ರಮೇಶ್ ಅರವಿಂದ್ ಅಭಿನಯದ `ಶಿವಾಜಿ ಸುರತ್ಕಲ್’ ಭಾಗ ೧&೨ ಚಿತ್ರದ ನಿರ್ಮಾಪಕ, `ದಿ ಡೆಸ್ಟೀನೊ’ ಕರ್ನಾಟಕದ ಬಹುದೊಡ್ಡ ಫಿಲಂ ಸಿಟಿ ಹಾಗೂ ಕರ್ನಾಟಕದ ಅತೀ ದೊಡ್ಡ ಹೆರಿಟೇಜ್ ರೆಸಾರ್ಟ್ `ಕಲಾ ನಿವಸ್ಥಿ’ಯ ಮಾಲೀಕರಾದ ಅನೂಪ್ ಗೌಡ ಅವರ ವಿವಾಹ ಇತ್ತೀಚಿಗೆ ಸ್ಪರ್ಶ್ ಮಸಾಲ ಕಂಪನಿಯ ಮಾಲೀಕರಾದ ದೀಕ್ಷ ಕುಮಾರ್ ಅವರ ಜೊತೆ ನೆರವೇರಿತು. ಮಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಿತು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಾಹ ಮಹೋತ್ಸವ ನೆರವೇರಿತು. ಅನೇಕ ಉದ್ಯಮಿಗಳು ಹಾಗೂ ರಮೇಶ್ ಅರವಿಂದ್ ಸೇರಿದಂತೆ `ಶಿವಾಜಿ ಸುರತ್ಕಲ್’ ಚಿತ್ರತಂಡದ ಸದಸ್ಯರು ಈ ಸಮಾರಂಭದಲ್ಲಿ ಭಾಗಿಯಾಗಿ ವಧುವರರಿಗೆ ಶುಭ ಹಾರೈಸಿದರು. `ಚಿತ್ತಾರ’ ಬಳಗ ಈ ನವ ಜೋಡಿಗೆ ಶುಭ ಹಾರೈಸುತ್ತದೆ.