Sandalwood Leading OnlineMedia

‘ಅಪರೂಪ’ ಸಿನಿಮಾದ ಟ್ರೇಲರ್ ರಿಲೀಸ್..ಹೊಸಬರಿಗೆ ಡಾಲಿ ಧನಂಜಯ್ ಸಾಥ್..*

ಮಹೇಶ್ ಬಾಬು ನಿರ್ದೇಶನ ಸಿನಿಮಾದ ಅಪರೂಪ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಜುಲೈ 14ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅರಸು, ಆಕಾಶ್ ನಂತಹ ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಮಹೇಶ್ ಬಾಬು ಅಪರೂಪ ಚಿತ್ರದ ಮೂಲಕ ಮತ್ತೊಂದು ಫ್ರೆಶ್ ಅಂಡ್ ಫೀಲ್ ಸ್ಟೋರಿ ಉಣಬಡಿಸಲಿದ್ದಾರೆ. ಬಿಡುಗಡೆ ಹೊಸ್ತಿನಲ್ಲಿರುವ ಈ ಸಿನಿಮಾದ ಟ್ರೇಲರ್ ನ್ನು ನಟ ರಾಕ್ಷಸ ಡಾಲಿ ಧನಂಜಯ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಷಯ ಕೋರಿದ್ದಾರೆ.

ಇನ್ನೂ ಓದಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ.

ಡಾಲಿ ಧನಂಜಯ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಮಹೇಶ್ ಬಾಬು ಅವರು ತುಂಬಾ ಹಿಟ್ ಗಳನ್ನು ಕೊಟ್ಟಿದ್ದಾರೆ. ಅಪರೂಪ ಇನ್ನೊಂದು ಹಿಟ್ ಸೇರಲಿ. ಸುಘೋಷ್ ಸ್ಕ್ರೀನ್ ಪ್ರೆಸೆನ್ಸ್ ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ತುಂಬಾ ಪ್ರಿಪೇರ್ ಆಗಿ ಬಂದಿದ್ದಾರೆ. ಕನ್ನಡ ಇಂಡಸ್ಟ್ರೀಗೆ ಅವರಿಗೆ ಸ್ವಾಗತ. ಹೃತಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್, ಡ್ಯಾನ್ಸ್ ಕೂಡ ಚೆನ್ನಾಗಿದೆ. ಸುಗ್ಗಿ ಸಿನಿಮಾ ದೊಡ್ಡ ಸುದ್ದಿಯಾಗಲಿ. ಸಿನಿಮಾ ಒಳ್ಳೆ ಸುಗ್ಗಿಯಾಗಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಇನ್ನೂ ಓದಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ.

ಮಹೇಶ್ ಬಾಬು ಮಾತನಾಡಿ, ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿರುವ ಧನಂಜಯ್ ಅವರಿಗೆ ಧನ್ಯವಾದಗಳು. ಅಪರೂಪ ಅನ್ನೋದು ಲವ್ ಸ್ಟೋರಿ. ನಾನು ಹೆಚ್ಚಾಗಿ ಲವ್ ಸ್ಟೋರಿ ಸಿನಿಮಾಗಳನ್ನೇ ಮಾಡಿದ್ದೇನೆ. ಈ ಚಿತ್ರದಲ್ಲಿ ವಿಲನ್ ಗಳಿಲ್ಲ. ಹೀರೋ-ಹೀರೋಯಿನ್ ಗಳೇ ವಿಲನ್ ಗಳು. ಉಳಿದಿದ್ದು ತೆರೆಮೇಲೆ ನೋಡಿ. ಹೊಸ ನಾಯಕ ನಾಯಕಿ ಮೇಲೆ ನಿಮ್ಮ ಹಾರೈಕೆ ಇರಲಿ.  ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹ ಕೊಡಿ ಎಂದರು.

ಇನ್ನೂ ಓದಿ Karnataka Budget 2023: ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು? ಸಿಗದೇ ಹೋಗಿದ್ದೇನು?  complete details  ಇಲ್ಲಿದೆ

ನಾಯಕ ಸುಘೋಷ್ ಮಾತನಾಡಿ, ಟ್ರೇಲರ್ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ಜುಲೈ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹೊಸಬರಿಗೆ ಈಗಿನ ಟೈಮ್ ನಲ್ಲಿ ಗೆಲ್ಲುವುದು ತುಂಬಾ ಕಷ್ಟವಿದೆ. ಜನ ಅಷ್ಟಾಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿಲ್ಲ. ಈ ಚಿತ್ರದಿಂದ ನಾನು ತುಂಬಾ ಕಲಿತ್ತಿದ್ದೇನೆ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿ ಎಂದು ತಿಳಿಸಿದರು.

ಇನ್ನೂ ಓದಿ *ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಬಿಡುಗಡೆಯಾಯಿತು “ಪರಂವಃ” ಚಿತ್ರದ ಮೂರನೇ ಹಾಡು* .

ಅಪರೂಪ ಸಿನಿಮಾ ಮೂಲಕ ಸುಘೋಷ್ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕ ನಾಯಕಿಯ ನಡುವೆ ಬರುವ ಅಹಂ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಮಹೇಶ್ ಬಾಬು ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದ ಸುಘೋಷ್ ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಶೋಕ್ , ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು,  ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್ ಪೈ ಸಂಗೀತಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ ಅಪರೂಪ ಸಿನಿಮಾ ಜುಲೈ 14ಕ್ಕೆ ತೆರೆಗೆ ಬರುತ್ತಿದೆ.

 

 

Share this post:

Related Posts

To Subscribe to our News Letter.

Translate »