Sandalwood Leading OnlineMedia

*ಮತ್ತೆ ಒಂದಾಯ್ತು ಬ್ಲಾಕ್ ಬಸ್ಟರ್ ಹಿಟ್ ಜೋಡಿ…ಪ್ಯಾನ್ ಇಂಡಿಯಾ ಸಿನಿಮಾಗಾಗಿ ಕೈ ಜೋಡಿಸಿದ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್….*

*ಮತ್ತೆ ಒಂದಾಯ್ತು ‘ಅಲ ವೈಕುಂಠಪುರಮುಲೋ’ಜೋಡಿ…ಗುರು ಪೂರ್ಣಿಮೆಗೆ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್*ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಹೊರತುಪಡಿಸಿ ಬನ್ನಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಇದೀಗ ಅಲ್ಲು ಅರ್ಜುನ್ ತ್ರಿವಿಕ್ರಮ್ ಜೊತೆ ಕೈ ಜೋಡಿಸಿದ್ದಾರೆ.

ಇನ್ನೂ ಓದಿ:*ಗಣೇಶ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ ಚಿತ್ರತಂಡ* .

ಟಾಲಿವುಡ್ ಹಿಟ್ ಜೋಡಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಮತ್ತೆ ಒಂದಾಗಿದ್ದಾರೆ. ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಸಿನಿಮಾಗಳಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಈ ಕಾಂಬೋ ನಾಲ್ಕನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಬಹಳ ದಿನಗಳಿಂದಲೂ ಅಲ್ಲು-ತ್ರಿವಿಕ್ರಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಗಾಸಿಪ್ ಗೆ ಅಧಿಕೃತ ಮುದ್ರೆ ಬಿದ್ದಿದೆ.

ಇನ್ನೂ ಓದಿ: *ಟೋಬಿ ಕಥೆಯೇನು ಗೊತ್ತಾ? T k ದಯಾನಂದ್ ಬರೆದ ಕಾರವಾರದ ವಿಲಕ್ಷಣ ವ್ಯಕ್ತಿಯ ಜೀವನ ಚರಿತ್ರೆಯ ಪುಟಗಳೇ ನಿಜವಾದ ‘ಟೋಬಿ’..*

ಗುರು ಪೂರ್ಣಿಮಾ ದಿನದ ಅಂಗವಾಗಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ.ಅಲ ವೈಕುಂಠಪುರಮುಲೂ ಸಿನಿಮಾದಂತಹ ಭರ್ಜರಿ ಹಿಟ್ ಕೊಟ್ಟಿರುವ ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್  ಹಾಗೂ ಗೀತಾ ಆರ್ಟ್ಸ್ ಬ್ಯಾನರ್ ನಡಿಯಲ್ಲಿಯೇ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಾಲ್ಕನೇ ಸಿನಿಮಾ ತಯಾರಾಗಲಿದೆ. ಈಗಾಗಲೇ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ಇವರಿಬ್ಬರು ಮತ್ತೆ ಒಂದಾಗಿರುವುದು ಭಾರೀ ನಿರೀಕ್ಷೆ ಹೆಚ್ಚಿಸಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.

     Check This :  https://youtu.be/F8lrWfKXU7A

Share this post:

Translate »