ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ಕೊನೆಗೂ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ಹಿಂದೆ `ರೋಬೋ’ ಚಿತ್ರದಲ್ಲಿ ರಜನಿಕಾಂತ್‌ಗೆ ಜೋಡಿಯಾಗಿ ನಟಿಸಿದ್ದ ಐಶ್ವರ್ಯ ರೈ ಮತ್ತೆ ಈ ಚಿತ್ರದ ಮೂಲಕ ದಕ್ಷಿಣದ ಸಿನಿಮಾದತ್ತ ಮುಖ ಮಾಡಿದ್ದಾರೆ.
ಐಶ್ವರ್ಯಾ ರೈ ಮತ್ತೆ ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದು, ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ.ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ ಆಗಿದ್ದಾರೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ರಜನಿಕಾಂತ್ ಜತೆಗೆ ಅನ್ನೋದು ವಿಶೇಷ.
ರಜನಿಕಾಂತ್ ಅವರ 169ನೇ ಸಿನಿಮಾ ನೆಲ್ಸನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಅನಿರುದ್ಧ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಜುಲೈ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಐಶ್ವರ್ಯ ರೈ ಮತ್ತೆ ಸೌತ್ ಸಿನಿಮಾಗೆ ಮರು ಪ್ರವೇಶ ಮಾಡಿರುವುದು ಅವರ ಅಭಿಮಾನಿಗಳಿಗೂ ಸಾಕಷ್ಟು ಖುಷಿ ತಂದಿದೆ.