ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಐಶು ವಿತ್ ಮಾದೇಶ’ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಬಾಲಕೃಷ್ಣ ಬರಗೂರು ನಿರ್ಮಾಪಕರಾಗಿದ್ದು, ಇವರೊಂದಿಗೆ ಸ್ನೇಹಿತರು ಪಾಲುದಾರರಾಗಿದ್ದಾರೆ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಬಿಜಾಪುರ ಮೂಲದ ವಿಶಾಲ್‌ಕೃಷ್ಣ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶ್ರಯಾರಾಮ್ ನಾಯಕಿ. ಇವರೊಂದಿಗೆ ಕುರಿಸುನಿಲ್, ಅನ್ನಪೂರ್ಣ ಮುಂತಾದವರು ನಟಿಸಿದ್ದಾರೆ.
ಹೊಸ ಕಥೆಯೊಂದಿಗೆ ಬರಲಿದೆ ಶಂಕರ್‌ನಾಗ್ ಅಭಿನಯದ ಟೈಟಲ್ ಇರುವ ಚಿತ್ರ
ಪ್ರೀತಿಯ ಭಾವನೆಗಳಿಗೆ ಅಂತ್ಯವಿಲ್ಲ. ಅಂತಹ ಭಾವನೆಗಳನ್ನು ಹೊತ್ತು ಸಾಗೊ ಮನಸ್ಸಿಗೆ ನೆಮ್ಮದಿ ಇಲ್ಲವೆಂದು ಅಡಿಬರಹದಲ್ಲಿ ಇರಲಿದೆ. ’ಚೆಲುವಿನ ಚಿತ್ತಾರ’ ಚಿತ್ರದ ಮುಖ್ಯ ಪಾತ್ರದ ಹೆಸರುಗಳು ಇದೇ ಟೈಟಲ್ ಆಗಿತ್ತು. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ಕಥೆಗೆ ಸೂಕ್ತ ಅನಿಸಿದ್ದರಿಂದ ಇದನ್ನೆ ಇಡಲಾಗಿದೆ. ಇದೇ ಹೆಸರನ್ನು ಯಾತಕ್ಕಾಗಿ ಇಡಲಾಗಿದೆ ಎಂಬುದು ಚಿತ್ರ ನೋಡಿದರೆ ತಿಳಿಯುತ್ತದಂತೆ. ಅಪ್ಪನ ಆಸೆ ಈಡೇರಿಸಲು ಮಗನಾದವನು ಒಂದು ರಿಸ್ಕ್‌ಗೆ ಕೈ ಹಾಕುತ್ತಾನೆ. ಅದು ಏನು? ರಿಸ್ಕ್‌ನಿಂದ ಅವನ ಜೀವನ ಏನಾಗುತ್ತೆ? ಚಿತ್ರಮಂದಿರದಿಂದ ಹೊರಬಂದಾಗ ಈ ತರಹದ ಪ್ರೀತಿ ಇರುತ್ತದಾ ಎಂಬ ಪ್ರಶ್ನೆ ನೋಡುಗರನ್ನು ಕಾಡುತ್ತದೆ. ಪ್ರೀತಿಯ ಅಂಶಗಳನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾದ ಕ್ಲೈಮಾಕ್ಸ್ ಶಕ್ತಿ ಎಂಬುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
‘ಕಂಬ್ಳಿಹುಳ’ ಸಿನಿಮಾ ನೋಡಿ ನಿರ್ದೇಶಕ ಸಿಂಪಲ್ ಸುನಿ ಫಿಧಾ- ಪ್ರೇಕ್ಷಕರಿಗೆ ಹೊಸ ಆಫರ್ ಘೋಷಣೆ
ಚಿತ್ರತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ ಎಲ್ಲರೂ ಸಾಲ ಮಾಡಿ ಸಿನಿಮಾ ಮಾಡುತ್ತಾರೆ. ಆದರೆ ಪೂರ್ಣ ಸಾಲ ಮಾಡಿ ನಿರ್ಮಾಣ ಮಾಡುವುದು ದಡ್ಡತನ. ಇಲ್ಲಿರುವ ತಂಡವು ಹುರುಪಿನಿಂದ ಸಾಹಸಕ್ಕೆ ಕೈ ಹಾಕಿದ್ದಾರೆ. ಇವರ ಶ್ರಮಕ್ಕೆ ಯಶಸ್ಸು ಸಿಗಲೆಂದು ಹೇಳಿದರು. ಗೌತಮ್‌ಯಾನ ಸಾಹಿತ್ಯದ ಮೂರು ಹಾಡುಗಳಿಗೆ ಕಾರ್ತಿಕ್‌ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಅಭಿ-ಮಂಜನಾಥ, ಸಂಕಲನ ಅಯುರ್‌ಸ್ವಾಮಿ, ಸಾಹಸ ವಿಕ್ರಮ್, ನೃತ್ಯ ಆಕಾಶ್ ಅವರದಾಗಿದೆ. ಎ2 ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಬೆಂಗಳೂರು, ತುಮಕೂರು ಕಡೆಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆಗೊಂಡು ’ಯು’ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಡಿಸೆಂಬರ್‌ದಲ್ಲಿ ತೆರೆಕಾಣುವ ಸಾಧ್ಯತೆ ಇದೆ.