Sandalwood Leading OnlineMedia

ಬೆಂಗಾವಲು ಪಡೆಗೆ ಢಿಕ್ಕಿ ಹೊಡೆದಿದ್ದ ಯಶ್ ಅಭಿಮಾನಿ ಸಾವು

ಬೆಂಗಳೂರು: ಯಾಕೋ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಗೆ ಬರ್ತ್ ಡೇ ಹ್ಯಾಪಿಯಾಗಿರಲಿಲ್ಲ. ಅವರ ಹುಟ್ಟುಹಬ್ಬ ದಿನವೇ ನಾಲ್ವರು ಜೀವ ಕಳೆದುಕೊಳ್ಳುವಂತಾಗಿದೆ.
ನಿನ್ನೆಯಷ್ಟೇ ಅವರ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದರು. ಇವರ ಸಾವಿನ ಸುದ್ದಿಯಿಂದ ಬೇಸರಗೊಂಡ ಯಶ್ ವಿದೇಶದಿಂದ ಗದಗ ಜಿಲ್ಲೆಗೆ ಆಗಮಿಸಿ ಮೃತ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು.
ಆದರೆ ಯಶ್ ಬರುತ್ತಿದ್ದ ಸುದ್ದಿ ತಿಳಿದು ಸಾವಿರಾರು ಜನರು ಗ್ರಾಮಕ್ಕೆಹರಿದುಬಂದಿದ್ದರು. ಅಭಿಮಾನಿ ಕುಟುಂಬಸ್ಥರನ್ನು ಭೇಟಿ ಮಾಡಲು ಬಂದಾಗ ಮತ್ತೊಂದು ದುರಂತವಾಗಿದೆ.
ಯಶ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಬೆಂಗಾವಲು ವಾಹನಕ್ಕೆ ದ್ವಿ ಚಕ್ರವಾಹನದಲ್ಲಿ ತೆರಳುತ್ತಿದ್ದ ಅಭಿಮಾನಿ ನಿಖಿಲ್ ಢಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

Share this post:

Related Posts

To Subscribe to our News Letter.

Translate »