ಗೌತಮ್ ಮತ್ತು ಭೂಮಿಕಾ ಸದ್ಯ ಕಿರುತೆರೆಯ ಮೋಸ್ಟ್ ರೊಮ್ಯಾಂಟಿಕ್ ಹಾಗೂ ಜನಪ್ರಿಯ ಜೋಡಿ. ಭೂಮಿಕಾಗೆ ತನ್ನ ಮೊದಲ ಸಂಬಳ ಸಿಕ್ಕಿದೆ. ಮದ್ವೆ ಆದ ನಂತರ ಸಿಕ್ಕಿರೋ ಮೊದಲ ಸಂಬಳವನ್ನು ಗಂಡನಿಗೆ ನೀಡಿ, ಅದರಲ್ಲಿ 3 ಸಾವಿರ ತೆಗೆದುಕೊಂಡು ಭೂಮಿಕಾ ತನ್ನ ಪತಿ ಗೌತಮ್‌ಗೆ ಪಾರ್ಟಿ ಕೊಡಿಸೋದಕ್ಕೆ ಕರೆದುಕೊಂಡು ಹೋಗ್ತಿದ್ದಾಳೆ.
ಭೂಮಿಕಾ, ಗೌತಮ್ ಅವರನ್ನು ಕರೆದುಕೊಂಡು ಆಟೋಗೆ ಕಾಯ್ತಾ, ಇದು ನಮ್ಮ ಫಸ್ಟ್ ಡೇಟಿಂಗ್ ಅಂತಾಳೆ, ಆವಾಗ ಗೌತಮ್, ಮದ್ವೆ ಆದ್ಮೇನೆ ಇನ್ಯಾವ ಡೇಟಿಂಗ್ ಅಂತ ಕೇಳ್ತಾರೆ. ಭೂಮಿಕಾ ಹೌ ಅನ್ ರೊಮ್ಯಾಂಟಿಕ್ ಅನ್ನುತ್ತಲೇ ಮದ್ವೆ ಆಗಿಲ್ಲಾಂದ್ರೂ ಲವ್ ಆಗಿರ್ಲಿಲ್ವಲ್ಲ ಹಾಗಾಗಿ ಇದು ನಮ್ಮ ಫಸ್ಟ್ ಡೇಟಿಂಗ್ ಎನ್ನುತ್ತಾಳೆ. ಎಲ್ಲರೂ ಡೇಟ್ ಮಾಡಿ, ಕೈ ಕೈ ಹಿಡಿದು ಎಲ್ಲೆಡೆ ಸುತ್ತಾಡಿ, ಲವ್ ಮಾಡಿ ಮದ್ವೆ ಆಗ್ತಾರೆ, ಆದ್ರೆ ನಮ್ಮ ಸ್ಕ್ರೀನ್ ಪ್ಲೇನೆ ಉಲ್ಟಾ ಇದೆ. ನಾವು ಮದ್ವೆ ಆದ್ಮೆಲೆ ಲವ್ ಮಾಡಿದ್ವಿ, ಈವಾಗ ಡೇಟಿಂಗ್ ಮಾಡ್ತಿದ್ದಿವಿ ಅಷ್ಟೇ. ನಮ್ಮದು ಡಿಫರೆಂಟ್ ಸ್ಟೋರಿ ಅಂತಾಳೆ.
ಭೂಮಿಕಾ ಮೊದಲ ಸಂಬಳದಲ್ಲಿ ಗಂಡನ ಜೊತೆ ಡೇಟ್ ಹೋಗಿರುವಾಗಲೇ ಅಶ್ವಿನಿ ಕಣ್ಣಿಗೆ ಬಿದ್ದಿದ್ದಾರೆ ಪಾರ್ಥ ಹಾಗೂ ಅಪೇಕ್ಷಾ. ಇಬ್ಬರು ಲವ್ ಮಾಡುತ್ತಾ ಇದ್ದಾರೆ ಎಂಬ ಅನುಮಾನ ಮೂಡಿ, ಅಮ್ಮನ ಬಳಿ ಹೇಳಿದ್ದಾಳೆ. ಆದರೆ ಶಕುಂತಲಾಗೆ ಇದು ಮೊದಲೇ ಗೊತ್ತಿದ್ದ ಕಾರಣ ಬಾಯಿ ಮುಚ್ಚಿಸಿದ್ದಾಳೆ. ಈಗ ಜೈದೇವ್ ಹತ್ತಿರ ಬಂದು ಹೇಳಿದ್ದಾಳೆ. ಅಪ್ಪಿಯನ್ನು ಮದುವೆ ಆಗಬೇಕೆಂದು ಹೊರಟಿದ್ದ ಜೈದೇವ್, ಈ ವಿಚಾರವನ್ನು ಸದಾಶಿವ ಅವರ ಬಳಿ ಹೇಳುವಂತೆ ಕಿಡಿ ಹೊತ್ತಿಸಿದ್ದಾನೆ.