Sandalwood Leading OnlineMedia

ಸಖತ್ ಸಸ್ಪೆನ್ಸ್ ಆಗಿದೆ ‘ಅನಾವರಣ’ ಟ್ರೇಲರ್…ಅರ್ಜುನ್ ಯೋಗಿ ಸಿನಿಮಾಗೆ ಕಿಚ್ಚ ಸುದೀಪ್ ಬೆಂಬಲ

ಅನಾವರಣ ಸಿನಿಮಾದ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಮೊದಲ ನೋಟ ಬಿಡುಗಡೆಯಾಗಿದೆ. ಪ್ರೀತಿ, ಕೊಲೆ ಕುಟುಂಬ, ಎಮೋಷನ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಚಿತ್ರದ ಟ್ರೇಲರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ.

ಇದನ್ನೂ ಒದಿ ಬ್ಲ್ಯಾಕ್​ ಸೀರೆಯಲ್ಲಿ ಕಿಸ್ ಬ್ಯೂಟಿ ಶ್ರೀಲೀಲಾ: ನಿಮಗೆಲ್ಲ ಬೆಳೆಯೋವರೆಗೂ ಮಾತ್ರ ಕನ್ನಡ ಭಾಷೆ ಬೇಕಾ ಎಂದ ನೆಟ್ಟಿಗರು ….

ಕಿಚ್ಚ ಸುದೀಪ್ ಮಾತನಾಡಿ, ರಾಮಚಂದ್ರ, ಅದ್ವೈತ್ ಪ್ರಭಾಕರ್ ನಿರ್ಮಾಣ ಮಾಡಿರುವ, ಮೊದಲ ಬಾರಿಗೆ ಮಂಜು ಹರಿ ನಿರ್ದೇಶನ ಮಾಡಿರುವ, ಅರ್ಜುನ್ ಯೋಗಿ ನಟನೆಯ ಅನಾವರಣ ಸಿನಿಮಾದ ಟ್ರೇಲರ್ ನೋಡಿದೆ. ಅವರ ತಂಡಕ್ಕೆ ಅವರ ಪರಿಶ್ರಮಕ್ಕೆ ಒಳ್ಳೆದಾಗಲಿ. ಡಿಸೆಂಬರ್ 1ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ. ಟ್ರೇಲರ್ ನೋಡ್ತಾ ಇರಬೇಕಾದ್ರೆ ಬಹಳ ಪರಿಚಯಸ್ಥರು ತುಂಬ ಜನ ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದರು.

ಇದನ್ನೂ ಒದಿ  ಅಹಮದಾಬಾದ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ರವರ “ಚಿಣ್ಣರ ಚಂದ್ರ”

ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

ಇದನ್ನೂ ಒದಿ  ʼಸಿಲ ನೋಡಿಗಳಿಲ್ʼ ತಮಿಳು ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯ..!

ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣಗೊಂಡಿರುವ ಅನಾವರಣ ಸಿನಿಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ರಾಜುಹಾಸನ್, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

ಇದನ್ನೂ ಒದಿ ಜೀ5 ಒಟಿಟಿಗೆ ಲಗ್ಗೆ ಇಟ್ಟ ಶಿವಣ್ಣನ ಸಿನಿಮಾ: 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ ಅನಾವರಣ 10,000 ಅಡಿ ಘೋಸ್ಟ್ ಪೋಸ್ಟರ್ ಲಾಂಚ್..ಇದು ಜೀ ಕನ್ನಡದ ಹೊಸ ಪ್ರಯತ್ನ
ವೆಂಕಿ UDV ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ.

Share this post:

Related Posts

To Subscribe to our News Letter.

Translate »