Sandalwood Leading OnlineMedia

ಬಡೇ ಮಿಯಾ ಚೋಟೆ ಮಿಯಾ’ ಟೀಸರ್ ರಿಲೀಸ್…ಸೈನಿಕರಾಗಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಪ್ರತ್ಯಕ್ಷ

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಬಡೇ ಮಿಯಾ ಚೋಟೆ ಮೀಯಾ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದೇ‌ ಮೊದಲ ಬಾರಿಗೆ ಅಕ್ಕಿ ಹಾಗೂ ಟೈಗರ್ ಶ್ರಾಫ್ ಒಟ್ಟಿಗೆ ಅಭಿನಯಿಸಿದ್ದಾರೆ. ಮೈ ಜುಮ್‌ ಎನಿಸುವ ಆಕ್ಷನ್ ಸೀಕ್ವೆನ್ಸ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ಅನಾವರಣ .ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಲ ಐದು ಚಿತ್ರಗಳಿಗೆ ಚಾಲನೆ

ಆಕ್ಷನ್ ಜೊತೆಗೆ ದೇಶಭಕ್ತಿ ಅಂಶಗಳನ್ನು ಸೇರಿಸಿ ಟೀಸರ್ ಕಟ್ ಮಾಡಲಾಗಿದೆ. ಸೈನಿಕರಾಗಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅಬ್ಬರಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್‌ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ!

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್‌ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ‌ ಮೀಯಾ ಚೋಟೆ‌ ಮೀಯಾ ಚಿತ್ರ ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ,‌ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ವಶು ಭಗ್ನಾನಿ ಮತ್ತು ಪೂಜಾ ಎಂಟರ್ ಟೈನ್ಮೆಂಟ್ AAZ ಫಿಲ್ಮಂಸ್ ಸಹಯೋಗದಡಿ ಬಡೇ‌ ಮಿಯಾ ಚೋಟೆ ಮೀಯಾ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಏಪ್ರಿಲ್ 2024 ಈದ್ ಸ್ಪೆಷಲ್ ಆಗಿ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

Share this post:

Related Posts

To Subscribe to our News Letter.

Translate »