ಸಿನಿಮಾ: ಅಂಶು.
ನಿರ್ಮಾಣ: ಗ್ರಹಣ ಎಲ್‌ಎಲ್‌ಪಿ.
ನಿರ್ದೇಶನ: ಎಂ.ಸಿ. ಚೆನ್ನಕೇಶವ.
ಮುಖ್ಯ ಭೂಮಿಕೆ: ನಿಶಾ ರವಿಕೃಷ್ಣನ್.
ರೇಟಿಂಗ್: 4/5
‘ಗಟ್ಟಿಮೇಳ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಗಟ್ಟಿ ನೆಲೆ ಕಂಡುಕೊAಡ ನಟಿ ನಿಶಾ ರವಿಕೃಷ್ಣನ್ ‘ಅಂಶು’ ಸಿನಿಮಾ ಸಿನಿಮಾದ ಅಭೂತಪೂರ್ವ ನಟನೆಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಒಂದು ಭಿನ್ನ ಪ್ರಯೋಗದ ‘ಅಂಶು’ವಿನಲ್ಲಿ ನಿಶಾ ಪಾತ್ರವೇ ಹೈಲೈಟ್ ಆಗಿದ್ದು, ಸಿನಿಮಾದ ಚಿತ್ರಕಥೆ ಅಚ್ಚರಿ ಮೂಡಿಸುತ್ತದೆ. ಏಕತಾನತೆಯ ಸಿನಿಮಾ ಮೇಕಿಂಗ್‌ನಿAದ ದೂರ ಇದ್ದು ನಿರ್ದೇಶಕ ಚೆನ್ನ, ಕನ್ನಡಕ್ಕೆ ಚಿನ್ನದಂತಹ ಸಿನಿಮಾ ನೀಡಿದ್ದಾರೆ. ಹೊಸ ಸಾಧ್ಯತೆಯನ್ನು ತೆರೆಯ ಮೇಲೆ ನಿರೂಪಿಸಿವುದರ ಮೂಲಕ, `ಹೀಗೂ ಸಿನಿಮಾ ಮಾಡಬಹುದು’ ಎಂಬವುದನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ನಿಶಾ ರವಿಕೃಷ್ಣನ್ ನಟಿಸಿರುವ ‘ಅಂಶು’ ಸಿನಿಮಾದಲ್ಲಿ ಸಾಕಷ್ಟು ವಿಭಿನ್ನ ಪ್ರಯೋಗ ಮಾಡಲಾಗಿದೆ. ಆ ಕಾರಣದಿಂದ ಈ ಸಿನಿಮಾ ತುಸು ಡಿಫರೆಂಟ್ ಎನಿಸಿಕೊಳ್ಳುತ್ತದೆ. ಮಾಮೂಲಿ ಸಿನಿಮಾಗಳನ್ನು ನೋಡಿ ಬೇಸರ ಆಗಿರುವವರು ‘ಅಂಶು’ ಸಿನಿಮಾ ನೋಡಿದರೆ ಬೇರೆ ರೀತಿಯ ಫೀಲ್ ನೀಡುತ್ತದೆ. ಯಾಕೆಂದರೆ, ಈ ಸಿನಿಮಾದಲ್ಲಿ ಕಾಣಿಸುವುದು ಒಂದೇ ಪಾತ್ರ ಆದರೆ ಕಥೆಯ ವ್ಯಾಪ್ತಿ ದೊಡ್ಡದು, ಹೇಳಿರುವ ಸಂಗತಿ ಈ ಕಾಲದ ಅನಿವಾರ್ಯತೆ!

READ MORE; Ibbani Tabbida Ileyali review: ಬೆಳ್ಳಿತೆರೆಯಲ್ಲಿ ಬೆಳ್ಳಿಯಪ್ಪ `ಮ್ಯಾಜಿಕ್’
ಒಂದೇ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ‘ಅಂಶು’ ಸಿನಿಮಾದ ಕಥೆಯನ್ನು ನಿರೂಪಿಸಲಾಗಿದೆ. ನಿಶಾ ರವಿಕೃಷ್ಣನ್ ಅವರು ಆ ಪಾತ್ರವನ್ನು ಮಾಡಿದ್ದಾರೆ. ಹಾಗಂತ ಬೇರೆ ಪಾತ್ರಗಳು ಇಲ್ಲ ಅಂತೇನೂ ಅಲ್ಲ. ಆದರೆ ಆ ಪಾತ್ರಗಳ ಮುಖ ಕಾಣಿಸುವುದಿಲ್ಲ. ಇಡೀ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್ ಮಾತ್ರ ಪ್ರೇಕ್ಷಕರಿಗೆ ಕಾಣಿಸುತ್ತಾರೆ. ಉಳಿದ ಪಾತ್ರಧಾರಿಗಳು ಧ್ವನಿಗಷ್ಟೇ ಸೀಮಿತ. ಆದರೆ ಒಂದೇ ಪಾತ್ರವೆಂದು ಸಿನಿಮಾ ಎಲ್ಲಿಯೂ ಸ್ವಲ್ಪವೂ ಲ್ಯಾಗ್ ಅನ್ನಸಿವುದಿಲ್ಲ, ಅಷ್ಟು ಚುರುಕಾಗಿದೆ ಚಿತ್ರದ ನರೇಶನ್. ‘ಅಂಶು’ ಸೈಕಾಲಾಜಿಕಲ್ ಕಥಾವಸ್ತು ಇರುವ ಸಿನಿಮಾವಾಗಿದ್ದು, ನಿರ್ದೇಶಕರು ಹಲವು ರೂಪಕಗಳ ಮೂಲಕ ಕಥೆ ಹೇಳಿದ್ದಾರೆ. ಕಥೆಯ ಕೊನೆಯಲ್ಲಿ ಯಾರೂ ಉಹಿಸಲೂ ಸಾಧ್ಯವೇ ಇಲ್ಲದ ಟ್ವಿಸ್ಟ್ ಇದ್ದು, ಡಿಫರೆಂಟ್ ಆದಂತಹ ಮಾರ್ಗವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಯಾವುದೇ ಕಾಮಿಡಿ, ರೊಮ್ಯಾನ್ಸ್, ಫೈಟ್ ಯಾವುದೂ ಇಲ್ಲದೆ ಪ್ರೇಕ್ಷಕರನ್ನು ಸೀಟ್‌ನ ತುದಿಯಲ್ಲಿ ಕೂತು ನೋಡುವಂತೆ ಮಾಡಿರೋದು ನಿಜಕ್ಕೂ ಇಡೀ ಸಿನಿಮಾ ತಂಡದ ಸಿನಿಮಾ ಪ್ರೇಮಕ್ಕೆ ಹಿಡಿದ ಕೈ ಗನ್ನಡಿ.

