ಟೈಟಲ್ ನೋಡಿ ಕನ್ಫೂಸ್ ಆಗ್ಬೇಡಿ..ಬಿಗ್ ಬಾಸ್ ಸೀಸನ್ 10ರಲ್ಲಿ ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡಬೇಡಿ..ನಾವು ಹೇಳ್ತಿರೋದು ಬೆಂಕಿಯಂತೆ ಫರ್ಪೆಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ ಬಗ್ಗೆ. ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿರುವ, ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ ಬೆಂಗಾವಲು ಪಡೆಗೆ ಢಿಕ್ಕಿ ಹೊಡೆದಿದ್ದ ಯಶ್ ಅಭಿಮಾನಿ ಸಾವು
ಬೆಂಕಿ ಬಂತೋ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ತನಿಷಾ ಗೆಲ್ಲಬೇಕು ಅಂತಾ ಕಮೆಂಟ್ ಹಾಕುತ್ತಿದ್ದಾರೆ.
ಇದನ್ನೂ ಓದಿ ಬೆಂಗಳೂರಲ್ಲಿ ಪಬ್ ಕೇಸ್: ದುಬೈನಲ್ಲಿ ದರ್ಶನ್ ಬಿಂದಾಸ್ ಫೋಟೋ ಶೂಟ್
ಮಂಗಳಗೌರಿ ಸೀರಿಯಲ್ ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ಪೆಂಟಗನ್ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ಉಂಡೆನಾಮ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ಆಟದಲ್ಲಿ ಗೆದ್ದು ಬಾ ತನಿಷಾ ಅಂತಾ ಆಕೆಯ ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