ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಪ್ರಸಿದ್ಧ ಕಾಫಿ ವಿತ್ ಕರಣ್ ಶೋ ಮತ್ತೆ ಪ್ರಸಾರವಾಗುತ್ತಿದೆ. ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ.
ಈಗಾಗಲೇ ಕಾಫಿ ವಿತ್ ಕರಣ್ ಶೋ ಪ್ರಾರಂಭವಾಗಿದ್ದು ಇದರಲ್ಲಿ ಸಮಂತಾ ಎಪಿಸೋಡ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಸಮಂತಾ ಮೊದಲ ಬಾರಿಗೆ ಕರಣ್ ಜೋಹರ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಸಮಂತಾ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಸದ್ಯ ಸಮಂತಾ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಪಟ್ಟೆ ವೈರಲ್ ಆಗಿದೆ.
ಕರಣ್ ಜೋಹರ್, ಸಮಂತಾ ಬಳಿ ತನ್ನ ಮದುವೆ ಬಗ್ಗೆ ಕೇಳುತ್ತಿದ್ದಂತೆ ಮದ್ಯ ಪ್ರವೇಶಿಸಿದ ಸ್ಯಾಮ್ ‘ಅಸಂತೋಷದ ಮದುವೆಗೆ ನೀವೆ ಕಾರಣ’ ಎಂದು ಅರೋಪ ಮಾಡಿದರು. ಬಳಿಕ ಕರಣ್, ಯಾವ ಇಬ್ಬರು ಬಾಲಿವುಡ್ ಸ್ಟಾರ್ ಜೊತೆ ಡಾನ್ಸ್ ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಸಮಂತಾ ರಣ್ವೀರ್ ಸಿಂಗ್ ಅಂಡ್ ರಣ್ವೀರ್ ಸಿಂಗ್ ಎಂದು ಹೇಳಿದ್ದಾರೆ.
https://www.instagram.com/p/CgLp2IyI8Az/
ಸಮಂತಾ, ಕರಣ್ ಶೋಗೆ ರೆಡ್ ಮತ್ತು ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದರು. ಕರಣ್ ಶೋಗೆ ಎಂಟ್ರಿ ಕೊಡುತ್ತಿದ್ದಂತೆ ಅಕ್ಷಯ್ ಕುಮಾರ್ ಸೌತ್ ಸ್ಟಾರ್ ಸಮಂತಾ ಅವರನ್ನು ಎತ್ತಿಕೊಂಡೇ ಬಂದಿದ್ದಾರೆ. ಆಗ ಕರಣ್ ಜೋಹರ್ ನಂಬರ್ ಒನ್ ನಟಿ, ನಂಬರ್ ಒನ್ ಸ್ಟಾರ್ ತೋಳಲ್ಲಿ ಎಂದು ಹೇಳಿದ್ದಾರೆ. . ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೋಮೋ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಟ್ಟು ಹಾಕಿರುವ ಸ್ಯಾಮ್ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.