ಜಾಹೀರಾತು ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್; ಭೇಷ್ ಎಂದ ಫ್ಯಾನ್ಸ್
ಅಲ್ಲು ಅರ್ಜುನ್ ಅವರಿಗೆ ಕೇವಲ ಸಿನಿಮಾ ಮಾತ್ರವಲ್ಲದೆ ಜಾಹೀರಾತು ಕ್ಷೇತ್ರಗಳಿಂದಲೂ ಹಲವು ಅವಕಾಶಗಳು ಹರಿದುಬರುತ್ತಿವೆ. ‘ಪುಷ್ಪ’ ಚಿತ್ರ ತೆರೆಕಂಡ ಬಳಿಕ ಬಾಲಿವುಡ್ನಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಈ ಕಾರಣಕ್ಕೆ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಆದರೆ, ಅವರು ಒಂದು ಜಾಹೀರಾತಿನಲ್ಲಿ ನಟಿಸಲು ನೋ ಎಂದಿದ್ದಾರೆ. ಈ ವಿಚಾರ ಫ್ಯಾನ್ಸ್ ಕಿವಿಗೂ ಬಿದ್ದಿದೆ. ಈ ಬಗ್ಗೆ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಇತ್ತೀಚೆಗೆ ತಂಬಾಕು ಹಾಗೂ ಮದ್ಯ ಕಂಪನಿಯೊಂದರ ಅಡ್ವಟೈಸ್ಮೆಂಟ್ನಲ್ಲಿ ನಟಿಸಲು ಸ್ಟೈಲಿಶ್ ಸ್ಟಾರ್ಗೆ ಆಫರ್ ನೀಡಲಾಗಿತ್ತು. ಸಂಭಾವನೆ ಜತೆಗೆ ಬೋನಸ್ ಕೊಡುವುದಾಗಿಯೂ ಕಂಪನಿ ಹೇಳಿತ್ತು. ಆದರೆ, ಹಣದ ಆಸೆಗೆ ಬೀಳದೆ ಅಲ್ಲು ಅರ್ಜುನ್ ಅವರು ಈ ಆಫರ್ ತಿರಸ್ಕರಿಸಿದ್ದಾರೆ.
ತಂಬಾಕು, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸೆಲೆಬ್ರಿಟಿಗಳನ್ನು ಹಿಂಬಾಲಿಸುವವರು ಅನೇಕರು ಇರುತ್ತಾರೆ. ಹೀಗಾಗಿ ಸ್ಟಾರ್ಗಳು ಈ ರೀತಿ ಜಾಹೀರಾತು ಮಾಡದಿರಲಿ ಎಂದು ಫ್ಯಾನ್ಸ್ ಬಯಸುತ್ತಾರೆ. ಆದಾಗ್ಯೂ ಈ ರೀತಿಯ ಜಾಹೀರಾತಿನಲ್ಲಿ ನಟ/ನಟಿಯರು ಕಾಣಿಸಿಕೊಂಡರೆ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಾರೆ. ಈಗ ಅಲ್ಲು ಅರ್ಜುನ್ ಅವರು ಈ ಜಾಹೀರಾತನ್ನು ರಿಜೆಕ್ಟ್ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.