Sandalwood Leading OnlineMedia

ಸೌತ್ ಸೆನ್ಸೇಷನಲ್ ಡೈರೆಕ್ಟರ್ ಜೊತೆ ರಣಬೀರ್ ಕಪೂರ್ ಪ್ಯಾನ್ ಇಂಡಿಯಾ ಸಿನಿಮಾ -‘ಅನಿಮಲ್’ ಫಸ್ಟ್ ಲುಕ್ ರಿಲೀಸ್*

ಸೌತ್ ಸಿನಿ ದುನಿಯಾದಲ್ಲಿ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ‘ಕಬೀರ್ ಸಿಂಗ್’ ಮೂಲಕ ಬಾಲಿವುಡ್ ಅಂಗಳದಲ್ಲೂ ಛಾಪು ಮೂಡಿಸಿದ್ದಾರೆ. ಇದೀಗ ಬಿ ಟೌನ್ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೂಡಿ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಅನಿಮಲ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದ ಮೂಲಕ ರಣಬೀರ್ ಕಪೂರ್ ಆಕ್ಷನ್ ಹೀರೋ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ‘ಅನಿಮಲ್’ ಚಿತ್ರದ ಫಸ್ಟ್ ಲುಕ್ ಚಿತ್ರತಂಡ ರಿಲೀಸ್ ಮಾಡಿದ್ದು, ರಣಬೀರ್ ನಯಾ ಅವತಾರ ಕಂಡು ಬಿಟೌನ್ ಮಂದಿ ಥ್ರಿಲ್ ಆಗಿದ್ದಾರೆ.

‘ಪೆಪೆ’ ಯಲ್ಲಿ ವಿನಯ್ ರಾಜ್ ಕುಮಾರ್ ನಯಾ ಅವತಾರ

‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಹಿಂದೆಂದೂ ಕಾಣದ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮೊದಲ ಬಾರಿ ರಣಬೀರ್ ಕಪೂರ್ ರನ್ನು ಆಕ್ಷನ್ ಹೀರೋ ಆಗಿ ತೆರೆ ಮೇಲೆ ಡಿಫ್ರೆಂಟ್ ಆಗಿ ತೋರಿಸಲು ಸಜ್ಜಾಗಿದ್ದಾರೆ. ರಕ್ತಸಿಕ್ತವಾಗಿರೋ ದೇಹ, ಉದ್ದವಾದ ಕೂದಲು, ಕೈಯಲ್ಲಿ ಕೊಡಲಿ ಹಿಡಿದು ಸಿಗರೇಟ್ ಸೇದುತ್ತಿರುವ ರಣಬೀರ್ ರಗಡ್ ಲುಕ್ ‘ಅನಿಮಲ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರ ಎನ್ನೋದನ್ನು ಖಾತ್ರಿ ಪಡಿಸಿದೆ. ರಣಬೀರ್ ಅಭಿಮಾನಿಗಳು ಕೂಡ ಫಸ್ಟ್ ಲುಕ್ ಕಂಡು ಸಖತ್ ಥ್ರಿಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

 

ನಿರ್ದೇಶಕ ಶಿವರಾಜ್ ಸಕ್ರೆ ಚಿತ್ರ್ಕಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್- ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಟೈಟಲ್ ಲಾಂಚ್

ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರ್ತಿರುವ ‘ಅನಿಮಲ್’ ಚಿತ್ರದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಿಲ್ ಕಪೂರ್ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಉಳಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿರಲಿದ್ದು ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ಫಸ್ಟ್ ಲುಕ್ ಜೊತೆಗೆ ಸಿನಿಮಾ ಬಿಡುಗಡೆ ಡೇಟ್ ಕೂಡ ರಿವೀಲ್ ಮಾಡಿರುವ ಚಿತ್ರತಂಡ ಆಗಸ್ಟ್ 11, 2023ಕ್ಕೆ ‘ಅನಿಮಲ್’ ಸಿನಿಮಾವನ್ನು ಹಿಂದಿ, ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿದ್ದವಾಗುತ್ತಿರುವ ಈ ಚಿತ್ರವನ್ನು ಟಿ ಸಿರೀಸ್, ಬದ್ರಕಾಳಿ ಪಿಕ್ಚರ್ಸ್ ನಡಿ ಭೂಷಣ್ ಕುಮಾರ್, ಪ್ರನಯ್ ರೆಡ್ಡಿ ವಾಂಗ ನಿರ್ಮಾಣ ಮಾಡುತ್ತಿದ್ದಾರೆ.

Share this post:

Related Posts

To Subscribe to our News Letter.

Translate »