Sandalwood Leading OnlineMedia

Apaayavide Eccharike Review: ಸಿನಿಮಾ ಶುರುವಾದ ಮೇಲೆ ಮೊಬೈಲು ಮರೆತುಬಿಡುತ್ತದೆ, ಎಚ್ಚರಿಕೆ!

 

ಕನ್ನಡದಲ್ಲಿ ಹಾರರ್ ಥ್ರಿಲ್ಲರ್ ಕಥೆಯುಳ್ಳ ಸಿನಿಮಾಗಳನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದರೂ, ಬಿಡುಗಡೆಯಾಗುವ ಈ ಜಾನರ್‌ನ ಸಿನಿಮಾಗಳ ಸಂಖ್ಯೆ ಅಷ್ಟಕ್ಕಷ್ಟೆ. ಈಗ ಈ ಜಾಗವನ್ನು ತುಂಬಲು  `ಅಪಾಯವಿದೆ ಎಚ್ಚರಿಕೆ’ ಸಿನಿಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕನ್ನಡದಲ್ಲಿ ಉತ್ತಮ ಚಿತ್ರಗಳು ತರೆ ಕಾಣುವುದಿಲ್ಲ ಅನ್ನುವುದಕ್ಕೆ `ಅಪಾಯವಿದೆ ಎಚ್ಚರಿಕೆ’ ಚಿತ್ರತಂಡ ತಮ್ಮ ಕ್ರಿಯಾಶೀಲತೆಯಿಂದ ಸಮರ್ಪಕ ಉತ್ತರ ನೀಡಿದೆ. ಹಾಗಿದ್ದರೆ `ಅಪಾಯವಿದೆ ಎಚ್ಚರಿಕೆ’ ಮೂಲಕ ಚಿತ್ರ ತಂಡ ಹೇಳ ಹೊರಟಿರುವುದಾದರೂ ಏನು? ಡಿಗ್ರಿ ಕೂಡ ಪಾಸ್ ಮಾಡಲು ಸಾಧ್ಯವಾಗದೇ ಸೋಮಾರಿಗಳಾಗಿ, ಇನ್ನೊಬ್ಬರನ್ನು ಯಾಮಾರಿಸುತ್ತಾ ತಿರುಗಾಡಿಕೊಂಡಿರುವ ಮೂವರು ವಿದ್ಯಾರ್ಥಿಗಳಾದ ಸೂರಿ (ವಿಕಾಶ್), ಪೆಟ್ಗೆ (ರಾಘವ್), ಗಾಬ್ರಿಗೆ (ಮಿಥುನ್) ಕೈಯಲ್ಲಿ ಕಾಸಿಲ್ಲದೇ ಹೋದರು, ಸಾಲ ಮಾಡಿಯಾದ್ರು ದಮ್ಮು&ಎಣ್ಣೆಯ ಚಟ. ಅಶಿಸ್ತೇ ಇವರ ಪರಮಶತ್ರು ಹಾಗೂ ಪರಮ ಮಿತ್ರ! ಈ ಮೂವರ ಜೀವನದ ಪರಮ ಗುರಿ ಒಂದೇ, ಅದು ಯಾವ ದಾರಿಯಲ್ಲಾದರೂ ದುಡ್ಡು ಮಾಡುವುದು. ದುಡ್ಡು ಮಾಡಲು ಇವರು ಕಂಡುಕೊಳ್ಳುವ ದಾರಿ ಹಲವು ಅಚ್ಚರಿಗಳಿಗೆ, ಅನುಮಾನಗಳಿಗೆ ರಹದಾರಿ ಮಾಡಿಕೊಡುತ್ತದೆ. ಇಂತಹ ಕೂತೂಹಲಕಾರಿ, ಬೆಚ್ಚಬೀಳಿಸುವ ಕಥೆಯನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಕಚಗುಳಿ ಹಿಡುವ ಸಿಚುವೇಶನ್ ಕಾಮಿಡಿ ಪಂಚ್ ಜೊತೆ ರಸವತ್ತಾಗಿ ಉಣಬಡಿಸಿದ್ದಾರೆ.

