Left Ad
Andondittu Kaala Movie Review; ಕನಸು-ನನಸಿನ ನಡುವೆ ಕಾಡುವ ಕಾಲ! - Chittara news
# Tags

Andondittu Kaala Movie Review; ಕನಸು-ನನಸಿನ ನಡುವೆ ಕಾಡುವ ಕಾಲ!

 

ಚಿತ್ರ: ಅಂದೊ0ದಿತ್ತು ಕಾಲ

ನಿರ್ಮಾಣ: ಭುವನ್ ಸುರೇಶ್

ನಿರ್ದೇಶನ: ಕೀರ್ತಿ ಕೃಷ್ಣ

ತಾರಾಗಣ: ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್‍, ಧರ್ಮೇಂದ್ರ ಅರಸ್‍ ಮುಂತಾದವರು

 

ಕಳೆದ ವರ್ಷ ಬಿಡುಗಡೆಯಾದಪೆಪೆ ಚಿತ್ರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ್ದ ವಿನಯ್ ರಾಜಕುಮಾರ್ ವಾರ ಬಿಡುಗಡೆಯಾದಅಂದೊ0ದಿತ್ತು ಕಾಲ ಚಿತ್ರದಲ್ಲಿ ಕಣ್ಣೀರ ಮಳೆಯನ್ನು ಸುರಿಸಿದ್ದಾರೆ. ಅಲ್ಲಿ ದುಷ್ಟರನ್ನು ಅಟ್ಟಾಡಿಸಿಕೊಂಡು ಹೋಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಇಲ್ಲಿ ಕನಸುಗಳನ್ನು ಅಟ್ಟಾಡಿಸಿಕೊಂಡು ಹೋಗಿ, ನನಸು ಮಾಡಿಕೊಳ್ಳುವ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅವರ ಸರಳ ಅಭಿನಯ ಗಮನ ಸೆಳೆಯುತ್ತದೆ.

 

ಅಂದೊ0ದಿತ್ತು ಕಾಲ ಒಂದು ಚಿತ್ರರಂಗದ ಕುರಿತಾದ ಚಿತ್ರ. ಸಿನಿಮಾ ನಿರ್ದೇಶಕರಾಗಬಯಸುವವರು ಚಿತ್ರರಂಗದಲ್ಲಿ ಹೇಗೆಲ್ಲಾ ಸೈಕಲ್ ಹೊಡೆಯುತ್ತಾರೆ ಎಂದು ಸಾರುವ ಚಿತ್ರ. ಇಲ್ಲಿ ತಮ್ಮ ಅನುಭವವೂ ಸೇರಿ ಚಿತ್ರರಂಗಕ್ಕೆ ಹಲವು ಕನಸುಗಳನ್ನು ಹೊತ್ತು ಬರುವವರ ಅನುಭವಗಳನ್ನು ನಿರ್ದೇಶಕ ಕೀರ್ತಿ ಕೃಷ್ಣ ಧಾರೆ ಎರೆದಿದ್ದಾರೆ. ನಿರ್ದೇಶಕನಾಗಬೇಕು ಎಂದು ಕನಸು ಕಂಡು ಹಗಲವಾಡಿ ಎಂಬ ಸಣ್ಣ ಹಳ್ಳಿಯಿಂದ ಬರುವ ಕುಮಾರ್ ಎಂಬ ಯುವಕನೊಬ್ಬ, ಹೇಗೆ ದೊಡ್ಡ ನಿರ್ದೇಶಕನಾಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾನೆ? ನಿಟ್ಟಿನಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎಂದು ಚಿತ್ರ ಹೇಳುತ್ತದೆ.

 

ಹಾಗಂತ ಇದು ಬರೀ ಹೋರಾಟದ ಕಥೆಯಷ್ಟೇ ಅಲ್ಲ. ಇಲ್ಲಿ ಪ್ರೇಮಕಥೆ ಇದೆ. ಸ್ನೇಹವಿದೆ, ತಾಯಿ ಸೆಂಟಿಮೆ0ಟ್ ಇದೆ. ವಿನಯ್ ರಾಜಕುಮಾರ್ ಅವರ ಹಿಂದಿನ ಚಿತ್ರಗಳನ್ನು ನೋಡಿ, ಇದರಲ್ಲಿ ನೃತ್ಯ, ಫೈಟುಗಳನ್ನು ನಿರೀಕ್ಷಿಸಿದರೆ ಕಷ್ಟ. ಇಲ್ಲಿ ಅದ್ಯಾವುದೂ ಇಲ್ಲ. ಇದು ಒಬ್ಬ ಸಾಮಾನ್ಯ ಮನುಷ್ಯನ ಕಥೆ. ಆತ ಜೀವನದಲ್ಲಿ ಹೇಗೆ ಮೇಲೆ ಬರುತ್ತಾನೆ ಎನ್ನುವ ಕಥೆ ಇದು. ನರಳ ಸುಂದರ ನರೇಶನ್ ಗಮನ ಸೆಳೆಯುತ್ತದೆ.

