ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ʼಅಮರ ಪ್ರೇಮಿ ಅರುಣ್ʼ ಸಿನಿಮಾವು ತನ್ನ ಚಿತ್ರೀಕರಣವನ್ನು ಮುಗಿಸಿದೆ. ಬಳ್ಳಾರಿ ನಗರ ಮತ್ತು ಬಳ್ಳಾರಿ ಜಿಲ್ಲೆಯ ಅನೇಕ ಊರುಗಳಲ್ಲಿ ಸುಮಾರು 50 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ರಾಧಾ ರಾಮಚಂದ್ರ, ಚೆನ್ನಬಸಪ್ಪ, ಸುನಂದಾ ಹೊಸಪೇಟೆ, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ, ಮಂಡ್ಯ ಮಂಜು, ರಾಜೇಶ್ವರಿ, ರಂಜಿತಾ, ಸಿದ್ಧಾಂತ್, ಅಂಕಿತಾ ಮತ್ತು ಇನ್ನೂ ಅನೇಕ ಕಲಾವಿದರುಗಳು ನಟಿಸಿದ್ದಾರೆ.
ವಿಶೇಷ ಪಾತ್ರಗಳಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರು, ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ, ಅರ್ಚನಾ ಕೊಟ್ಟಿಗೆ, ಶ್ವೇತಾ ಭಟ್ ಅವರು ನಟಿಸಿದ್ದಾರೆ.
ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಪ್ರವೀಣ್ ಕುಮಾರ್ ಜಿ ಅವರು ಹಾಡುಗಳನ್ನು ಬರೆದಿದ್ದಾರೆ. ಬಳ್ಳಾರಿ ಸೀಮೆಯ ಶೈಲಿಯ ಮಾತುಗಳಲ್ಲೇ ಇರುವ ಮಾತುಗಳನ್ನು ಪ್ರವೀಣ್ ಕುಮಾರ್ ಜಿ ಅವರು ಬರೆದಿದ್ದಾರೆ.
ಅಮರ ಪ್ರೇಮಿ ಅರುಣ್ ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಮನು ಶೇಡ್ಗಾರ್ ಅವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣ ಮತ್ತು ಸುಧೀಂದ್ರ ವೆಂಕಟೇಶ್ ಅವರ ಮಾಧ್ಯಮ ಸಂಪರ್ಕವಿದೆ.
ಅಮರ ಪ್ರೇಮಿ ಅರುಣ್ ಸಿನಿಮಾ ಈಗ ಸಂಕಲನ ಮತ್ತು ಮಾತುಗಳ ಅಚ್ಚಿನ ಕೆಲಸಗಳತ್ತ ಸಾಗಿದೆ.