ನಾವು ಕಾಮಿಡಿ ಬಗ್ಗೆ ಯಾರಿಗೆ ಚೆನ್ನಾಗಿ ಗೊತ್ತಿದೆಯೋ ಅವರ ಜೊತೆ ಕೆಲಸ ಮಾಡಿದ್ರೆ ತುಂಬಾ ಕಲಿತುಕೊಳ್ಳಬಹುದು.ನಾನು ಕೂಡ ಅಕ್ಷಯ್ ಕುಮಾರ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಅಂತಾ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಹೇಳಿದ್ದಾರೆ.
ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿದ್ದಾರೆ. ಇದೀಗ ಜ್ಯಾಕ್ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಕ್ಷಯ್ ನನಗೆ ಹಾಸ್ಯ ಮಾಡೋದು ಹೇಗೆ? ಅದು ಹೇಗಿರಬೇಕು ಅನ್ನೋದನ್ನು ತಿಳಿಸಿಕೊಟ್ಟಿದ್ದಾರೆ ಅಂತಾ ಅವರು ಹೇಳಿದ್ದಾರೆ.
ಇದನ್ನೂ ಓದಿ ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ “X&Y” ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.
ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ಅಭಿಷೇಕ್ ಬಚ್ಚನ್,ರಿತೇಶ್ ದೇಶ್ ಮುಖ್,ಲಿಸಾ ಹೆಡನ್ , ನರ್ಗೀಸ್ ಫಕ್ರಿ, ಲೀಸಾ ಹೆಡನ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ರೇಮೋ ಡಿಸೋಜಾ ನಿರ್ದೇಶಿಸಿದ್ದು,ಸಾಜಿದ್ ಹಾಗೂ ಫರ್ಹದ್ ನಿರ್ಮಾಣ ಮಾಡಿದ್ದಾರೆ.