Sandalwood Leading OnlineMedia

ಚೆನ್ನೈ ಪ್ರವಾಹಕ್ಕೆ ಸಿಲುಕಿದ ಅಮೀರ್ ಖಾನ್, ವಿಷ್ಣು ವಿಶಾಲ್, ಏರಿಯಾ ಜನರನ್ನು ರಕ್ಷಿಸಿ ಹೀರೋ ಆದ ಅಜಿತ್

ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿಷ್ಣು ವಿಶಾಲ್ ಸಂಕಷ್ಟಕ್ಕೀಡಾಗಿದ್ದರು.ಚೆನ್ನೈನ ವಿಷ್ಣು ವಿಶಾಲ್ ಮನೆಗೆ ಬಂದಿದ್ದ ಅಮೀರ್ ಖಾನ್ ಪ್ರವಾಹದಿಂದಾಗಿ ಮನೆಯಿಂದ ಹೊರಹೋಗಲಾಗದ ಸ್ಥಿತಿಯಲ್ಲಿದ್ದರು. ಬಳಿಕ ಇಬ್ಬರೂ ಸ್ಟಾರ್ ‍ಗಳನ್ನೂ ತೆಪ್ಪದ ಮೂಲಕ ರಕ್ಷಣಾ ಸಿಬ್ಬಂದಿ ರಕ್ಷಿಸಿದರು.

ಆದರೆ ಇವರಿಬ್ಬರನ್ನು ರಕ್ಷಿಸಲು ನೆರವಾಗಿದ್ದು ನಟ ಅಜಿತ್ ಕುಮಾರ್. ಇಬ್ಬರು ಸ್ಟಾರ್ ನಟರು ಮಾತ್ರವಲ್ಲ, ಅವರ ಏರಿಯಾದಲ್ಲಿ ಸಿಲುಕಿಕೊಂಡಿದ್ದ ಅಷ್ಟೂ ಮಂದಿಯನ್ನು ರಕ್ಷಿಸಲು ಅಜಿತ್ ಸಹಾಯ ಮಾಡಿದ್ದಾರಂತೆ. ಇದನ್ನು ಸ್ವತಃ ವಿಷ್ಣು ವಿಶಾಲ್ ಹೇಳಿಕೊಂಡಿದ್ದಾರೆ.

ನಮ್ಮ ಸ್ಥಿತಿ ನಮ್ಮ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಅಜಿತ್ ಗೆ ತಿಳಿಯಿತು. ಅವರು ತಕ್ಷಣವೇ ನಮಗೆ ಮನೆಯಿಂದ ಹೊರಬರಲು ಬೋಟ್ ಅರೇಂಜ್ ಮಾಡಿಕೊಟ್ಟರು. ಕೇವಲ ನಮ್ಮಿಬ್ಬರಿಗೆ ಮಾತ್ರವಲ್ಲ. ನಮ್ಮ ಅಕ್ಕಪಕ್ಕದವರ ರಕ್ಷಣೆಗೂ ಅಜಿತ್ ಸರ್ ಸಹಾಯ ಮಾಡಿದರು. ಅವರಿಗೆ ದೊಡ್ಡ ಥ್ಯಾಂಕ್ಸ್ ಎಂದಿದ್ದಾರೆ ವಿಷ್ಣು.

Share this post:

Translate »