‘KGF’ ಸರಣಿ ಸಿನಿಮಾಗಳಿಂದ ಇಡೀ ಭಾರತೀಯ ಚಿತ್ರರಂಗವೇ ಮತ್ತೊಮ್ಮೆ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ‘KGF’ ಕನ್ನಡದ ಹೆಮ್ಮೆ. ಇಂತಾದೊಂದು ಸಿನಿಮಾ ಮೂಡಿ ಬರಲು ಯಶ್ ಶ್ರಮವನ್ನು ಮರೆಯುವಂತಿಲ್ಲ. ರಾಕಿಂಗ್ ಸ್ಟಾರ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಕನ್ನಡ ನಟ ಯಶ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ಇತ್ತೀಚೆಗೆ ನೀಡಿದ್ದ ಹೇಳಿಕೆ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರು ಕೇಳಿದ ಯಾವುದೋ ಪ್ರಶ್ನೆಗೆ ಮತ್ತೇನೋ ಉತ್ತರ ಕೊಟ್ಟ ಅಲ್ಲು ಅರವಿಂದ್, ಯಶ್ ಹೆಸರು ಎಳೆದು ತಂದಿದ್ದರು. ಸುಖಾ ಸುಮ್ಮನೆ ಬೇಡದ ಚರ್ಚೆಗೆ ಹುಟ್ಟು ಹಾಕಿದರು. ತಮ್ಮ ಮಗ ಅಲ್ಲು ಅರ್ಜುನ್‌ನ ವಹಿಸಿಕೊಂಡು ಮಾತನಾಡುವ ಭರದಲ್ಲಿ ಯಶ್ ಹೆಸರು ತಂದು ಎಡವಟ್ಟು ಮಾಡಿದ್ದರು.
ಇದನ್ನೂ ಓದಿ ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ, ಕರಾವಳಿಯ ದೈವಾರಾಧನೆಯ ಕಥೆ ಹೊತ್ತ ‘ಸತ್ಯಂ’
‘KGF’ ಸಿನಿಮಾ ಬರುವ ಮುನ್ನ ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆಲ್ತು” ಎಂದು ಅಲ್ಲು ಅರವಿಂದ್ ಹೇಳಿಕೆ ನೀಡಿದ್ದರು. ‘KGF’ ಚಿತ್ರ ಬರುವುದಕ್ಕು ಮುನ್ನ ಯಶ್ ಸ್ಟಾರ್ ಆಗಿದ್ದರು. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ‘ರಾಜಾಹುಲಿ’, ‘ಗಜಕೇಸರಿ’, ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು. ಇದೇ ಕಾರಣಕ್ಕೆ ಅಲ್ಲು ಅರವಿಂದ್ ಹೇಳಿಕೆ ಅಭಿಮಾನಿಗಳಿಗೆ ಅಸಮಾಧಾನ ತಂದಿದೆ.
ಇದನ್ನೂ ಓದಿ ತಮ್ಮ ಹುಟ್ಟುಹಬ್ಬಕ್ಕೆ ವಿಶೇಷ ಆವ್ಹಾನ ನೀಡಿದ ರಾಧಿಕಾ ಕುಮಾರಸ್ವಾಮಿ
ಸದ್ಯ ‘KGF’ ಸಿನಿಮಾ ಬರೋಕು ಮುನ್ನ ಯಶ್ ಯಾರು? ಎಂದು ಕೇಳಿರುವ ಇದೇ ಅಲ್ಲು ಅರವಿಂದ್ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ತಂಡದ ಬೆನ್ನು ತಟ್ಟಿದ್ದರು. 2014ರಲ್ಲಿ ತೆರೆಕಂಡಿದ್ದ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಸೈಮಾ ವೇದಿಕೆಯಲ್ಲಿ ಒಂದಲ್ಲ ಎರಡಲ್ಲ 11 ಪ್ರಶಸ್ತಿ ಪಡೆದುಕೊಂಡಿತ್ತು.
