ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ ‘ಪುಷ್ಪ 2’ ಬಾಕ್ಸಾಫೀಸ್ ಅನ್ನೇ ಉಡಾಯಿಸಿತ್ತು. ‘ಬಾಹುಬಲಿ 2’, ‘ಕೆಜಿಎಫ್ 2’ ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. 2024 ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡಿದ್ದ ‘ಪುಷ್ಪ 2’ ಇನ್ನೂ ಚಿತ್ರಮಂದಿರದಲ್ಲಿ ಸದ್ದು ಮಾಡುತ್ತಿರುವಾಗಲೇ ಓಟಿಟಿ ರಿಲೀಸ್ ಬಗ್ಗೆ ಸುದ್ದಿಯಾಗುತ್ತಿದೆ.ಡಿಸೆಂಬರ್ 5 ರಂದು ರಿಲೀಸ್ ಆಗಿದ್ದ ‘ಪುಷ್ಪ 2’ ಬರೋಬ್ಬರಿ 56 ದಿನಗಳವರೆಗೂ ಓಟಿಟಿಯಲ್ಲಿ ರಿಲೀಸ್ ಆಗುವುದಿಲ್ಲ ಎಂದು ಹೇಳಿತ್ತು.
‘ಪುಷ್ಪ 2’ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇತ್ತೀಚೆಗೆ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿದ್ದರು. ಅಲ್ಲಿಂದ ರಿಲೋಡ್ ಆಗಿರುವ ‘ಪುಷ್ಪ 2’ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ‘ಪುಷ್ಪ 2′ ಓಟಿಟಿ ರಿಲೀಸ್ ಬಗ್ಗೆ ದೊಡ್ಡದಾಗಿಯೇ ಸುದ್ದಿಯಾಗಿತ್ತು.’ಪುಷ್ಪ 2’ ರಿಲೀಸ್ ಆಗಿ ಇಂದಿಗೆ 50 ದಿನಗಳನ್ನು ಪೂರೈಸಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನೆಟ್‌ಫ್ಲಿಕ್ಸ್‌ನಲ್ಲಿ ‘ಪುಷ್ಪ 2’ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇದೇ ತಿಂಗಳು ಅಂದರೆ, ಜನವರಿ 30ರಂದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇತ್ತ ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ಓಟಿಟಿ ಪ್ರಿಯರು ‘ಪುಷ್ಪ 2’ಗಾಗಿ ಎದುರು ನೋಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ ಸಿಕ್ಕಿದೆ. ಇದೇ ಜನವರಿ 30ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ‘ಪುಷ್ಪ 2’ ರಿಲೀಸ್ ಆಗುತ್ತಿದೆ. ಜೊತೆಗೆ 20 ನಿಮಿಷಗಳ ದೃಶ್ಯವನ್ನು ಸೇರಿಸಿ ರಿಲೋಡ್ ಮಾಡಿದ ವರ್ಷನ್ ಅನ್ನೇ ಓಟಿಟಿಯಲ್ಲಿ ಬಿಡುಗಡೆ ಮಾಡಬಹುದೇ? ಎಂಬ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.