ನಟಿ ಮೇಘಾ ಶೆಟ್ಟಿ ʻಜೊತೆ ಜೊತೆಯಲಿʼಧಾರಾವಾಹಿ ಮೂಲಕವೇ ಸಿಕ್ಕಾಪಟ್ಟೆ ಖ್ಯಾತಿ ಪಡೆದವರು. ಇದರಲ್ಲಿ ಅನು ಸಿರಿಮನೆಯಾಗಿ ಕಿರುತೆರೆಯಲ್ಲಿ ಮಿಂಚಿದರು. ಅವರ ತಾಯಿ ಪುಷ್ಪಾ ಪಾತ್ರದಲ್ಲಿ ಅಪೂರ್ವ ಒಳ್ಳೆ ಅಭಿನಯ ಮಾಡಿ, ಕಿರುತೆರೆ ಪ್ರಿಯರ ಮನಗೆದ್ದಿದ್ದರು. ಸದಾ ಸೀರೆಯಲ್ಲಿ, ಮಿಡಲ್ ಕ್ಲಾಸ್ ಗೃಹಿಣಿಯಾಗಿಯೇ ನಟಿಸಿದ್ದರು.
ಸದ್ಯಕ್ಕೆ ಜೀ ಕನ್ನಡದಲ್ಲಿ ಬರುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲೂ ಅಂತದ್ದೇ ಪಾತ್ರ ಮಾಡುತ್ತಿದ್ದಾರೆ. ಆದರೆ ಇದೀಗ ಇದ್ದಕ್ಕಿದ್ದ ಹಾಗೇ ಅವರ ವೇಷಭೂಷಣ ಬದಲಾಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಅಪೂರ್ವ ಶ್ರೀ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದುಕೊಂಡ ಅಪೂರ್ವ ಶ್ರೀ ತಮ್ಮ ಮಗಳ ಜೊತೆಗೆ ಕ್ರೂಸ್ ವೆಕೇಷನ್ ಹೋಗಿದ್ದಾರೆ. ಇತ್ತೀಚೆಗಷ್ಟೇ ನಟಿ ಅಪೂರ್ವ ಶ್ರೀ ಲಕ್ಷದ್ವೀಪಕ್ಕೆ ತೆರಳಿದ್ದರು. ಇದೀಗ ಕ್ರೂಸ್ ಟ್ರೂರ್ ಕೈಗೊಂಡಿದ್ದಾರೆ ಅಪೂರ್ವ ಶ್ರೀ. ಕ್ರೂಸ್ ವೆಕೇಷನ್ನಲ್ಲಿ ನಟಿ ಅಪೂರ್ವ ಶ್ರೀ ಹಾಟ್ ಅವತಾರ ತಾಳಿದ್ದಾರೆ.
ನಟಿ ಅಪೂರ್ವ ಶ್ರೀ ಅವರ ಹಾಟ್ ಅವತಾರ ಕಂಡ ನೆಟ್ಟಿಗರು ‘’ವಯಸ್ಸು ಕೇವಲ ನಂಬರ್ ಅಷ್ಟೇ’ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಸುಂದರಿ ಗಂಡ ಸದಾನಂದ’, ‘ದಾಸ’, ‘ಜ್ಯಾಕಿ’, ‘ಅಣ್ಣಾ ಬಾಂಡ್’, ‘ಮಿಲನ’, ‘ಸುಂಟರಗಾಳಿ’ ಮುಂತಾದ ಸಿನಿಮಾಗಳಲ್ಲಿ ಅಪೂರ್ವ ಶ್ರೀ ನಟಿಸಿದ್ದಾರೆ.