ಖಡಕ್ ಲುಕ್ನಲ್ಲಿ ಯಂಗ್ ರೆಬಲ್ ಸ್ಟಾರ್, ಅಂಬಿ ಜನ್ಮದಿನಂದು ಅಭಿಷೇಕ್ ಅಂಬರೀಶ್ ಎರಡು ಹೊಸ ಚಿತ್ರ ಅನೌನ್ಸ್
ಅಂಬಿ ಫ್ಯಾನ್ಸ್ ಖುಷಿಪಡುವಂತಹ ಸುದ್ದಿಯೊಂದು ಇಲ್ಲಿದೆ. ಅಂಬರೀಷ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರ ನಟ ಅಭಿಷೇಕ್ ಅವರ ಎರಡು ಹೊಸ ಸಿನಿಮಾಗಳು ಘೋಷಣೆ ಆಗಿವೆ. ‘ಅಮರ್’ ಸಿನಿಮಾದಿಂದ ಚಿತ್ರರಂಗ ಪ್ರವೇಶಿಸಿದ್ದ ಅಭಿಷೇಕ್, ಆನಂತರ ‘ದುನಿಯಾ’ ಸೂರಿ ಅವರ ಬ್ಯಾಡ್ ಮ್ಯಾನರ್ಸ್‌ನಲ್ಲಿ ನಟಿಸುತ್ತಿದ್ದಾರೆ. ಈಗ ಅವರ ಮೂರನೇ ಹಾಗೂ 4ನೇ ಸಿನಿಮಾಗಳು ಘೋಷಣೆ ಆಗಿವೆ. ಒಂದನ್ನು ‘ಹೆಬ್ಬುಲಿ’ ಕೃಷ್ಣ ನಿರ್ದೇಶಿಸಿದರೆ, ಮತ್ತೊಂದನ್ನು ‘ಮದಗಜ’ ಮಹೇಶ್ ಕುಮಾರ್ ಡೈರೆಕ್ಷನ್ ಮಾಡಲಿದ್ದಾರೆ.
ಕೃಷ್ಣ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಕಾಳಿ ಎಂದು ಹೆಸರಿಡಲಾಗಿದೆ. ‘ಗಜಕೇಸರಿ’, ‘ಹೆಬ್ಬುಲಿ’, ‘ಪೈಲ್ವಾನ್’ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ಕೃಷ್ಣ ಈಗ ‘ಕಾಳಿ’ ಎಂಬ ಸಿನಿಮಾವನ್ನು ಅಭಿಷೇಕ್‌ಗೆ ನಿರ್ದೇಶನ ಮಾಡಲಿದ್ದಾರೆ. ಇಡೀ ಕಥೆ ಕಾವೇರಿ ನದಿ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಇದು ರೊಮ್ಯಾಂಟಿಕ್ ಲವ್ ಸ್ಟೋರಿಯಾದರೂ ಮಾಸ್ ಎಲಿಮೆಂಟ್‌ಗಳು ಸಾಕಷ್ಟು ಇರುತ್ತವೆಯಂತೆ. ಕನ್ನಡದ ಹುಡುಗ ಮತ್ತು ತಮಿಳು ಹುಡುಗಿಯ ನಡುವಿನ ಕಥೆ ಇದಾಗಿದ್ದು, ನಿರ್ದೇಶಕ ಕೃಷ್ಣ ಕಣ್ಣಾರೆ ನೋಡಿದ ಘಟನೆಯನ್ನು ಸಿನಿಮಾವಾಗಿಸುತ್ತಿದ್ದಾರೆ. ಚಿತ್ರಕ್ಕೆ ‘ಕಾಳಿ’ ಎಂದು ಟೈಟಲ್ ಇಡಲಾಗಿದೆ..
https://www.instagram.com/p/CeIYL7MvdjH/
ಮಹೇಶ್ ಕುಮಾರ್ ಈ ಹಿಂದೆ ನೀನಾಸಂ ಸತೀಶ್ ಗಾಗಿ ಒಂದು ಸಿನಿಮಾ, ಶ್ರೀಮುರುಳಿಗಾಗಿ ಒಂದು ಸಿನಿಮಾ ಮಾಡಿದ್ದಾರೆ. ಇದು ಅವರ ಮೂರನೇ ಸಿನಿಮಾ.. ಆದರೆ ಈಗಲೇ ಸಿನಿಮಾ ಶುರುವಾಗುತ್ತಿಲ್ಲ. ಫಸ್ಟ್‌ಲುಕ್‌ನಲ್ಲಿ ಅಭಿಷೇಕ್ ರಗಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದನ್ನು ಯಾರು ನಿರ್ಮಾಣ ಮಾಡಲಿದ್ದಾರೆ? ನಾಯಕಿ ಎಂಬ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಮೂರನೇ ಚಿತ್ರಕ್ಕೆ ಅಭಿಷೇಕ್ ಅಂಬರೀಶ್ ಅವರ ಹುಟ್ಟು ಹಬ್ಬದ ದಿನದಂದು ಮುಹೂರ್ತ ಆಗಲಿದೆಯಂತೆ. ಅಲ್ಲಿಂದಲೇ ತಮ್ಮ ಸಿನಿಮಾದ ಕೆಲಸವನ್ನು ಅಧಿಕೃತವಾಗಿ ಶುರು ಮಾಡಲಿದ್ದಾರಂತೆ ನಿರ್ದೇಶಕರು
https://www.instagram.com/p/CeJaKgUvvrU/