Sandalwood Leading OnlineMedia

ನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರದಲ್ಲಿ ಮತ್ತೊಬ್ಬ ಪ್ರತಿಭಾನ್ವಿತ ನಟಿ…ವನಜಾ ಆಗಿ ಮಿಂಚಲಿದ್ದಾರೆ ಶ್ವೇತಾ ಶ್ರೀನಿವಾಸ್

ನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರದಲ್ಲಿ ಮತ್ತೊಬ್ಬ ಪ್ರತಿಭಾನ್ವಿತ ನಟಿ…ವನಜಾ ಆಗಿ ಮಿಂಚಲಿದ್ದಾರೆ ಶ್ವೇತಾ ಶ್ರೀನಿವಾಸ್

ಕನ್ನಡ ಚಿತ್ರರಂಗಕ್ಕೆ ಸದಾಭಿರುಚಿ ಸಿನಿಮಾಗಳನ್ನು ನೀಡುತ್ತಿರುವ ನಿರ್ದೇಶಕ ನಾಗರಾಜ್ ಸೋಮಯಾಜಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಅಕಟಕಟ ಸಿನಿಮಾ ಅಂಗಳಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಟಿಯ ಆಗಮನವಾಗಿದೆ. ಕೆಲ ದಿನಗಳ ಹಿಂದಷ್ಟೇ ನಾಯಕಿ ಚೈತ್ರಾ ಆಚಾರ್ ಪರಿಚಯಿಸಿದ್ದ ಚಿತ್ರತಂಡ ಈಗ ನಟಿ ಹಾಗೂ ರಂಗಭೂಮಿ ಕಲಾವಿದೆಯೂ ಆಗಿರುವ ಶ್ವೇತಾ ಶ್ರೀನಿವಾಸ್ ಪಾತ್ರದ ಬಗ್ಗೆ ಮಾಹಿತಿ ನೀಡಿದೆ.

ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಲವು ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ಪಡೆದಿರುವ ಶ್ವೇತಾ ಶ್ರೀನಿವಾಸ್,ಪಂಚರಂಗಿ, ಟೋನಿ, ದ್ಯಾವ್ರೇ, ಬೆಂಕಿಪಟ್ಟಣ, ಕೃಷ್ಣಲೀಲಾ, ಸಂತೆ, ದೊಡ್ಮನೆ ಹುಡ್ಗ, ವೆನಿಲಾ, ನಾತಿಚರಾಮಿ, ಪಬ್ಲಿಕ್ ಟಾಯ್ಲೆಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಈಗ ಅಕಟಕಟ ಸಿನಿಮಾದಲ್ಲಿ ವನಜಾ ಎಂಬ ಪಾತ್ರದಲ್ಲಿ ನಟಿಸ್ತಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಹೆಚ್ಚಾಗಿ ಗುಟ್ಟುಬಿಟ್ಟು ಕೊಡದ ಶ್ವೇತಾ, ಪ್ರತಿ ಸಿನಿಮಾದಲ್ಲಿಯೂ ನಾನು ವಿಶೇಷವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇದೊಂದು ಚಾಲೆಂಜಿಂಗ್ ಪಾತ್ರ. ಅಪರೂಪದ ಕಥೆಯ ನೆಲ ಮೂಲದ ಪಾತ್ರವಾಗಿದ್ದು, ನನ್ನನು ನಾನು ಕಂಡುಕೊಳ್ಳಲು ಈ ಪಾತ್ರ ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಈ ಪಾತ್ರ ಕನೆಕ್ಟ್ ಆಗುತ್ತದೆ ಎಂದರು.

ಸಂಚಾರಿ ವಿಜಯ್‌ ನಟನೆಯ ಕೊನೆಯ ಸಿನಿಮಾ ‘ಪುಕ್ಸಟ್ಟೆ ಲೈಫು’ ಚಿತ್ರ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್‌ ಸೋಮಯಾಜಿ ಮೂಲತಃ ಫೋಟೊಗ್ರಾಫರ್‌. ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದ ಇವರು “ದಿ ಬೆಸ್ಟ್ ಆಕ್ಟರ್” ಎನ್ನುವ ಮೈಕ್ರೋ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಅಕಟಕಟ ಸಿನಿಮಾಗೆ ಕಥೆ ಬರೆದು, ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ.

Share this post:

Related Posts

To Subscribe to our News Letter.

Translate »