Sandalwood Leading OnlineMedia

‘ಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ಮತ್ತೊಂದು ವಿಭಿನ್ನ ಸಿನಿಮಾ ‘ಫ್ಯಾಮಿಲಿ ಡ್ರಾಮ’

2024ರ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಈಗ ಎಲ್ಲಿ ನೋಡಿದರೂ ರಾಜಕೀಯದ್ದೆ ಸುದ್ದಿ ಸದ್ದು. ಈ ನಡುವೆ ಸಿನಿಮಾ ಕ್ಷೇತ್ರ ಕೊಂಚ ಮಂಕಾಗಿದೆ. ಚುನಾವಣಾ ಬಿಸಿಯ ನಡುವೆಯೂ ‘ಫ್ಯಾಮಿಲಿ ಡ್ರಾಮ’ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದ್ಯಾವ ಫ್ಯಾಮಿಲಿ ಡ್ರಾಮ ಅಂತೀರಾ? ಸ್ಯಾಂಡಲ್‌ವುಡ್ ನಲ್ಲಿ ರಿಲೀಸ್‌ಗೆ ಸಿದ್ದವಾಗುತ್ತಿರುವ ಹೊಸ ಸಿನಿಮಾ. ಸದ್ಯ ಸಿನಿಮಾತಂಡ ಟ್ರೈಲರ್ ಮೂಲಕ ಸಿನಿಮಾ ಅಭಿಮಾನಿಗಳ ಮುಂದೆ ಬಂದಿದೆ. ಸಾಕಷ್ಟು ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಫ್ಯಾಮಿಲಿ ಡ್ರಾಮ’.

 

 

ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಈ ಟ್ರೈಲರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾದ ಕಂಟೆಂಟ್ ಜೊತೆಗೆ ಟೆಕ್ನಿಕಲ್ ವಿಚಾಗಳು ಸಹ ಗಮನ ಸೆಳೆಯುತ್ತಿದೆ. ಯುವ ಪ್ರತಿಭೆ ಆಕರ್ಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾವಿದು.

 

ಆಕರ್ಷ್‌ಗೆ ಇದು ಮೊದಲ ನಿರ್ದೇಶನದ ಸಿನಿಮಾ. ಹಾಗಂತ ಸಿನಿಮಾರಂಗ ಹೊಸದೇನಲ್ಲ. ಕಾಂತಾರ ಸ್ಚಾರ್ ರಿಷಬ್ ಶೆಟ್ಟಿ ಅವರ ಟೀಮ್‌ನಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ನಿರ್ದೇಶಕ. ಸದ್ಯ ರಿಲೀಸ್‌ಗೆ ರೆಡಿಯಾಗಿರುವ ‘ಲಾಫಿಂಗ್ ಬುದ್ದ’ ಸಿನಿಮಾದಲ್ಲಿ ಆಕರ್ಷ್ ಕೆಲಸ ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಶಾರ್ಟ್ ಫಿಲ್ಮ್‌ಗಳನ್ನು ಮಾಡಿದ್ದಾರೆ.

 

 

 

ಇನ್ನೂ ಈ ಸಿನಿಮಾದಲ್ಲಿ ಆಚಾರ್ ಆಂಡ್ ಕೋ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ, ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ನಟಿಸಿರುವ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯ ಅಮರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

 

ಆಚಾರ್ ಅಂಡ್ ಕೋ ಬಳಿಕ ಸಿಂಧು ಒಪ್ಪಿಕೊಂಡ ಚಿತ್ರ ಇದಾಗಿದೆ. ‘ಫ್ಯಾಮಿಲಿ ಡ್ರಾಮ’ ಡಾರ್ಕ್ ಕಾಮಿಡಿ ಸಿನಿಮಾ. ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯೇ ಫ್ಯಾಮಿಲಿ ಡ್ರಾಮ. ಸಾಕಷ್ಟು ಹೊಸತನದೊಂದಿಗೆ, ವಿಭಿನ್ನವಾಗಿ, ಕ್ರಿಯೇಟಿವ್ ಆಗಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಆಕರ್ಷ್ ಅಂಡ್ ಟೀಂ.

 

 

 

ಚಿತ್ರದ ಟ್ರೈಲರ್ ಎಷ್ಟು ಗಮನ ಸೆಳೆಯುತ್ತಿದೆಯೂ ಹಾಗೆ ಪೋಸ್ಚರ್ ಕೂಡ ಅಷ್ಟೇ ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಫಿಲಿಫೈನ್ಸ್ ನ ಕ್ರಿಯೇಟಿವ್ ಡಿಸೈನರ್ ಬಳಿ ಫ್ಯಾಮಿಲಿ ಡ್ರಾಮ ಚಿತ್ರದ ಪೋಸ್ಟರ್ ಅನ್ನು ಡಿಸೈನ್ ಮಾಡಿಸಿದ್ದು ವಿಶೇಷವಾಗಿದೆ.

 

ರೆಟ್ರೋ ಶೈಲಿಯಲ್ಲಿ ಡಿಸೈನ್‌ಗಳನ್ನು ನೋಡಬಹುದು. ಇನ್ನೂ ವಿಶೇಷ ಎಂದರೆ ಸಿನಿಮಾದ ಸಂಗೀತ ಕೂಡ ರೆಟ್ರೋ ಶೈಲಿಯಲ್ಲಿ ಇದೆ. ಇವತ್ತಿನ ಕಾಲಘಟ್ಟದ ಕಥೆಯಾದರೂ ಸಂಗೀತ ರೆಟ್ರೋ ಶೈಲಿಯಲ್ಲಿ ಇರುವುದು ಈ ಸಿನಿಮಾದ ವಿಶೇಷವಾಗಿದೆ. ಅಂದಹಾಗೆ ಚಿತ್ರಕ್ಕೆ ಚೇತನ್ ಅಮಯ್ಯ ಸಂಗೀತ ಸಂಯೋಜನೆ ಮಾಡದ್ದಾರೆ.

Share this post:

Related Posts

To Subscribe to our News Letter.

Translate »