ಪುಷ್ಪ 2 ಸೂಪರ್ ಹಿಟ್ ಆದ್ಮೇಲೆ ಸ್ಟಾರ್ ಡೈರೆಕ್ಟರ್ಸ್ ಎಲ್ಲರೂ ಅಲ್ಲು ಅರ್ಜುನ್ ಹಿಂದೆ ಬೀಳ್ತಿದ್ದಾರೆ. ಅದ್ರಲ್ಲೂ ತಮಿಳು ಡೈರೆಕ್ಟರ್ಸ್ ಜೊತೆ ಅಲ್ಲು ಅರ್ಜುನ್ ಸಿಟ್ಟಿಂಗ್ಸ್ ಮಾಡಿದ್ರು. ಆದ್ರೆ ಯಾವ ಸಿನಿಮಾನೂ ಸೆಟ್ ಆಗ್ಲಿಲ್ಲ. ಅಲ್ಲು ಅರ್ಜುನ್ ತಮಗೆ ಇಷ್ಟ ಆಗೋ, ಕಂಫರ್ಟ್ ಇರೋ ಡೈರೆಕ್ಟರ್ಸ್ ಜೊತೆನೇ ಸಿನಿಮಾ ಮಾಡ್ತಾರೆ. ಈಗ ಅಲ್ಲು ಅರ್ಜುನ್ ಸೂಪರ್ ಹಿಟ್ ಕೊಟ್ಟ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡ್ತಿದ್ದಾರೆ. ತಮಿಳಿನ ಯಂಗ್ ಡೈರೆಕ್ಟರ್ ಅಟ್ಲಿ ಜೊತೆ ಬನ್ನಿ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಅಟ್ಲಿ ‘ಜವಾನ್’ ಸಿನಿಮಾ ರಿಲೀಸ್ ಆದ್ಮೇಲೆ ಅಲ್ಲು ಅರ್ಜುನ್ & ಅಟ್ಲಿ ಒಟ್ಟಿಗೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಶುರುವಾಯ್ತು. ಸಾಮಾನ್ಯವಾಗಿ ದೊಡ್ಡ ಹಿಟ್ ಕೊಟ್ಟ ಡೈರೆಕ್ಟರ್ಸ್ ಗೆ ಸ್ಟಾರ್ಸ್ ಫೋನ್ ಮಾಡಿ ಶುಭಾಶಯ ಹೇಳ್ತಾರೆ. ನನಗೊಂದು ಸಿನಿಮಾ ಮಾಡಿ ಅಂತ ಇನ್ ಡೈರೆಕ್ಟ್ ಆಗಿ ಹೇಳೋದು ಇದರ ಉದ್ದೇಶ. ಅಟ್ಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಪ್ರಾಜೆಕ್ಟ್ ಶುರುವಾಯ್ತು. ಆದ್ರೆ ಅಟ್ಲಿ ಹೇಳಿದ ಕಥೆಗಳು ಬನ್ನಿಗೆ ಇಷ್ಟ ಆಗ್ಲಿಲ್ಲ. ಅಟ್ಲಿ ಜಾಸ್ತಿ ಸಂಭಾವನೆ ಕೇಳಿದ್ರು ಅಂತಲೂ ಸುದ್ದಿ ಇತ್ತು. ಪುಷ್ಪ 2 ರಿಸಲ್ಟ್ ನೋಡೋಣ ಅಂತ ಬನ್ನಿ ಹೇಳಿದ್ರಂತೆ. ಈಗ ಈ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಅಂತ ಕೇಳ್ತಿದ್ದೀವಿ.
ಅಟ್ಲಿ ಸಲ್ಮಾನ್ ಖಾನ್ ಸಿನಿಮಾ ಮಾಡ್ತಿದ್ದಾರೆ. ಅಲ್ಲು ಅರ್ಜುನ್ ಭೇಟಿಗೆ ಅಟ್ಲಿ & ಟೀಮ್ ಹೈದರಾಬಾದ್ ಗೆ ಬಂದಿದ್ರಂತೆ. ಪ್ರಾಜೆಕ್ಟ್ ಫೈನಲ್ ಆಗಿದೆ, ಸ್ಕ್ರಿಪ್ಟ್ ವರ್ಕ್ ಶುರುವಾಗುತ್ತೆ ಅಂತ ಕೇಳ್ತಿದ್ದೀವಿ. ಅಲ್ಲು ಅರ್ಜುನ್ ತ್ರಿವಿಕ್ರಮ್ ಸಿನಿಮಾ ಮುಗಿಸಿ ಬರ್ತಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ಪ್ರೊಡ್ಯೂಸ್ ಮಾಡುತ್ತೆ. ಅಟ್ಲಿ ಸ್ಟೈಲ್ ಆಕ್ಷನ್ ಸಿನಿಮಾ ಇದಾಗುತ್ತೆ. ಈ ಪ್ಯಾನ್ ಇಂಡಿಯಾ ಸಿನಿಮಾಗೆ ಅಟ್ಲಿ 60 ಕೋಟಿ ಸಂಭಾವನೆ ಪಡೆಯುತ್ತಾರಂತೆ.