 

ತರಹದ ಕಥೆಗಳು ಚಿತ್ರರಂಗಕ್ಕೆ ಹೊಸದಲ್ಲಮೈ ಆಟೋಗ್ರಾಫ್ನಿಂದ ಇಲ್ಲಿಯವರೆಗೂ ಬಾಲ್ಯದ ನೆನಪುಗಳನ್ನು ಕಟ್ಟಿಕೊಡುತ್ತಲೇ, ವರ್ತಮಾನದ ಕಥೆಯನ್ನೂ ಹೇಳುವ ಹಲವು ಚಿತ್ರಗಳು ಬಂದಿವೆ. ಆದರೆಅಂದೊ0ದಿತ್ತು ಕಾಲ ಸಾಲಿಗೆ ಸೇರುತ್ತಾದರೂ, ಇಂದಿನ ರಕ್ತಸಿಕ್ತ ಸಿನಿಮಾಗಳ ನಡುವೆ ಇಂತಹ ಚಿತ್ರದ ಅನಿವಾರ್ಯತೆಯಿದೆ. ಚಿತ್ರಗಳನ್ನು ನೆನಪಿಸುತ್ತಲೇ, ಕನಸು ನನಸು ಮಾಡುವ ಹೋರಾಟದ ಹಾದಿಯಲ್ಲಿ ಚಿತ್ರ ಸಾಗುತ್ತದೆ. ಅನ್ಯಾತ ಥ್ರಿಲ್ಲಿಂಗ್ ಅಂಶಗಳು ತುರುಕಿ ಚಿತ್ರವನ್ನು ದಾರಿ ತಪ್ಪಿಸದ ನಿರ್ದೇಕರ ಬದ್ಧತೆ ಇಷ್ಟವಾಗುತ್ತದೆ. ಯಾವುದೇ ಅವಸರ, ಆತುರವಿಲ್ಲದೆ ನಿಧಾನಕ್ಕೆ ನಿರೂಪಿಸಿದ್ದಾರೆ ನಿರ್ದೇಶಕ ಕೃಷ್ಣ.

 

ತರಹದ ಚಿತ್ರ ಮಾಡಿರಲಿಲ್ಲವಾದ್ದರಿಂದ ವಿನಯ್ ರಾಜಕುಮಾರ್ ಪಾಲಿಗೆ ಇದು ವಿಶೇಷವಾದ ಚಿತ್ರ. ವಿನಯ್ ಪಾತ್ರಕ್ಕೆ ಹೊಂದಿಕೊ0ಡಿರುವುದಷ್ಟೇ ಅಲ್ಲ, ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದಿತಿ ಪ್ರಭುದೇವ ಎಂದಿನAತೆ ಲವಲವಿಕೆಯಿಂದ ನಟಿಸಿದ್ದಾರೆ. ಅರುಣಾ ಬಾಲರಾಜ್ಕಡ್ಡಿಪುಡಿ ಚಂದ್ರು, ಜಗ್ಗಪ್ಪ, ಧರ್ಮೇಂದ್ರ ಅರಸ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರವಿಚಂದ್ರನ್ ಕಡಿಮೆ ಸಮಯ ತೆರೆಯ ಮೇಲೆ ಕಂಡರೂ ಇಷ್ಟವಾಗುತ್ತಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮತ್ತು ರಾಘವೇಂದ್ರ ಹಾಡುಗಳು ಖುಷಿಕೊಡುತ್ತವೆ. ಹೊಡೆದಾಟ, ರಕ್ತಪಾತ ಬೇಡವೇ ಬೇಡ, ಕುಟುಂಬ ಸಮೇತರಾಗಿ ಚಿತ್ರ ನೋಡಬೇಕು ಅನ್ನುವುವವರಿಗೆ `ಅಂದೊ0ದಿತ್ತು ಕಾಲಒಂದು ರಸವತ್ತಾದ ಬಾಳೆ ಎಲೆ ಊಟ.

 

 

 

 

Spread the love
Translate »
Right Ad