ಕನ್ನಡದ ನಟ ಅನಂತ ನಾಗ್ ಹಾಗೂ ತೆಲುಗಿನ ನಟ ನಂದಮೂರಿ ಬಾಲಕೃಷ್ಣರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಇವರಿಬ್ಬರೂ ತಮ್ಮ ತಮ್ಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಆದರೆ, ಇದಕ್ಕೆ ಸ್ವತಃ ಅನಂತ ನಾಗ್ ಅವರಿಗೆ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದಾರೆ.
ಬಾಲಯ್ಯಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮದೇ ಶೈಲಿಯಲ್ಲಿ ಬಾಲಯ್ಯಗೆ ಶುಭಾಶಯ ಕೋರಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪಡೆದ ನಂದಮೂರಿ ಬಾಲಕೃಷ್ಣರಿಗೆ ಹೃತ್ಪೂರ್ವಕ ಅಭಿನಂದನೆಗಳು. ತೆಲುಗು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗೆ ನೀವು ಈ ಪ್ರಶಸ್ತಿಗೆ ಸಂಪೂರ್ಣ ಅರ್ಹರು ಎಂದು ಅಲ್ಲು ಅರ್ಜುನ್ ಬಾಲಯ್ಯ ಅವರನ್ನು ಶ್ಲಾಘಿಸಿದ್ದಾರೆ.
ಅದೇ ರೀತಿ ಪದ್ಮಭೂಷಣ ಪಡೆದ ಅಜಿತ್ ಕುಮಾರ್ ಅವರಿಗೂ ಅಲ್ಲು ಅರ್ಜುನ್ ಶುಭಾಶಯ ಕೋರಿದ್ದಾರೆ. ಅನಂತ್ ನಾಗ್, ಶೋಭನಾ, ಶೇಖರ್ ಕಪೂರ್ ಕೂಡ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಿಗೂ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದಾರೆ. ಇಲ್ಲಿ ಭಾಷಾ ತಾರತಮ್ಯವನ್ನು ಮಾಡದೇ ಕನ್ನಡ ಚಿತ್ರರಂಗದ ಅನಂತ ನಾಗ್ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.