Sandalwood Leading OnlineMedia

ಕಿಚ್ಚನ ‘ಮ್ಯಾಕ್ಸ್’ ಹೆಸರಲ್ಲಿ ಆಂಬುಲೆನ್ಸ್ ಸೇವೆ…ಇದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ಕೊಡುಗೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಜೊತೆಗೆ ಸದ್ದಿಲ್ಲದೇ, ಕಷ್ಟ ಎಂದುಕೊಂಡು ಬಂದವರಿಗೆ ಸಹಾಯಹಸ್ತ ಚಾಚಿದ್ದಾರೆ. ಈಗಾಗಲೇ ತಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡಿರುವ ಸಹಾಯಗಳು ಎಲ್ಲರ ಕಣ್ಣಮುಂದಿವೆ. ಗ್ರಾಮ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯದ ನೆರವು ನೀಡಿದ್ದಾರೆ. ಕಿಚ್ಚನ ಹೆಸರಿನ ಟ್ರಸ್ಟ್ ಹೊರತಾಗಿ ಅವರ ಅಭಿಮಾನಿಗಳೇ ಸಂಸ್ಥಾಪಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಾವಿರಾರು ಜೀವಗಳ ಉಳಿವಿಗೆ ನೆರವಾಗಿದೆ.

ಇದನ್ನೂ ಓದಿ ಕೆಟಿಎಂ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್..ಸೋಜಿಗ ಎಂದು ಗುನುಗಿದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ

ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಪ್ರಾರಂಭಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಅದರಂತೆ ಈ ಟ್ರಸ್ಟ್ ಈಗ ಮ್ಯಾಕ್ಸ್ ಹೆಸರಿನ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಇಂದು ಮಾಕ್ಸ್ ಹೆಸರಿನ ಆಂಬುಲೆನ್ಸ್ ನ್ನು ಸುದೀಪ್ ಸಾವರ್ಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ.

ಇದನ್ನೂ ಓದಿ ‘ಒಂದು ಸರಳ ಪ್ರೇಮಕಥೆ’ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್….ಗುನು ಗುನುಗು ಎಂದು ಹೆಜ್ಜೆ ಹಾಕಿದ ವಿನಯ್-ಮಲ್ಲಿಕಾ

ಅಂದಹಾಗೇ ಮ್ಯಾಕ್ಸ್ ಕಿಚ್ಚ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಚಿತ್ರದ ಮೊದಲ ಗ್ಲಿಂಪ್ಸ್ ಫ್ಯಾನ್ಸ್ಗೆ ಇಷ್ಟ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್ ಪುನರಾರಂಭವಾಗಿದ್ದು, ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ “ಒಬ್ಬ ನಿರ್ದೇಶಕ ತಲೆಕೆಡಿಸ್ಕೊಂಡು ನಿಂತ್ರೆ…ಎಂಥಹ ಅದ್ಭುತವನ್ನೇ ಮಾಡಬಹುದು ಅನ್ನೋದಿಕ್ಕೆ ಈ ಚಿತ್ರವೇ ಸಾಕ್ಷಿ”

ಕಾಲಿವುಡ್‌ನ ಖ್ಯಾತ ಡೈರೆಕ್ಟರ್‌ ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದು, ವಿಭಿನ್ನ ಕಥೆಯಲ್ಲಿ ಸುದೀಪ್ ಜೀವತುಂಬಿದ್ದಾರೆ. ಮ್ಯಾಕ್ಸ್‌ ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇರಲಿದ್ದು, ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್‌, ಕಾಮರಾಜ್, ಸುಕೃತಾ ವಾಗ್ಲೆ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಸಾಹಸಮಯ ಚಿತ್ರವಾಗಿದ್ದು ಮತ್ತು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ಎಸ್ ಥಾನು ಹಣ ಹಾಕಿದ್ದಾರೆ.

Share this post:

Related Posts

To Subscribe to our News Letter.

Translate »