ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದಾ ಪ್ಯಾಟೆಗೆ ಬಂದ ಕಾರ್ಯಕ್ರಮಕ್ಕೆ ಕಾಡಿನ ಹುಡುಗ ರಾಜೇಶ್ ಸ್ಪರ್ಧಿಸಿದ್ದ. ಆತನಿಗೆ ಜೋಡಿಯಾಗಿ ನಟಿ ಐಶ್ವರ್ಯ ಕಾಣಿಸಿಕೊಂಡಿದ್ದರು. ಕೊನೆಯಲ್ಲಿ ಈ ಜೋಡಿ ವಿನ್ನರ್ ಟ್ರೋಫಿ ಪಡೆದರು. ಖುಷಿಯಾಗಿ ಯಶಸ್ಸಿನಲ್ಲಿ ತೇಲುತ್ತಿದ್ದ ರಾಜೇಶ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಐಶ್ವರ್ಯ ಎಂದು ಅನೇಕರು ಮಾತನಾಡಿಕೊಂಡಿದ್ದರು. ಈಗಲೂ ಆ ಆರೋಪಕ್ಕೇನು ಕೊನೆ ಸಿಕ್ಕಿಲ್ಲ.
ಈ ಬಗ್ಗೆ ಈಗ ಐಶ್ವರ್ಯಾ ಮಾತನಾಡಿದ್ದು, ರಾಜೇಶ್ ತೀರಿಕೊಂಡ ಸಂದರ್ಭದಲ್ಲಿ ಮಾಧ್ಯಮದಿಂದ ನನಗೆ ಕರೆ ಬರುತ್ತೆ ರಾಜೇಶಾ ಬಿದ್ದು ಹೋಗಿದ್ದಾನೆ ಎಂದು. ನೋಡೋಕೆ ಸಣ್ಣ ಇದ್ರೂ ತುಂಬಾ ಗಟ್ಟಿಯಿದ್ದ. ಸಾಕಷ್ಟು ಜನ ಕರೆ ಮಾಡಿ ತೀರಿಕೊಂಡಿದ್ದಾನೆ ಎಂದು ಹೇಳುತ್ತಾರೆ ನಿಜ ಅಥವಾ ಸುಳ್ಳು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡೆ.
ಹಾಸ್ಪಿಟಲ್ನಲ್ಲಿ ರಾಜೇಶ್ ವಿಡಿಯೋ ನೋಡಿ ಶಾಕ್ ಆಯ್ತು, ನಮ್ಮ ಸಿನಿಮಾ ನಿರ್ದೇಶಕರ ರಾಜೇಶ್ ಊರಿಗೆ ಹೋಗಿದ್ದೆ. ಟ್ರೋಫಿ ಗೆದ್ದ ಕ್ಷಣ ಬಂದಿದ್ದ ಜನಕ್ಕಿಂತ ಡಬಲ್ ಜನ ಬಂದಿದ್ದರು’ ಎಂದು ಕನ್ನಡ ಯುಟ್ಯೂಬ್ ಚಾನೆಲ್ವೊಂದರಲ್ಲಿ ಮಾತನಾಡಿದ್ದಾರೆ. ಸಾಕಷ್ಟು ಜನರು ನನಗೆ ಕೇಳುತ್ತಾರೆ ರಾಜೇಶ್ ಸೂಸೈಡ್ ಮಾಡಿಕೊಂಡಿದ್ದಕ್ಕೆ ನಾನು ಕಾರಣ ಅಲ್ಲ.
ಬಳ್ಳೆಹಾಡಿ ಕಾಡಿನಿಂದ ಮೈಸೂರಿನಲ್ಲಿರುವ ಮನೆಗೆ ಶಿಫ್ಟ್ ಆಗಿದ್ದರು ಆಗಾಗ ನಾನು ಸಾಯುವೆ ಎಂದು ಪೋಷಕರಿಗೆ ಹೆದರಿಸುತ್ತಿದ್ದನಂತೆ. ಅವತ್ತು ಕೂಡ ಹೆದರಿಸಲು ಹೋಗಿದ್ದಾನೆ ಅಲ್ಲಿಂದ ಬಿದ್ದಿದ್ದರೂ ಕೈ ಕಾಲು ಮುರಿಯುತ್ತಿರಲಿಲ್ಲ ಆದರೆ ಹಿಂದಿನ ದಿನ ಮನೆ ಮಾಲೀಕರು ಕಾಂಪೌಂಡ್ಗೆ ಶಾರ್ಪಾಗಿರುವ ಗ್ರಿಲ್ ಹಾಕಿಸಿದ್ದಾರೆ ಅದರ ಮೇಲೆ ಬಿದ್ದ ತಕ್ಷಣ ಆ ಕಂಬಿ ಅವನ ಹೊಟ್ಟೆಗೆ ಚುಚ್ಚಿ ಅಗಲಿರುವುದು.
ರಾಜೇಶ್ ಸಾವಿಗೆ ಯಾರೂ ಕಾರಣವಲ್ಲ. ನನಗೆ ತುಂಬಾ ಜನ ಪ್ರೀತಿ ಕೊಡುತ್ತಾರೆ ಅದಕ್ಕೆ ಚಿರಋಣಿಯಾಗಿರುತ್ತೀನಿ ಆದರೆ ಅನೇಕರು ರಾಜೇಶ್ ಸಾವಿಗೆ ನನ್ನ ಹೆಸರು ಎಳೆಯುತ್ತಾರೆ ಎಂದು ಐಶ್ವರ್ಯ ಹೇಳಿದ್ದಾರೆ.