READ MORE; Bhairathi Ranagal Review: ರಣಗಲ್ ತುಂಬಾ ಶಿವ ತಾಂಡವ!
‘ಅಂಶು’ ಪ್ರೇಕ್ಷಕರ ತಲೆಗೆ ಯಾವುದೇ ರೀತಿಯ ಹುಳ ಬಿಡದೇ, ಹೆಣ್ಣು ಕುಲದ ಮೇಲಿನ ದಬ್ಬಾಳಿಕೆ ನಡೆÀಸುವ ಪುರುಷ ಸಮಾಜವನ್ನು ಕೊಳಕು ಮುಖವನ್ನು ತರೆದಿಡುತ್ತದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ರೀತಿ ನೋಡಿಕೊಂಡು ಹೋಗದೆ ‘ಅಂಶು’ವನ್ನು ನೋಡಲು ಒಂದು ಸೀರೀಯಸ್ ಆದ ಮನಸ್ಥಿತಿ ಬೇಕಾಗುತ್ತದೆ. ಸಿನಿಮಾ ನೋಡಿ ಹೊರಬಂದ ಮೇಲೆಯೂ ಕೆಲವು ಸಂಗತಿಗಳು ಕಾಡುತ್ತಲೇ ಇರುತ್ತವೆ. ಈ ಕಥೆಯ ಮೂಲಕ ನಿರ್ದೇಶಕರು ಜಾತಿ ಪಿಡುಗು, ಹೆಣ್ಣು ಭ್ರೂಣ ಹತ್ಯೆ ಮುಂತಾದ ವಿಷಯಗಳನ್ನು ಅಚ್ಚುಕಟ್ಟಾಗಿ ಒಂದೇ ಪಾತ್ರದ ಮೂಲಕ ಪೋಣಿಸಿದ್ದಾರೆ. ಒಂದು ಥ್ರಿಲ್ಲರ್ ಫೀಲ್‌ನಲ್ಲಿ ಸಾಗುವ ಸಿನಿಮಾ ಕೊನೆಯವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದೆ. ನಿಶಾ ರವಿಕೃಷ್ಣನ್ ಅವರ ಟನೆ ನಿಜಕ್ಕೂ ಪ್ರೇಕ್ಷಕನಿಗೆ ಒಂದು ಅನೂಹ್ಯವಾದ ನಶೆ ಏರಿಸುತ್ತದೆ. ಕೆ.ಸಿ.ಬಾಲಸರಂಗನ್ ಸಂಗೀತ, ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ರಿಕ್ಕಿ ಮಾರ್ಟಿನ್ ಸಂಕಲನ ಚಿತ್ರಕ್ಕಿದ್ದು, ಹೀಗೆ ಚಿತ್ರ ಎಲ್ಲಾ ವಿಭಾಗದಲ್ಲೂ ಪ್ರತಿಭಾವಂತರ ದಂಡೇ ತುಂಬಿದೆ. ಇನ್ನು, ಜಸ್ಕರಣ್ ಸಿಂಗ್ ಹಾಡಿರುವ `ನೀನು ನಂಬೋ ನಾಳೆ’ ಚಿತ್ರದ ಓಘವನ್ನು ಹೆಚ್ಚಿಸಿದೆ.

READ MORE; Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!
ಇನ್ನು, ಸಿನಿಮಾಕ್ಕೆ ಯಾವುದೇ ಯೋಗ್ಯತೆ ಇಲ್ಲದೇ, ಬರೀ ಅಬ್ಬರದ ಪ್ರಚಾರದ ಮೂಲಕ ಪ್ರೇಕ್ಷಕನನ್ನು ದಾರಿ ತಪ್ಪಿಸಿಯಾದರೂ ಚಿತ್ರಮಂದಿರಕ್ಕೆ ಕರೆಸಲೇ ಬೇಕು ಅನ್ನುವ ಸಿನಿಮಾ ತಂಡದ ನಡುವೆ, `ಅಂಶು’ ಚಿತ್ರ ಎಲ್ಲಾ ಯೋಗ್ಯತೆ ಇದ್ದರೂ ಮಿನಿಮಮ್ ಪ್ರಚಾರವೂ ಇಲ್ಲದೆ ಜನರಿಗೆ ತಲುಪ್ಪುತ್ತಿಲ್ಲ. ಕನ್ನಡ ಪ್ರೇಕ್ಷಕ ಮನಸ್ಸು ಮಾಡಿದರೆ `ಅಂಶು’ನAತಹ ಅದ್ಭುತ ಚಿತ್ರಕ್ಕೆ ಸಿಗಬೇಕಾದ ನ್ಯಾಯವನ್ನು ಕಲ್ಪಿಸಬಹುದು.
by ; B,NAVEEN KRISHNA
