ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನಿಸಿದ ನಂತರ ಹಂಚಿಕೊಂಡಿರುವ ಫೋಟೋ ಅನೇಕರ ಗಮನ ಸೆಳೆದಿದೆ. ಅವರು ಈ ಫೋಟೋದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ಫೋಟೋವನ್ನು ಗೋಲ್ಡನ್ ಕ್ವೀನ್ ಹಂಚಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸ್ಲಿಮ್ ಆಗಿರುವ ಅಮೂಲ್ಯಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಮೂಲ್ಯಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಗೋಲ್ಟನ್ ಕ್ವೀನ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಿನಿಮಾಗೆ ವಾಪಾಸ್ ಬರುವ ಬಗ್ಗೆ ಅಮೂಲ್ಯಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.
ಸ್ಯಾಂಡಲ್‌ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮದುವೆಯಾದ ಬಳಿಕ ಅಮೂಲ್ಯಾ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು.
ನಟಿ ಅಮೂಲ್ಯ ಅವರು ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅಮೂಲ್ಯ ತಾಯಿ ಆಗಿರುವ ವಿಚಾರ ಅವರ ಆಪ್ತ ಬಳಗ ಹಾಗೂ ಫ್ಯಾನ್ಸ್ಗೆ ಖುಷಿ ನೀಡಿದೆ. ಅಮೂಲ್ಯ ಅವರು ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪ್ರೆಗ್ನೆಂಟ್ ಆಗಿದ್ದ ಸಂದರ್ಭದ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಹೊಸಹೊಸ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ.
ಮಗು ಜನಿಸಿದ ಕೆಲವೇ ತಿಂಗಳ ಬಳಿಕ ಅವರು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಫೋಟೋ ನೋಡಿ ಅವರ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೆ, ಅವರ ಎದುರು ಒಂದು ಪ್ರಶ್ನೆ ಇಡುತ್ತಿದ್ದಾರೆ. ‘ಅಮೂಲ್ಯ ಅವರೇ ಸಖತ್ ಸ್ಲಿಮ್ ಆಗಿ ಕಾಣಿಸುತ್ತಿದ್ದೀರಿ. ದಯವಿಟ್ಟು ನೀವು ಮಾಡುವ ವರ್ಕೌಟ್ ದಿನಚರಿ ತಿಳಿಸಿ’ ಎಂದು ಕೆಲವರು ಕೋರಿದ್ದಾರೆ. ಇನ್ನೂ ಕೆಲವರು ‘ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ’ ಎಂಬ ಪ್ರಶ್ನೆ ಇಟ್ಟಿದ್ದಾರೆ. ಅಮೂಲ್ಯ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
2017ರಲ್ಲಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇಬ್ಬರೂ ಸಖತ್ ಆಕ್ಟೀವ್ ಆಗಿದ್ದಾರೆ. ಅಮೂಲ್ಯಾ ಕೊನೆಯದಾಗಿ ಮಾಸ್ತಿ ಗುಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಗಣೇಶ್ ನಟನೆಯ ಮುಗುಳು ನಗೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.