೆದು ಬಂಡವಾಳ ಹೂಡುತ್ತಿರುವುದು ಎಂಟನೇ ಪ್ರಯತ್ನ. ಗೆಳಯ ರಾಮನಗರದ ಸುರೇಶ್.ಎಸ್.ಹೆಚ್ ನಿರ್ಮಾಣದಲ್ಲಿ ಪಾಲುದಾರರು. ಹಿರಿಯ ನಟ ಹೊನ್ನವಳ್ಳಿಕೃಷ್ಣ ಪುತ್ರ ಶ್ರೀಕಾಂತ್‌ಹೊನ್ನವಳ್ಳಿ ಮೂರನೇ ಬಾರಿ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ.
ಸಿನಿಮಾ ಕುರಿತು ಹೇಳುವುದಾದರೆ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಿಸುತಾರೆ. ಆದರೆ ಈ ಚಿತ್ರದಲ್ಲಿ ಬೆಳದು ನಿಂತ ಮಗನೇ ಅಪ್ಪನಿಗೆ ಮದುವೆ ಮಾಡಿಸಲು ಸೈಕಲ್ ಹೊಡೆಯುವುದೇ ಕಥೆಯ ವಿಶೇಷ. ಅಮ್ಮ ಸಾಯುವಾಗ ಮನೆಯಲ್ಲಿ ಹೆಣ್ಣು ದಿಕ್ಕಿಲ್ಲ. ಅದರಿಂದ ಅವರಿಗೆ ಹೇಗಾದರೂ ಹೆಣ್ಣನ್ನು ನೋಡಿ ಮದುವೆ ಮಾಡಿಸು ಎಂದು ಭಾಷೆ ತೆಗೆದುಕೊಂಡಿರುತ್ತಾರೆ. ಅದರಂತೆ ಮಗನಾದವನು ಅಮ್ಮನ ಆಸೆಯನ್ನು ನೆರವೇರಿಸುತ್ತಾನಾ? ಇಲ್ಲಾವಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಜತೆಗೆ ತಂದೆ ಮಗನ ಬಾಂದವ್ಯವನ್ನು ತೋರಿಸಲಾಗುತ್ತಿದೆ.
ವಿಧುರ ಶ್ರೀಮಂತ ಉದ್ಯಮಿಯಾಗಿ ಶೋಭರಾಜ್, ಮಜಾಭಾರತ ಖ್ಯಾತಿಯ ಜ್ಯೂ.ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್ ನಾಯಕ. ಮಂಡ್ಯಾ ಮೂಲದ ಪ್ರೇರಣ ಅನಾಥ ಹುಡುಗಿಯಾಗಿ ನಾಯಕಿ. ಉಳಿದಂತೆ ಮೀಸೆ ಆಂಜನಪ್ಪ, ಹೊನ್ನವಳ್ಳಿಕೃಷ್ಣ, ರಾಧಿಕಾ, ಸೌಮ್ಯಾ, ಅಮೂಲ್‌ಗೌಡ, ಶಿಲ್ಪ, ಕವನ, ಚಂದ್ರಪ್ರಭಾ, ಪ್ರೇಮಾರಾಥೋಡ್, ಶಿವಕುಮಾರಆರಾಧ್ಯ ಮುಂತಾದವರು ನಟಿಸುತ್ತಿದ್ದಾರೆ. ಶಿವಲಿಂಗೇಗೌಡರ ಸಾಹಿತ್ಯದ ಮೂರು ಹಾಡುಗಳಿಗೆ ಮುರಳಿಧರ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ವಿನಸ್‌ನಾಗರಾಜಮೂರ್ತಿ, ಸಂಕಲನ ಅರುಣ್ ಅವರದಾಗಿದೆ. ಚಿತ್ರೀಕರಣವನ್ನು ಬೆಂಗಳೂರು, ಹಾಡಿಗೆ ಕಾರವಾರ ಕಡೆ ಹೋಗುವ ಇರಾದೆ ಇದೆ..