ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಮಾತು ಬಾಲಿವುಡ್ ಅಂಗಳದಲ್ಲಿದೆ. ಈಚೆಗೆ ಇವರಿಬ್ಬರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರನೊಬ್ಬರು ಫಾಲೋ ಮಾಡುತ್ತಿರುವುದು ಈ ಎಲ್ಲ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದತ್ತಿದೆ. ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ ಅವರು ಸುತ್ತಾಟ ನಡೆಸುತ್ತಿರುವುದಾಗಿಯೂ ಸುದ್ದಿಯಿದೆ.
ಈ ಹಿಂದೆ ಬಾಲಿವುಡ್‌ನ ಕ್ಯೂಟ್ ಬೆಡಗಿ ಶ್ರದ್ಧಾ ಅವರ ಹೆಸರು ಹಲವರ ಜತೆ ತಳುಕು ಹಾಕಿತ್ತು. ವರುಣ್ ಧವನ್, ಆದಿತ್ಯಾ ರಾಯ್ ಕಪೂರ್, ಇತ್ತೀಚೆಗೆ ರಾಹುಲ್ ಎಂಬುವರ ಜೊತೆ ಶ್ರದ್ಧಾ ಡೇಟಿಂಗ್‌ನಲ್ಲಿದ್ದರು ಎಂಬ ಸುದ್ದಿಯಿತ್ತು. ಇದೀಗ ತನಗಿಂತ 8 ವರ್ಷ ಚಿಕ್ಕವ ಕ್ರಿಕೆಟಿಗ ಶ್ರೇಯಸ್ ಅಯ್ಯರ ಜತೆ ಹೆಸರು ಸದ್ದು ಮಾಡುತ್ತಿದೆ.
ಮೊಬೈಲ್ ಫೋನ್‌ನ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದ ಇವರಿಗೆ ಶೂಟಿಂಗ್ ವೇಳೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ. ಇನ್ನೂ ಬಾಲಿವುಡ್ ನಟಿಯರ ಹಾಗೂ ಕ್ರಿಕೆಟ್ ಪಟುಗಳ ನಡುವಿನ ಪ್ರೀತಿ, ಮದುವೆ ಇದು ಮೊದಲೇನಲ್ಲ. ಇದೀಗ ಇವರಿಬ್ಬರ ನಡುವಿನ ಪ್ರೇಮಾ ಸದ್ಯ ಹಾಟ್ ಟಾಫಿಕ್ ಆಗಿದೆ.