Sandalwood Leading OnlineMedia

ಈ ವಾರ ತೆರೆಗೆ ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” 

ಪ್ರಮುಖ ಪಾತ್ರದಲ್ಲಿ ಸ್ಟೆಪ್ ಆಫ್ ಲೋಕಿ ನಟನೆಗೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ವಿಷ್ಣು ವಿ ಪ್ರಸನ್ನ.

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಪ್ರಮೋದ್ ಶೆಟ್ಟಿ ಅಭಿನಯದ ಹಾಗೂ ಸ್ಟೆಪ್ ಆಫ್ ಲೋಕಿ ಪ್ರಮುಖಪಾತ್ರದಲ್ಲಿ ನಟಿಸಿರುವ ಹಾಗೂ ವಿಷ್ಣು ವಿ ಪ್ರಸನ್ನ ನಿರ್ದೇಶನದ “ಜಲಂಧರ” ಚಿತ್ರ ಈ ವಾರ ನವೆಂಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌. ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ಜಲದ ಬಗೆಗಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಷ್ಣು ವಿ‌ ಪ್ರಸನ್ನ ಹಾಗು ಸ್ಟೆಪ್ ಅಫ್ ಲೋಕಿಯವರ ಕತೆ ಹಾಗು ಶ್ಯಾಮ್ ಸುಂದರ್ ಅವರ ಸಂಭಾಷಣೆ ಚಿತ್ರಕ್ಕಿದೆ.

ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಚಂದ್ರಮೋಹನ್ ಸಿ ಎಲ್.ರಮೇಶ್ ರಾಮಚಂದ್ರ , ಪದ್ಮನಾಭನ್ ಮಂಗುದೊಡ್ಡಿ ಅವರ ಸಹ ನಿರ್ಮಾಣವಿದೆ. ರಶ್ಮಿತ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ಹಿಹಿಸಿದ್ದಾರೆ.

ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ ಎಸ್ ಛಾಯಾಗ್ರಹಣ, ಜಿ. ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು ಡಿ ವಿ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ, ಸ್ಟೆಪ್ ಆಫ್ ಲೋಕಿ, ರುಷಿಕಾ ರಾಜ್(ಟಗರು ಸರೋಜ), ಆರೋಹಿತಾ ಗೌಡ(ಅಧ್ಯಕ್ಷ) , ಬಲ ರಾಜ್ವಾಡಿ, ರಘು ರಾಮನಕೊಪ್ಪ , ನವೀನ್ ಸಾಗರ್ , ಪ್ರತಾಪ್ ನೆನಪು , ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್, ವಿಶಾಲ್ ಪಾಟೀಲ್ ಮತ್ತು ಅಂಬು ಮುಂತಾದವರಿದ್ದಾರೆ.

 

 

 

 

Share this post:

Translate »