 

 

ತೀರ್ಥಹಳ್ಳಿಯವರಾದ ಅಭಿಜಿತ್ ಇಡೀ ತೀರ್ಥಹಳ್ಳಿಯನ್ನೇ ಚಿತ್ರದ ಬಹುದೊಡ್ಡ ಪಾತ್ರವನ್ನಾಗಿಸಿ ಗೆದ್ದಿದ್ದಾರೆ. ತೀರ್ಥಹಳ್ಳಿ ಸುತ್ತಮುತ್ತವೇ ಇಡೀ ಸಿನಿಮಾದ ಶೂಟಿಂಗ್ ನಡೆದಿದ್ದು, ಅಲ್ಲಿನ ಲೋಕಲ್ ಭಾಷೆ ಚಿತ್ರದ ಬಹುದೊಡ್ಡ ಆಸ್ತಿ. ಟೈಟಲ್ ಕಾರ್ಡ್ನಿಂದಲೇ ಕುತೂಹಲ ಮೂಡಿಸುವ ಚಿತ್ರ,  ಹಾರರ್ ಅನುಭವವನ್ನು ನೀಡುವಲ್ಲಿ ಸಫಲವಾಗುತ್ತದೆ. `ಅಪಾಯವಿದೆ ಎಚ್ಚರಿಕೆ’, ಹಾರರ್ ಥ್ರಿಲ್ಲರ್ ಜಾನರ್‌ಗೆ ತಕ್ಕಂತೆ ಸಿನಿಮಾ ವೇಗವಾಗಿದ್ದು, ರೋಚಕವಾಗಿ ಮೂಡಿಬಂದಿದೆ. ಸೆಕೆ0ಡ್ ಹಾಫ್‌ನ ಟ್ವಿಸ್ಟ್ & ಟರ್ನ್ಗಳು ನಿಜಕ್ಕೂ ಪ್ರೇಕ್ಷಕರನ್ನು ಒಂದು ಕ್ಷಣವೂ ಮೊಬೈಲ್ ನೋಡಲು ಬಿಡುವುದಿಲ್ಲ. ಕಾಡುಕಳ್ಳರಿಗೆ ದೆವ್ವದ ಮುಖಾಂತರ ಛಡಿಯೇಟು ಕೊಟ್ಟಿರುವ ನಿರ್ದೇಶಕರ ಆಶಯ ಮೆಚ್ಚುವಂತದ್ದು. ಚಿತ್ರದಲ್ಲಿ ಮ್ಯಾಜಿಕ್ ಬಿಟ್ಟು ಲಾಜಿಕ್ ಹುಡುಕುವವರಿಗೆ ನಿರ್ದೇಶಕರು ಫ್ಲ್ಯಾಶ್‌ಬ್ಯಾಕ್ ಕಥೆಯ ಮೂಲಕ ಉತ್ತರ ನೀಡಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣವನ್ನು ಸುನಾದ್ ಗೌತಮ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಎರಡೂ ಕೆಲಸವನ್ನೂ ಒಬ್ಬರೇ ಮಾಡಿರುವುದು ಸಿನಿಮಾಗೆ ದೊಡ್ಡ ಪ್ಲಸ್‌ಪಾಯಿಂಟ್ ಆಗಿದೆ. ಶೂಟಿಂಗ್ ಸಮಯದಲ್ಲೇ ಹಿನ್ನಲೇ ಸಂಗೀತವನ್ನು ಗಮನದಲ್ಲಿಟ್ಟುಕೊಂಡೇ ಚಿತ್ರೀರಿಸಿದ್ದು ಪ್ರತೀ ಫ್ರೇಮ್ ಅನ್ನೂ ಶ್ರೀಮಂತಗೊಳಿಸಿದೆ. ನಿರ್ದೇಶಕರ ಸಾಹಿತ್ಯ ಮತ್ತು ಸಂಭಾಷಣೆ ಚಿತ್ರದ ಜೀವಾಳವಾಗಿದ್ದು, ನೆಟಿವಿಟಿಯ ಟಚ್ ನೀಡಿದೆ. ಆಶೋಕ್ ಮತ್ತು ಜೈ ಸುಬ್ರಮಣ್ಯ ಸಾಹಸ, ಮಂಜುನಾಥ್ ಗೌಡ ಕಲಾನಿರ್ದೇಶನ ಚಿತ್ರದ ಕಥೆಗೆ ಪೂರಕವಾಗಿದೆ. ಇನ್ನು, ಎಡಿಟರ್ ಹರ್ಷಿತ ಪ್ರಭು ಕತ್ತರಿ ಪ್ರಯೋಗ ಸಿನಿಮಾಕ್ಕೊಂದು ಪರ್‌ಫೆಕ್ಟ್ ಚೌಕಟ್ಟು ನೀಡಿದೆ.   

