Sandalwood Leading OnlineMedia

ರಾಧಿಕಾ ಕುಮಾರಸ್ವಾಮಿ ಅಭಿನಯದ “ಅಜಾಗ್ರತ” ಚಿತ್ರ ನಿರ್ದೇಶಕನಿಗೆ ರಿಲೀಸ್‌ಗೂ ಮುನ್ನವೇ ಬಂಪರ್!

ಯಾವುದೇ ಚಿತ್ರವಾದರೂ ಸರಿ. ಮೊದಲು ಬಂಡಾವಳ ಹಾಕಿದ ನಿರ್ಮಾಪಕರಿಗೆ ಆ ಸಿನಿಮಾ ಮೆಚ್ಚುಗೆಯಾಗಬೇಕು. ನಿರ್ಮಾಪಕರಿಗೆ ಸಿನಿಮಾ ಇಷ್ಟವಾದಾರೆ ನಿರ್ದೇಶಕ ಅರ್ಧ ಗೆದ್ದ ಹಾಗೆ. ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸಿರುವ, ರವಿರಾಜ್ ನಿರ್ಮಾಣದ ಹಾಗೂ ಎಂ.ಶಶಿಧರ್ ನಿರ್ದೇಶನದ “ಅಜಾಗ್ರತ” ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿದು ಚಿತ್ರದ ರಫ್ ಕಾಪಿ ಬಂದಿದೆ. ‘ಅಜಾಗ್ರತ” ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕರಿಗೆ ಚಿತ್ರ ತುಂಬಾ ಇಷ್ಟವಾಗಿದೆಯಂತೆ. ಈ ಸಂದರ್ಭದಲ್ಲಿ ನಿರ್ಮಾಪಕ ರವಿರಾಜ್, ನಿರ್ದೇಶಕ ಶಶಿಧರ್ ಅವರಿಗೆ ದುಬಾರಿ ಕಾರು ನೀಡುವ ಮೂಲಕ ಚಿತ್ರ ಉತ್ತಮವಾಗಿ ಮೂಡಿಬಂದಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ‌.

 

ಶೂಟಿಂಗ್ ಮುಗಿಸಿದ ‘ಒನ್ ಅಂಡ್ ಹಾಫ್’…ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಉಡುಗೊರೆ

“ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ, ಅದಕ್ಕೂ ಹೆಚ್ಚಾಗಿಯೇ ಚಿತ್ರವನ್ನು ಬಹಳ ಚೆನ್ನಾಗಿ ಮಾಡಿ ಮುಗಿಸಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರ ನೋಡಿ ನನಗೆ ತುಂಬಾ ಖುಷಿಯಾಗಿದೆ. ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿರುವ ನಿರ್ದೇಶಕರಿಗೆ ಉಡುಗೊರೆ ನೀಡುವ ಮನಸ್ಸಾಯಿತು. ಹಾಗಾಗಿ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡುತ್ತೀದ್ದೇನೆ” ಎಂದು ನಿರ್ಮಾಪಕ ರವಿರಾಜ್ ತಿಳಿಸಿದ್ದಾರೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ನಂತರ ನಿರ್ದೇಶಕರಿಗೆ ಉಡುಗೊರೆ ನೀಡುವ ನಿರ್ಮಾಪಕರಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ನಿರ್ದೇಶಕರ ಕಾರ್ಯವನ್ನು ಮೆಚ್ಚಿ, ಕಾರನ್ನು ಉಡುಗೊರೆ ನೀಡಿರುವ ನಿರ್ಮಾಪಕ ರವಿರಾಜ್ ಅವರ ಗುಣ ನಿಜಕ್ಕೂ ಶ್ಲಾಘನೀಯ.

 

ಇಂಡೋ-ಪಾಕ್ ಕದನ ಹಿನ್ನೆಲೆ ಕುರಿತಾದ ಸಿನಿಮಾ `ಸಿಗ್ನಲ್ ಮ್ಯಾನ್ 1971 ‘ ಆಗಸ್ಟ್ ನಲ್ಲಿ ತೆರೆಗೆ

ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಹೆಸರಾಂತ ನಟ ಬಾಬಿ ಸಿಂಹ ಸಹ ಈಗ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

 

 

Share this post:

Translate »