ಚಿತ್ರರಂಗದಲ್ಲಿ 16ನೇ ವಸಂತಕ್ಕೆ ಹೆಜ್ಜೆಯಿಟ್ಟಿರೋ ರಾಗನಿಧಿ ಅನೂಪ್ ಸೀಳಿನ್, ಇದೇ ಮೊದಲ ಬಾರಿಗೆ ಚೊಚ್ಚಲ ಮ್ಯೂಸಿಕ್ ವಿಡಿಯೋ ಹಾಡೊಂದನ್ನ ಮಾಡಿದ್ದಾರೆ.
ಈ ಹಾಡನ್ನ ಅನೂಪ್ ಸೀಳಿನ್ ಮಡದಿ ಕೃತಿ ಶೆಟ್ಟಿಯವ್ರು ಲಾಂಚ್ ಮಾಡಿದ್ರು.ಪ್ರೀತಿ ಅನ್ನೊ ದ್ಯಾವ್ರು ಅನ್ನೋ ಶೀರ್ಷಿಕೆಯ ಈ ಹಾಡಿಗೆ ರಾಗ ಸಂಯೋಜಿಸಿ,ಹಾಡೋದ್ರ ಜೊತೆ ಖುದ್ದು ತಾವೇ ಅಭಿನಯಿಸಿದ್ದಾರೆ.ನಾಲ್ಕಾರು ಆಯಾಮಗಳಲ್ಲಿ ಕಾಣೋ ಕೇಳೋ ಪ್ರೀತಿ ಅನ್ನೊ ದ್ಯಾವ್ರು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಶ್ರೀಮತಿ ಕೃತಿ ಬಿ ಶೆಟ್ಟಿ ಈ ವಿಡಿಯೋ ಆಲ್ಬಂ ಹಾಡನ್ನ ನಿರ್ಮಿಸಿದ್ದಾರೆ.
ಸುಜ್ಞಾನ್ ಮೂರ್ತಿ ಛಾಯಾಗ್ರಹಣ ಕಾರ್ತಿಕ್ ಬಿ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದು, ಮನು ಎಸ್ ಗೌಡ ಸಂಕಲನ ಮಾಡಿದ್ದಾರೆ.ಜೆಪಿ ಮ್ಯೂಸಿಕ್ ಗೆ ದಶಕದ ಸಂಭ್ರಮ ತಮ್ಮ ಮ್ಯೂಸಿಕ್ ಲೇಬಲ್ ಜೆಪಿ ಮ್ಯೂಸಿಕ್ ಹತ್ತನೇ ವರ್ಷಕ್ಕೆ ಕಾಲಿಟ್ಟ ಈ ಘಳಿಗೆಯಲ್ಲಿ ಅನೂಪ್ ವೃತ್ತಿ ಬದುಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಇಂಥ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಈ ಪ್ರಯೋಗವನ್ನ ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ಯುಟ್ಯೂಬ್ ಜೊತೆಗೆ ಎಲ್ಲಾ ಮ್ಯೂಸಿಕ್ ಪ್ಲಾಟ್ ಫಾರಾಂಗಳಲ್ಲೂ ಈ ಹಾಡಿನ ಆಡಿಯೋ ಲಭ್ಯವಿದೆ.