ಇದನ್ನೂ ಓದಿ ಸಿದ್ದಲಿಂಗಯ್ಯ ಅವರ ಸಿನಿಮಾಗಳನ್ನು ನೆನಪಿಸುವ “ರಾಜಯೋಗ” ಚಿತ್ರ 17ಕ್ಕೆ ತೆರೆಗೆ
2015ರಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಆ ವೇದಿಕೆಯಲ್ಲಿ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿತ್ತು. ವಿಶೇಷ ಅಂದ್ರೆ ಇದೇ ಅಲ್ಲು ಅರವಿಂದ್ ಅಂದು ಪ್ರಶಸ್ತಿ ಪ್ರದಾನ ಮಾಡಿದ್ದರು. ವೇದಿಕೆಯಲ್ಲಿ ನಾಮಿನೇಷನ್ ಆಗಿದ್ದ ಸಿನಿಮಾಗಳ ಲಿಸ್ಟ್ ತೋರಿಸಲಾಗಿತ್ತು. ಅದರಲ್ಲಿ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ಜೊತೆಗೆ ‘ಗಜಕೇಸರಿ’ ಸಿನಿಮಾ ಕೂಡ ಇತ್ತು.
ಇದನ್ನೂ ಓದಿ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವಿವಾದ ತುಂಬಾನೇ ಅಪಾಯಕಾರಿ ಎಂದಿದ್ದೇಕೆ ಈ ನಟಿ??
ನಿರ್ದೇಶಕ ಸಂತೋಷ್ ಆನಂದ್ ರಾಮ್ ವೇದಿಕೆ ಏರಿ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ಗಾಗಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸ್ವೀಕರಿಸಿದ್ದರು. ಅಲ್ಲು ಅರವಿಂದ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆ ಸಂತು, ಇಡೀ ತಂಡವನ್ನು ವೇದಿಕೆ ಮೇಲೆ ಕರೆದರು. ಈ ವೇಳೆ ಯಶ್ ಕೂಡ ವೇದಿಕೆ ಏರಿದ್ದರು. ಇಡೀ ತಂಡದ ಕೈ ಕುಲುಕಿ ಅಲ್ಲು ಅರವಿಂದ್ ಅಭಿನಂದಿಸಿದ್ದರು. ಅದೇ ಅಲ್ಲು ಅರವಿಂದ್ ಈಗ “KGF’ ಸಿನಿಮಾ ಬರುವ ಮುನ್ನ ಯಶ್ ಯಾರು?” ಎಂದು ಕೇಳುತ್ತಿದ್ದಾರೆ. ಇದು ಸರೀನಾ? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂದು ಅಲ್ಲು ಅರವಿಂದ್ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದ ವಿಡಿಯೋ ದಿಢೀರ್ ವೈರಲ್ ಆಗುತ್ತಿದೆ. ಕನ್ನಡದ ‘KGF’ ಸಿನಿಮಾ ನೋಡಿ ನಿಮ್ಮ ಮಗ ‘ಪುಷ್ಪ’ ಸಿನಿಮಾ ಮಾಡ್ದ. ರಾಷ್ಟ್ರಪ್ರಶಸ್ತಿ ಪಡೆದ. ನಿಮ್ಮ ಮಗನ ಮೊದಲ ಸಿನಿಮಾ ನೀವೇ ನಿರ್ಮಾಣ ಮಾಡಿದ್ದಿರಿ. ಆದರೆ ಯಶ್ ಸಿನಿಮಾ ಯಾರು ನಿರ್ಮಿಸಿದರು ಗೊತ್ತಾ? ಅಂತೆಲ್ಲಾ ಅಲ್ಲು ಅರವಿಂದ್ ಅವರನ್ನು ಬಹಳ ಟ್ರೋಲ್ ಮಾಡುತ್ತಿದ್ದಾರೆ.