Sandalwood Leading OnlineMedia

ತಮಿಳು ನಟ ಶಿವಕಾರ್ತಿಕೇಯನ್ ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್!

ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ತುಂಬಾ ಪರಿಶ್ರಮಪಟ್ಟು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದವರು. ರಿಯಾಲಿಟಿ ಶೋಗಳಿಂದ ಗುರುತಿಸಿಕೊಂಡು ನಂತರ ಕಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ನಟನಾಗಿ ಬರಹಗಾರನಾಗಿ ನಿರ್ಮಾಪಕನಾಗಿ ತಮ್ಮದೇ ರೀತಿಯಲ್ಲಿ ಛಾಪೂ ಮೂಡಿಸಿದ್ದಾರೆ. ಮಾಸ್ ಆಗಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವಕಾರ್ತಿಕೇಯನ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಅಯಲಾನ್ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ.

Exclusive Photos; ಮೆಗಾಸ್ಟಾರ್ ಚಿರಂಜೀವಿ ಸೊಸೆಯ ಅದ್ಧೂರಿ ಸೀಮಂತ ಸಂಭ್ರಮ

ಆರ್ ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ ಅಯಲಾನ್ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವಾದ್ಯಂತ ಚಿತ್ರ ರಿಲೀಸ್ ಆಗಲಿದೆ. 24ಎಎಂ ಸ್ಟುಡಿಯೋಸ್ ನಡಿ ಆರ್ ಡಿ ರಾಜ ಅದ್ಧೂರಿಯಾಗಿ ನಿರ್ಮಿಸಿರುವ ಫ್ಯಾಂಟಸಿ ಎಂಟರ್ ಟೈನರ್ ಅಲಯಾನ್ ಸಿನಿಮಾವನ್ನು ಕೆಜೆಆರ್ ಸ್ಟುಡಿಯೋನ ಕೋಟಪಾಡಿ ಜೆ ರಾಜೇಶ್ ವರ್ಲ್ಡ್ ವೈಡ್ ಬಿಡುಗಡೆ ಮಾಡಲಿದೆ.

ಡಾ.ರಾಜ್‌ಕುಮಾರ್ 94ನೇ ಜನ್ಮದಿನೋತ್ಸವ: ವರನಟನ ನೆನಪಲ್ಲಿ ಕರುನಾಡು

ಹೇಳಿಕೇಳಿ ಅಲಯಾನ್ ಫ್ಯಾಂಟಿಸಿ ಎಂಟಟ್ರೈನರ್ ಸಿನಿಮಾ..ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗದೇ ಅದ್ಭುತ ಸಿಜಿ ವರ್ಕ್ ಸಿನಿಮಾದಲ್ಲಿರಲಿದೆ. ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್ಗಳನ್ನು ಹೊಂದಿರುವ ಮೊದಲ ಪೂರ್ಣಉದ್ದದ ಲೈವ್ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಅಲಯಾನ್ ಪಾತ್ರವಾಗಿದೆ. ಅದ್ಭುತ ಸಿಜಿ ಕೆಲಸ ಹಿಂದಿನ ಕೃರ್ತ ಫ್ಯಾಂಟಮ್ FX ಸಂಸ್ಥೆ. ಹಾಲಿವುಡ್ ಹಲವು ಚಿತ್ರಗಳಿಗೆ ಸಿಜೆ ವರ್ಕ್ ಮಾಡಿರುವ ಕಂಪನಿ ಈಗ ಅಲಯಾನ್ ಚಿತ್ರಕ್ಕೂ ಕೈ ಜೋಡಿಸಿದೆ. ಇನ್ನೂ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಕನ್ನಡದ ಗಿಲ್ಲಿ ಸಿನಿಮಾ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದು, ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವರು ತಾರಾಬಳಗ ಚಿತ್ರದ ಭಾಗವಾಗಿದ್ದಾರೆ. ಆಸ್ಕರ್ ವಿಜೇತ ಮ್ಯೂಸಿಕ್ ಮಾಂತ್ರಿಕ .ಆರ್.ರೆಹಮಾನ್ ಸಂಗೀತ ನಿರ್ದೇಶನ ಅಲಯಾನ್ ಚಿತ್ರಕ್ಕಿದೆ.

 

Share this post:

Related Posts

To Subscribe to our News Letter.

Translate »