ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಾಯಕನ ಪಾದರ್ಪಣೆ . ಕಬೀರ್ ಸೋಮಯಜಿ ಕೆನಡಾದ ಟೊರೆಂಟೋ ಸ್ಕೂಲ್ಗ ಗರಡಿಯಲ್ಲಿ ಚಲನಚಿತ್ರ ಮತ್ತು ನಟನೆಯಲ್ಲಿ ಪದವಿ ಪಡೆದು, ಮುಂಬೈನ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಉನ್ನತ ವ್ಯಾಸಂಗ ಮಾಡಿ ಕಬೀರ್ ಸೋಮಯಜಿ ತನ್ನ ಮೊದಲನೆಯ ಹೆಜ್ಜೆ ಕನ್ನಡ ಚಿತ್ರರಂಗದಲ್ಲಿ ಇಡುತ್ತಿದ್ದಾರೆ. ಕಬೀರ್ ಸೋಮಯಜಿ ಮೂಲತಹ ಕನ್ನಡದ ವರಾಗಿದ್ದು ಮುಂಬೈನಲ್ಲಿ ನೆಲೆಸಿದ್ದಾರೆ . ಸುಮಾರು ಚಿಕ್ಕ ಚಿಕ್ಕ ಜಾಹಿರಾತಿನಲ್ಲಿ ಕಿರುತೆರೆಯಮೇಲೆ ಮತ್ತು ಸಾಮಾಜಿಕ ತಾಣದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಕಬೀರ್ ಸೋಮಯಾಜಿ ವೆಂಕಟ್ಆ ಭರದ್ವಾಜ ನಡೆಸಿದ ಆಡಿಷನ್ನ ಪಾಲ್ಗೊಂಡು ಆಹತ ಚಿತ್ರಕ್ಕೆ ಆಯ್ಕೆಯಾದ ನಾಯಕ ನಟ. ಚಿತ್ರದ ನಾಯಕಿಯಾಗಿ ಪ್ರಿಯ ಹೆಗಡೆ ಆಹತ ಚಿತ್ರದಲ್ಲಿ ಟಾಮ್ಬಾಯ್ ಕ್ಯಾರೆಕ್ಟರ್ ನಲ್ಲಿ, ಆಕ್ಷನ್ ಮತ್ತ್ತು ಕಿಲ್ಲಿಂಗ್ ದೃಶ್ಯಗಳಲ್ಲಿ ನಟಿಸಿದ್ದಾರೆ.
`ರಮಾಸ್ ಮೀಡಿಯಾ ಕ್ರಿಯೇಷನ್ಸ್’ : ಕನ್ನಡಕ್ಕೊಂದು ಅದ್ದೂರಿ ನಿರ‍್ಮಾಣ ಸಂಸ್ಥೆ
ಈಗಾಗಲೇ ಪ್ರಿಯ ಹೆಗ್ಡೆ ಸುಮಾರು ೨ ಕನ್ನಡ ಚಿತ್ರ ಹಾಗು ೨ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆಆಹತ ಚಿತ್ರ ತೆರೆಗೆ ಸಿದ್ಧವಿದ್ದು ಅಕ್ಟೋಬರಿನಲ್ಲಿ ತೆರೆಯ ಮೇಲೆ ಬರಲು ಎಲ್ಲಾ ಸಿದ್ಧತೆಗಳು ನಡೆದಿವೆ ಚಿತ್ರಕ್ಕೆ ವೆಂಕಟ್ ಭಾರದ್ವಾಜ್ ಅವರ ಚಿತ್ರಕಥೆ – ನಿರ್ದೇಶನದ, ಬಾಂಬೆ ಪ್ರಕಾಶ್ ರವರ ನಿರ್ಮಾಣ. ಬಾಂಬೆ ಪ್ರಕಾಶ್ ಮೂಲತಃ ಕನ್ನಡಿಗ ಸುಮಾರು ೩೦ ವರ್ಷಗಳಿಂದ ವಿದೇಶದಲ್ಲಿ ಹೋಟೆಲ್ ವ್ಯಾಪಾರ ನಡೆಸುತ್ತಿದ್ದಾರೆ , ಕನ್ನಡ ಚಿತ್ರದ ಮೇಲಿರುವ ಪ್ರೇಮ ಅವರನ್ನು ಚಿತ್ರನಿರ್ಮಾಣ ಮಾಡಲು ಪ್ರೇರಣೆ. ಆಹತ ತಮ್ಮ ಚೊಚ್ಚಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ
ಅನಿರೀಕ್ಷಿತ ತಿರುವುಗಳನ್ನು ಹೊತ್ತ ಕಾಡುವ ಪ್ರೇಮ ಕಥೆ!
ಆಹತ ಚಿತ್ರವು ಕ್ರೈಮ್ ಥ್ರಿಲ್ಲರ್ ಕಥಾಹಂದರ ವಾಗಿದ್ದು ಕುತೂಹಲಭರಿತವಾಗಿ ಚಿತ್ರಕಥೆಯೊಂದಿಗೆ ನಿಮ್ಮನ್ನು ರಂಜಿಸಲು ಬರುತ್ತಿದೆ. ಸಾಕಷ್ಟು ಮುಖ್ಯ ನಟರನ್ನು ಒಳಗೊಂಡಿದೆ. ತಾರಾಗಣದಲ್ಲಿ ದಿನೇಶ್ ಮಂಗಳೂರು ,ರಮೇಶ್ ಪಂಡಿತ್, ಉಗ್ರಂ ಮಂಜು, ಗೋಪಿಕೃಷ್ಣ ದೇಶಪಾಂಡೆ, ಬಲರಾಜ ವಾಡಿ, ನಾಗೇಂದ್ರ ಅರಸ್ ,ಪಿಡಿ ಸತಿಷ್ ಚಂದ್ರ , ಲಕ್ಷ್ಮಣ್ದ ಶಿವಶಂಕರ್ , ಹಾಗು ಇನ್ನು ಹೆಸರಾಂತ ನಟರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.ಕಥೆ-ಚಿತ್ರಕಥೆ-ನಿರ್ದೇಶನ ವೆಂಕಟ್ ಭಾರದ್ವಾಜ್, ಸಂಗೀತ ರಿತ್ವಿಕ್ ಮುರುಳಿಧರ್ ,ಸಂಕಲನ ಚಂದನ ಛಾಯಾಗ್ರಹಣ ಪ್ರಮೋದ್ ಭಾರತೀಯ ಮತ್ತು ಕಲೆ ಸಿದ್ದಾರ್ಥ್ ಮತ್ತು ತಂಡ