ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹೊಸಬರಾದ ವೀರ್ ಪಹಾರಿಯಾ ನಟನೆಯ ‘ಸ್ಕೈ ಫೋರ್ಸ್’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 92.90 ಕೋಟಿ ರೂ. ಗಳಿಸಿದೆ. ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಚಿತ್ರವನ್ನು ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದು, ಪ್ರೊಡಕ್ಷನ್ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಗಳಿಕೆಯ ಕುರಿತು ಮಾಹಿತಿ ನೀಡಿದೆ. ‘ಸ್ಕೈ ಫೋರ್ಸ್’ ಹೊಸ ಎತ್ತರಕ್ಕೆ ಏರುತ್ತಿದೆ, ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಪ್ರೇಕ್ಷಕರ ನೆಚ್ಚಿನ ಚಿತ್ರವಾಗಿ ಆಗಿ ಹೊರಹೊಮ್ಮುತ್ತಿದೆ! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ Sky Force’ ಎಂದು ಬರೆದಿದೆ. ಪೋಸ್ಟ್‌ನಲ್ಲಿ ಲಗತ್ತಿಸಲಾದ ಪೋಸ್ಟರ್ ಚಿತ್ರದ ದೇಶೀಯ ಗಲ್ಲಾಪೆಟ್ಟಿಗೆಯ ಸಂಗ್ರಹದ ಮಾಹಿತಿಯನ್ನು ಹಂಚಿಕೊಂಡಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ 15.30 ಕೋಟಿ ರೂಪಾಯಿ ಗಳಿಸಿದ ಚಿತ್ರವು ಎರಡನೇ ದಿನ ಚಿತ್ರವು 26.30 ಕೋಟಿ ರೂ. ಗಳಿಸಿತು ಮತ್ತು ಭಾನುವಾರದಂದು 31.60 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ. ‘ಸ್ಕೈ ಫೋರ್ಸ್’ ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 86.40 ಕೋಟಿ ರೂ. ಗಳಿಕೆ ಕಂಡಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 92.90 ಕೋಟಿ ರೂ. ಗಳಿಸಿದೆ.