Left Ad
ಮುದ್ದಿನ ಪ್ರಿನ್ಸೆಸ್ ಅಲ್ಲು ಅರ್ಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್ - Chittara news
# Tags

ಮುದ್ದಿನ ಪ್ರಿನ್ಸೆಸ್ ಅಲ್ಲು ಅರ್ಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅಲ್ಲು ಅರ್ಹಗೆ ಇಂದು ಜನ್ಮದಿನದ ಸಂಭ್ರಮ. ಸ್ಟೈಲಿಶ್ ತಾರೆಯ ಮುದ್ದಿನ ಪ್ರಿನ್ಸೆಸ್ ಇದೀಗ 7 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ.ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಸೋಷಿಯಲ್ ಮೀಡಿಯಾ ಮೂಲಕ ಸುಂದರ ಫೋಟೋಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಅಲ್ಲು ಅರ್ಹ ಈಗಾಗಲೇ ತೆಲುಗಿನಲ್ಲಿ ಸಮಂತಾ ನಾಯಕಿಯಾಗಿರುವ ಶಾಕುಂತಲಾ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದಾಳೆ. ಆಕೆಗೆ ಇನ್ನಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ. ಅಪ್ಪನಂತೇ ತೆಲುಗು ಸಿನಿಮಾದಲ್ಲಿ ಮುಂದೆ ಮಿಂಚುವ ಭರವಸೆ ಹುಟ್ಟಿಸಿದ್ದಾಳೆ.

ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಮಾತೃಭಾ಼ಷೆಯನ್ನೇ ಮರೆತು ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆ. ಆದರೆ ಅಲ್ಲು ಅರ್ಹ ಮಾತ್ರ ಶುದ್ಧ ತೆಲುಗಿನಲ್ಲೇ ಮಾತನಾಡುತ್ತಾಳೆ ಎಂದು ಈ ಹಿಂದೆ ಸಮಂತಾ ಹೊಗಳಿದ್ದರು. ಪುಟಾಣಿ ಅರ್ಹಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯಾಗುತ್ತಿದೆ.

Spread the love
Translate »
Right Ad