 

ಸೂರಿ ಪಾತ್ರದಲ್ಲಿ ನಟ ವಿಕಾಶ್ ಉತ್ತಯ್ಯ ಅಭಿನಯ ಮನ ಸೂರೆಗೊಳ್ಳುತ್ತದೆ. ಈ ಮೂಲಕ ಕನ್ನಡಕ್ಕೊಬ್ಬ ಹೊಸ ಪ್ರತಿಭಾವಂತೆ ನಾತಕ ನಟನ ಎಂಟ್ರಿಯಾಗಿದೆ. ಸ್ನೇಹಿತರ ಪಾತ್ರ ಮಾಡಿರುವ ಮಿಥುನ್ ಮತ್ತು ರಾಘವ್, ಸೂರಿಗೇ ಪೈಪೋಟಿ ಕೊಟ್ಟಿದ್ದಾರೆ. ಗಾಬ್ರಿಯಾಗಿ ಮಿಥುನ್ ಗಾಬರಿಯೇ ಕಾಮಿಡಿಯಾಗಿದೆ. ಕಥೆಗೆ ಮೆಗಾ ಟ್ವಿಸ್ಟ್ ನೀಡುವ ದೇವಿಕಾ ಪಾತ್ರದಲ್ಲಿ ನಟಿ ಹರಿಣಿ ಶ್ರೀಕಾಂತ್ ನಟನೆ ಚೆನ್ನಾಗಿದೆ. ನಾಯಕಿ ರಾಧಾ ಭಗವತಿ ಸಿಕ್ಕ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ರುದ್ರನಾಗಿ ದೇವ್, ಕಲಾವತಿಯಾಗಿ ನವ್ಯಾ ಇಷ್ಟವಾಗುತ್ತಾರೆ. ನಟ ಅಶ್ವಿನ್ ಹಾಸನ್ ಮತ್ತೊಮ್ಮೆ ಗಮನಸೆಳೆಯುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, matured ಆದ ಅಭಿನಯ ನೀಡಿದ್ದಾರೆ. ಹಾರರ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಅಪಾಯವಿದೆ ಎಚ್ಚರಿಕೆ ಅದ್ಭುತ ಮನೆರಂಜನೆಯನ್ನು ನೀಡುವುದರಲ್ಲಿ ಸಂಶಯವಿಲ್ಲ. ಕೊನೆಯದಾಗಿ ಹೊಸಬರನ್ನು ನಂಬಿ ಬಂಡವಾಳ ಹೂಡಿದ ಮಂಜುನಾಥ್ ಮತ್ತು ಪೂರ್ಣಿಮಾ ಅವರಿಗೆ ಕನ್ನಡ ಪ್ರೇಕ್ಷಕರ ಪರವಾಗಿ ಅಭಿನಂದನೆಗಳು. 

 

Share this post:

Translate »