ಬಹುನಿರೀಕ್ಷಿತ್ ಪ್ಯಾನ್ ವರ್ಲ್ಡ್ ಸಿನಿಮಾ ಕಾಂತಾರ ಚಾಪ್ಟರ್ 1 ರಲ್ಲಿ ನಟಿಸುವ ಆಸೆ ನಿಮಗಿದೆಯೇ? ಹಾಗಿದ್ದರೆ ಹೊಂಬಾಳೆ ಫಿಲಂಸ್ ಅವಕಾಶವೊಂದನ್ನು ನೀಡುತ್ತಿದೆ.
ಕಾಂತಾರ ಚಾಪ್ಟರ್ 1 ಸಿನಿಮಾಕ್ಕಾಗಿ ಕಲಾವಿದರ ಹುಡುಕಾಟ ನಡೆದಿದೆ. ಇದೀಗ ಹೊಂಬಾಳೆ ಫಿಲಂಸ್ ನಿಮ್ಮಲ್ಲಿ ನಟಿಸುವ ಕಲೆ, ಆಸೆ ಇದ್ದರೆ ನಮಗೆ ನಿಮ್ಮ ಪ್ರೊಫೈಲ್ ಕಳುಹಿಸಿ ಎಂದು ಜಾಹೀರಾತು ನೀಡಿದೆ.
30 ರಿಂದ 60 ವರ್ಷ ವಯಸ್ಸಿನ ವಯೋಮಿತಿಯ ಪುರುಷರು ಮತ್ತು 18 ರಿಂದ 60 ವರ್ಷದೊಳಗಿನ ಮಹಿಳೆಯರು ನಟನೆಯಲ್ಲಿ ಆಸಕ್ತಿಯಿರುವವರು ವಿಡಿಯೋ ಕಳುಹಿಸಬಹುದು. ಆದರೆ ವಿಡಿಯೋ ರೀಲ್ಸ್ ಅಥವಾ ಅದನ್ನು ಹೋಲುವ ರೀತಿಯದ್ದಾಗಿರಬೇಕು ಎಂದು ಷರತ್ತು ವಿಧಿಸಲಾಗಿದೆ. ಇದಕ್ಕಾಗಿ kanrara.in ಎಂಬ ಲಿಂಕ್ ನ್ನು ನೀಡಲಾಗಿದೆ.
ಈ ಲಿಂಕ್ ಗೆ ಹೋಗಿ ಆಸಕ್ತರು ಅದರಲ್ಲಿ ಕೇಳುವ ವಿವರಗಳನ್ನು ಒದಿಗಬೇಕು. ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಹೊಸ ಕಲಾವಿದರ ಹುಡುಕಾಟ ನಡೆಸಲಾಗುತ್ತದೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಈಗಾಗಲೇ ಹೇಳಿದ್ದರು.