ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗ್ಬಿಟ್ಟಿದೆ. ‘ಬಾಹುಬಲಿ’ – 2 ನಂತರ ಸ್ವೀಟಿ ಅಷ್ಟಾಗಿ ನಟಿಸಲಿಲ್ಲ. ‘ಸೈಜ್ ಜೀರೊ’ ಚಿತ್ರಕ್ಕೆ ತೂಕ ಹೆಚ್ಚಿಸಿಕೊಂಡಿದ್ದೇ ಇದಕ್ಕೆ ಕಾರಣ. ಆದರೂ ಅಭಿಮಾನಿಗಳು ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಸದ್ಯ ಅನುಷ್ಕಾ ಶೆಟ್ಟಿ ‘ಮಿಸ್. ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ವೀಟಿ ಮದುವೆ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಲೇ ಇದೆ. ವಯಸ್ಸು 40 ದಾಟಿದ್ರು ಯಾಕೆ ಮಂಗಳೂರು ಬೆಡಗಿ ಮದುವೆ ಆಗುವ ಮನಸ್ಸು ಮಾಡಿದಂತೆ ಕಾಣುತ್ತಿದೆ. ಒಂದಷ್ಟು ಜನರ ಜೊತೆಗೆ ಆಕೆಯ ಹೆಸರು ತಳಕು ಹಾಕಿಕೊಂಡರೂ ಅದೆಲ್ಲಾ ಸುಳ್ಳು ಅನ್ನೋದು ಸಾಬೀತಾಯಿತು. ಪ್ರಭಾಸ್- ಅನುಷ್ಕಾ ಪ್ರೀತಿ ಮಾಡ್ತಿದ್ದಾರೆ, ಇಬ್ಬರು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದಕ್ಕೆ ಕಾರಣ ಇಬ್ಬರ ನಡುವಿನ ಲವ್. ಬಹಳ ದಿನಗಳಿಂದ ಲವ್ ಮಾಡ್ತಿರೋ ಜೋಡಿ ಆದಷ್ಟು ಬೇಗ ಮದುವೆ ಆಗೇಬಿಡ್ತಾರೆ ಎನ್ನುವಮಟ್ಟಿಗೆ ವದಂತಿ ಹರಿದಾಡಿತ್ತು. ಪೋಷಕರು ನೋಡಿದ ಹುಡುಗನನ್ನು ಸ್ವೀಟಿ ಕೈ ಹಿಡಿಯಲು ಒಪ್ಪಿದ್ದಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇದೆಲ್ಲದರ ನಡುವೆ ಮದುವೆ ಬಗ್ಗೆ ಸ್ವೀಟ್ ಹೇಳಿಕೆಯೊಂದು ವೈರಲ್ ಆಗ್ತಿದೆ.
ಇದನ್ನೂ ಓದಿ: ಶಿವಣ್ಣ ಅಭಿನಯದ ‘ಸಾಗಾ ಆಫ್ ಅಶ್ವತ್ಥಾಮ’ ಬಗ್ಗೆ ನಿರ್ದೇಶಕರಿಂದಲೇ ಹೊಸ ಅಪ್ಡೇಟ್!
ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ನನಗೆ ಒಂದಲ್ಲ ಎರಡಲ್ಲ 5 ಬಾರಿ ಮದುವೆ ಆಗಿದೆ ಎಂದು ಹೇಳಿದ್ದರು. ಅದು ಯಾರ್‍ಯಾರ ಅನ್ನೋದನ್ನು ಕೂಡ ಸ್ವೀಟಿ ಹೇಳಿದ್ದರು. ಹಿರಿಯ ನಟಿ ಜಯಪ್ರದ ಬಹಳ ವರ್ಷಗಳ ಹಿಂದೆ ಕಿರುತೆರೆ ಸಂದರ್ಶನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ‘ಅರುಂಧತಿ’ ಸಿನಿಮಾ ಆಗಷ್ಟೆ ರಿಲೀಸ್ ಆಗಿ ಸ್ವೀಟಿ ಕ್ರೇಜ್ ಹೆಚ್ಚಾಗಿತ್ತು. ಸಂದರ್ಶನದ ವೇಳೆ ಜಯಪ್ರದ ನಿಮ್ಮ ಬಗ್ಗೆ ನೀವು ಕೇಳಿದ ಅತಿ ದೊಡ್ಡ ಗಾಸಿಪ್ ಯಾವುದು ಎನ್ನುವ ಪ್ರಶ್ನೆ ಕೇಳಿದ್ದರು. ಜಯಪ್ರದ ಅವರ ಪ್ರಶ್ನೆಗೆ ಕೂಡಲೇ ಉತ್ತರಿಸಿದ ಸ್ವೀಟಿ, “ನಾನು 5 ಸಲ ಮದುವೆ ಆಗಿದ್ದೀನಿ ಅನ್ನೋದು ದೊಡ್ಡ ಗಾಸಿಪ್ ಎಂದು ಹೇಳಿದ್ದಾರೆ. ಆ ಮಾತು ಕೇಳಿ ನಕ್ಕ ಜಯಪ್ರದ ಯಾರ್‍ಯಾರ ಜೊತೆಗೆ ಎನ್ನುತ್ತಿದ್ದಂತೆ ಎಲ್ಲಾ ನನ್ನ ಸಹನಟರು. ಪ್ರಭಾಸ್, ಸುಮಂತ್, ಗೋಪಿಚಂದ್, ಸೆಂಥಿಲ್ ಎಂದು ಹೇಳಿ ಅನುಷ್ಕಾ ಶೆಟ್ಟಿ ನಕ್ಕಿದ್ದಾರೆ. ತಾವು ನಟಿಸಿದ ಸಹನಟರ ಜೊತೆಗೆಲ್ಲಾ ಮದುವೆ ಆಗುತ್ತದೆ, ಮದುವೆ ಆಗಿದೆ ಎನ್ನುವ ಅರ್ಥದಲ್ಲಿ ಗಾಸಿಪ್‌ಗಳು ಹರಿದಾಡುತ್ತಿದ್ದನ್ನು ಸ್ವೀಟಿ ಈ ರೀತಿ ವಿವರಿಸಿದ್ದಾರೆ. ಸದ್ಯ ಈ ಹಳೇ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ.