ಮುಂಬೈ: ಈಚೆಗೆ ಎಲ್ವಿಶ್ ಯಾದವ್ ಮತ್ತು ಸಹಚರರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ ಇಂದು ಯಾದವ್‌ನನ್ನು ವಶಕ್ಕೆ ಪಡೆದಿದ್ದಾರೆ ಘಟನೆಯಲ್ಲಿ ಸಾಗರ್‌ಗೆ ಗಾಯಗಳಾಗಿದೆ. ಇವರಿಬ್ಬರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಜಗಳವಾಗಿತ್ತು.
ಈ ಹಿಂದೆ ಅಕ್ರಮ ಹಾವುಗಳ ಸಾಕಾನೆ ಹಾಗೂ ರೇವ್ ಪಾರ್ಟಿಗಳಿಗೆ ಹಾವುಗಳ ವಿಷ ಪೂರೈಕೆ ಸಂಬಂಧ ಬಿಗ್ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದರು.ವನ್ಯಜೀವಿ ಸೆಕ್ಷನ್ 9,39,49,50,51 ಮತ್ತು ಐಪಿಸಿ ಸೆಕ್ಷನ್ 120ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ ನೊಯ್ಡಾದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಐದು ನಾಗರಹಾವುಗಳು, ಎರಡು ತಲೆಯ ಹಾವುಗಳು, ಒಂದು ಕೆಂಪು ಹಾವು ಮತ್ತು ಒಂದು ಹೆಬ್ಬಾವು ಸೇರಿದಂತೆ ಒಂಬತ್ತು ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. 20-25 ಮಿಲಿ ಹಾವಿನ ವಿಷವನ್ನು ಹೊಂದಿರುವ ಪ್ಲಾಸ್ಟಿಕ್ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.